ಕಾವ್ಯ ಪ್ರಸಾದ್ ಅವರ ಕವಿತೆ-ಕನಸೆಂಬ ಕನ್ನಡಿ

ಮನಸಿನ ಕಣ್ಣಿಗೀಗ ತುಂಬಾ ನೋವಿದೆ
ಕನಸೆಂಬ ಕನ್ನಡಿಯು ನುಚ್ಚು ಚೂರಾಗಿದೆ!
ಹೃದಯದ ಗಾಯವಾರಲು ಸಮಯವು ಬೇಕಿದೆ
ಅಳಿಸಿ ಹೋಗಲು ನೋವಿನ ಅನುಮತಿ ಕೇಳಿದೆ!!

ಭಗವಂತ ಇದು ಎಂಥ ಶಿಕ್ಷೆಯು ನನಗಾಗಿದೆ
ಈ ನನ್ನ ಕಣ್ಣೀರ ಹನಿಗಳಿಗೆ ಉತ್ತರವೆಲ್ಲಿದೆ!
ನಾಟಕದ ಗೊಂಬೆಯ ಸೂತ್ರವು ನೀನಾದೆ
ನೀ ನಾಡಿಸುವಾಟಕೆ ಬಲಿ ಪಶುವು ನಾನಾದೆ!!

ಇಲ್ಲೊಂದು ಮನಸು ಅಲ್ಲೊಂದು ಹೃದಯವಿದೆ
ಯಾವ ದಿಕ್ಕಲ್ಲಿ ನಾನೀಗ ಸಾಗಿ ಬರುವುದೆ!
ನೂರೊಂದು ಕನಸಾ ಕಂಡು ಮುಂದೆ ಸಾಗಿದೆ
ಪ್ರೀತಿ ತೇರಾ ಹೊತ್ತು ನಂಬಿ ನಿನ್ನ ಹಿಂದೆ ಬಂದೆ!!

ಮೋಸ ಪ್ರೇಮದ ಸಾಕ್ಷಿಗೆ ಕೋಟೆಯ ಕಟ್ಟಿದೆ
ನಾ ಕಟ್ಟಿದ ಅರಮನೆಯ ಕ್ಷಣದಲ್ಲೇ ಕೆಡವಿದೆ!
ನನ್ನ ಸತ್ತ ಹೆಣಕ್ಕೆ ಸಮವಾಗಿ ಬಂದಿ ಮಾಡಿದೆ
ಮುಖವಾಡ ಪ್ರೀತಿ ಧರಿಸಿ ನಂಬಿಕೆ ಸುಟ್ಟು ಹಾಕಿದೆ!!


Leave a Reply

Back To Top