ರತ್ನರಾಯಮಲ್ಲಅವರಹೊಸ ಗಜಲ್

ಅಧರಗಳು ಅದುರುತಿವೆ ನನಗೆ ಮುತ್ತು ಬೇಕು
ನಿನ್ನ ಹೃದಯದಲಿ ಅಡಗಿರುವ ಮುತ್ತು ಬೇಕು

ಅವಯವದ ತುಂಬೆಲ್ಲ ನಶೆಯ ಮದಿರೆಯಿದೆ
ಅಮಲೇರಿಸುವ ನಿನ್ನ ಮೂಗಿನ ನತ್ತು ಬೇಕು

ನಿನ್ನ ಅನುರಾಗದ ಕಡಲಲಿ ಅಮೃತ ಕಂಡಿರುವೆ
ಅನುದಿನ ನನಗೆ ನಿನ್ನ ಪ್ರೀತಿಯ ಮತ್ತು ಬೇಕು

ನಿನ್ನನು ಪ್ರೀತಿಸಲೆಂದೆ ಹುಟ್ಟಿರುವ ಜೀವ ಇದು
ಹಗಲಿರುಳು ಒಲವಿನ ಓಕುಳಿಯ ತುತ್ತು ಬೇಕು

ನಿನ್ನೆದೆಯ ಅಂಗಳದಿ ಮಲ್ಲಿಗೆ ಸುಮ ಬಾಡದು
ಈ ಸಮಾಜದಲಿ ನಮ್ಮ ಜೋಡಿಗೆ ಗತ್ತು ಬೇಕು


2 thoughts on “ರತ್ನರಾಯಮಲ್ಲಅವರಹೊಸ ಗಜಲ್

Leave a Reply

Back To Top