ಜಯಚಂದ್ರನ್ ಅವರ ಎರಡು ಕವಿತೆಗಳು

ಬದುಕೆಂಬ ಬಾಣಲೆಯಲಿ
ನಗು ಮಲ್ಲಿಗೆ ಅರಳಿ
ನಗು ನಗುತಾ ಬಾಳ
ಸವಿಯಬೇಕು,

ಗುಡಗೋ ಮೋಡಗಳೆಲ್ಲ
ಮುಡಿ ಬಿಚ್ಚಿ ನಗಲು
ಭೂ ತಾಯಿಯ ಒಡಲ
ನೆಲವೆಲ್ಲ ಹಸಿರು,

ಆಗಸದ ಸೀರೆಗೆ
ಮೂಡಿದ
ತಾರೆಗಳ ಹಿಂಡು
ಬಿದ್ದ ಕಲ್ಲನೆ ಕಟ್ಟಿ
ಬೆಳೆಸುವ ಕನಸ

ಗುಡಿಸಲ ದನಿ ಕಟ್ಟಿ
ಬೆಳೆಸುವ ಮನಸ
ಕಟ್ಟುತಿಹರ ದಿಕ್ಕಿರದ
ತಲೆಗಳಿಗೆ ಕಲ್ಪನೆಯ
ಬಂಡೆ ಬಯಲಿನ ಕನಸ

****

ಕಾಲು ನಡಿಗೆಯ ಹೆಜ್ಜೆಯ೦ತೆ
ಕಳೆದು ಹೋಗುತ್ತಿದೆ ಕಾಲ
ಕಾಲವೆಲ್ಲಿದೆ….?
ಕೌತುಕದ ಕುತೂಹಲ
ಮನದಲ್ಲಿ ನಿಂತು
ಸವೆದು ಹೋಗುತ್ತಿದೆ,
ಅತ್ತಿತ್ತಲುಗದೆ ಸೆಟೆದು
ನಿಂತಿರುವ ಕಂಬದ ಹಾಗೇ ;
ಕಾರಿರುಳ ಚಳಿಗೆ ಮರಗಟ್ಟಿದ ಜೀವಕೆ, ಕಾಲವೆಲ್ಲಿ ?

ವ್ಯರ್ಥವಾಗುತ್ತಿದೆ
ಈ ಮಾನವನ ಪಾಡು
ಕಾಲು ನಡಿಗೆಯ ಹೆಜ್ಜೆ ಹಿಂದಕ್ಕೆ
ಸರಿದು, ಮುಂದಕ್ಕೆಸಾಗಿ
ಸಂಪೂರ್ಣದೆಡೆಗೆ ಸಾಗಲು
ಕಾಲವೆಲ್ಲಿದೆ…..?


̲

2 thoughts on “ಜಯಚಂದ್ರನ್ ಅವರ ಎರಡು ಕವಿತೆಗಳು

  1. ನಮ್ಮ ಹೆಮ್ಮೆಯ ಲೇಖಕರಾದ ಎನ್ ಜಯಚಂದ್ರ ಅವರು ಬರೆದ ಎರಡು ಕವಿತೆಗಳು ಆದ ಆಶಯ ಮತ್ತು ಕಾಲನ ಕೌತುಕ ಈ ಎರಡು ಕವಿತೆಗಳು ಸುಂದರವಾಗಿ ಮೂಡಿ ಬಂದಿದ್ದು ಇರುತ್ತದೆ.
    ಆಸೆಯ ಕವನ ಮಾತನಾಡುವುದು ಹೀಗೆ.
    ಮನುಷ್ಯನಿಗೆ ಎಷ್ಟೇ ಕಷ್ಟಗಳಿದ್ದರೂ ನಗು ನಗುತ ಬಾಳ ಸವಿಯಬೇಕು. ನಿರಾಶೆಯಾಗದೆ ಆಸೆಯೊಂದಿಗೆ ಬದುಕಬೇಕೆಂದು ಹೇಳುತ್ತದೆ.

    ಕಾಲನ ಕೌತುಕ. ಕವಿತೆ. ಮಾತನಾಡುವ ವೆಂದರೆ
    ಮನುಷ್ಯ ದಿನನಿತ್ಯದ ಜಂಜಾಟದ ಬದುಕ ಸವೆಯುವಲ್ಲಿ ಕಾಲ ಹೋಗಿರುತ್ತದೆ ಸಾರ್ಥಕ ಬದುಕು ಮಾಡಿಕೊಳ್ಳಲಿಲ್ಲ ಎಂಬ ಚಿಂತನೆ ಬರುವಷ್ಟರಲ್ಲಿ ಕಾಲವೇ ಉಳಿದಿರುವುದಿಲ್ಲ ನಮಗೆ ಎಂಬ ಕವಿತೆ ಬರೆದಿರುವ ಕವಿಯಾಗಿರುವ ಜಯಚಂದ್ರ ಸರ್ ಅವರಿಗೆ ಧನ್ಯವಾದಗಳು.

  2. ಹೌದು ಅತ್ಯುತ್ತಮ ಅರ್ಥಗರ್ಭಿತ ಕವಿತೆಗಳು ಜೀವನದ ನೋವು ನಲಿವುಗಳಿಗೆ ಹತ್ತಿರವಾಗಿವೆ

Leave a Reply

Back To Top