ಕಾವ್ಯ ಸಂಗಾತಿ
ಶಮಾ ಜಮಾದಾರ
ನಿನ್ನೊಲವಲಿ..

ನಿನ್ನೊಲವ ಸಿಂಚನಕೆ ಬಿರಿದರಳಿದೆ ನನ್ನ ಮನ
ಮನಮೋಹಕ ನೋಟಕೆ ನಾಚುತಿದೆ ಕಣ ಕಣ
ಪ್ರೇಮ ಸಲ್ಲಾಪದಲ್ಲಿ ಸುಗಮ ಜೀವನ ಯಾನ
ಬಾಯೆಂದು ಕರೆದಿದೆ ಕುಣಿದಾಡಲು ಆ ಗಗನ
ಹೆಜ್ಜೆ ಹೆಜ್ಜೆಯಲಿ ನಲಿಯುವ ನವಿಲಿನ ನರ್ತನ
ಒಜ್ಜೆಯಾಗುತಿದೆ ಕ್ಷಣ ಕ್ಷಣಕೂ ನೀನಿರದ ಜೀವನ
ಥರಗುಡುತಿದೆ ತನು ವಿರಹದಲಿ ಬೇಕಾಗಿದೆ ಮಿಲನ
ನೆನಪಾಗುತಿದೆ ನಿನ್ನ ಕೈಬೆರಳುಗಳ ತಾನನ ತನನ
ಬರಬಾರದೇ ಕೋಪವೇತಕೆ ಮುರಳಿ ಮೋಹನ
ಹದಗೊಳಿಸಿ ಕಾದಿರುವೆ ಸಿಂಗರಿಸಿ ಮನಸನ್ನ
ಸೇರುವ ತವಕದಿ ನಡೆದಿದೆ ಬಯಕೆಯ ಗಾಯನ
ಸೇರಿಸು ಬಾ ನನ್ನ ಸರಿಗಮಕೆ ನಿನ್ನ ಆಲಾಪನ
ತಾಳಲಾಗದು ಗೆಳೆಯಾ ಈ ತಲಬು ನೂತನ
ಮನದ ತುಂಬಾ ನಿನ್ನ ನೆನಪುಗಳ ಮನನ
ಧರೆಯೆನಿಸುತಿದೆ ಕಾಡ್ಗಿಚ್ಚಿನಲಿ ಉರಿವ ಕಾನನ
ಬರದೆ ಹೋದರೆ ನೀನೀಗ ಖಚಿತ ನನ್ನ ಮರಣ

ಶಮಾ ಜಮಾದಾರ
ಕವನ ಪ್ರಕಟಿಸಿದ ಸಂಗಾತಿ ಸಂಚಾಲಕರಿಗೆ ಹೃತ್ಪೂರ್ವಕ ಧನ್ಯವಾದಗಳು
ಶಮಾ ಜಮಾದಾರ.