ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಒಂದು ತಂಗಾಳಿಯೇ……

ಒಂದು ಪಲ್ಲವಿಯೇ
ಹಾಗೆ ಉಳಿದು ಬಿಡು
ಮಣ್ಣ ಹಣತೆಯಾಗಿ
ಬೆಳಕ ಸೂಸಿ ಬಿಡು……
ಮಣ್ಣಲ್ಲಿ ಚಿಗುರಾಗಿ
ಬೆಳೆವ ಹಸಿರಿಗೆ
ಗುರುತಾಗಿ ನೀ
ಉಳಿದು ಬಿಡು……..
ಒಂದು ತಂಗಾಳಿಯೇ
ಹಾಗೆ ಬೀಸಿ ಬಿಡು
ಮುಗಿಲು ಮುಟ್ಟುವಲ್ಲಿ
ಕನಸ ಕಟ್ಟಿ ಕೊಡು……
ಗಾಳಿಯಲ್ಲಿ ತೇಲಿ
ಜೀವವಾಗಿ ಮತ್ತೆ
ಮಗುವಾಗಿ ನೀ
ಒಲವಲ್ಲಿ ತೇಲಿಬಿಡು……
ಒಂದು ಚಿತ್ತಾರವೇ
ಚುಕ್ಕಿ ತಾರೆಗಳ
ಮಲ್ಲಿಗೆಯ ನಗುವ
ಒಮ್ಮೆ ಚೆಲ್ಲಿ ಬಿಡು……..
ನಾಗರಾಜ ಬಿ.ನಾಯ್ಕ

ನವಿರಾದ ಕವನ.
ರಾಮಮೂರ್ತಿ ನಾಯಕ.