ಬಡಿಗೇರ ಮೌನೇಶ್ ಅವರ ಕವಿತೆ-ಒಲವಿನ ಹಾದಿ

ನೀನು ಒಲವಿನೂರಿನ
ಸಿರಿಯ ತೋರಲು
ಕೈಹಿಡಿದು ಹೊರಟೆ
ನಾನು ಹಿಂಬಾಲಿಸಿದೆ

ಕತ್ತಲೆ ಸರಿದು
ಬೆಳಕು ಮೂಡುತ್ತಿತ್ತು
ನಡೆದಂತೆ…
ಕಣ್ಣು ಕೋರೈಸುವ ಹೊಳಪು
ನಡೆವ ಹೆಜ್ಜೆಗಳಲ್ಲಿ
ಆಯಾಸ ಕಳೆದು
ಹೊಸಕಸುವು ತೋರುತ್ತಿತ್ತು

ನಾವು ನಡೆದ ದಾರಿ ದೂರ
ಖಂಡಿತಾ
ನೆನಪಾಗಿ ಉಳಿಯುತ್ತದೆ
ಕಾಡುತ್ತದೆ ಮತ್ತೆ ಮತ್ತೆ!

ನನ್ನ ಮೌನಕೆ ಮಾತಾಗಿ
ಮಾತುಗಳಿಗೆ ದನಿಯಾಗಿ
ಸುಂದರ ಹಾಡಾದ ಪರಿ

ಒಣಜಗಳ,ಹುಸಿಮುನಿಸು
ಆ ಮೋಹಕ ನೋಟ
ಕಣ್ಣಿನಲ್ಲಿ ಕಡಲಿನಾಳದಷ್ಟು
ಪ್ರೀತಿಹೊತ್ತ
ಆ ಸುಂದರ ಮುಖ
ಎಲ್ಲವೂ ಕಾಡುತ್ತವೆ

ಒಲವು ನಡೆಸಿದ ಈ ಹಾದಿ
ಖಂಡಿತ ಕಹಿಯಲ್ಲ
ಹಿತವಾಗಿ ಕಾಡುವ
ಇಂಪಾದ ಹಾಡು.


8 thoughts on “ಬಡಿಗೇರ ಮೌನೇಶ್ ಅವರ ಕವಿತೆ-ಒಲವಿನ ಹಾದಿ

  1. ಕವನದಲ್ಲಿ ಕಾಣದೇ ಕಾಡುವ ಪ್ರೀತಿಯ ಕಂಪನವಿದೆ ಅಣ್ಣ

Leave a Reply

Back To Top