ಸವಿತಾ ದೇಶಮುಖ ಅವರ ಕವಿತೆ-ʼಅಂತರಂಗ ಮೃದಂಗʼ

ಅಂತರಂಗ ಮೃದಂಗ – ಮೀಟಿ
ನೂರೊಂದು ರಾಗ-ರಂಗ ಕಟ್ಟಿ
ಹಾಡುತಿರೆ ಸುಪ್ತ ‌‌ ಚೈತನ್ಯ -ಧಾಟಿ …!೧!

ಅಂತ ನಿಲುಕದ ಅನಂತ
ನೀಲಿ ಮುಗಿಲ ಏರಿದ -ನಾದ
ಗಾನ ಲಹರಿ ಅಮೃತಾಂದ ಮೃದಂಗ! ೨!

ಮಿಡಿದು ‌ ಭಾವ-ರಾಗ ಹೊಂದಿಸಿ
ಅನುಭಾವ ಸುಗಂಧ ವೇಣಿ ಪೋಣಿಸಿ,
ಶಾಂತಿ ರಸ ರಂಜಿಸುತ ಓಲೈಸಿ !೩!

ಆನಂದ-ಹೊಸ ಗಾನವ ‌ನುಡಿಸಲು
ಮೌನದ ಉಸಿರು ಸರಿಸಿ ಎದೆಯ
ಸೀಳಿ ಕೇಳಿತೊಂದು ಪ್ರಶ್ನೆಯ….!೪!

ಪ್ರೀತಿ-ಪ್ರೇಮ -ಒಲುಮೆ ಒಳರ್ಮಮ..
ಇಂತೊಮ್ಮೆ ಅಂತರಂಗದ ಸ್ವರಹೊಮ್ಮಿ
ಕೇಳಿತ್ತು ಗುಟ್ಟನು.. ಹೇಳೊಮ್ಮೆ? …..!೫!

ಪ್ರೇಮವು ಭಕ್ತಿ- ಚಿತ್ತ ನಿಲುಮೆ
ಒಳಹೊಕ್ಕಿ ನೋಡಲು ಒಲುಮೆಯು
ಪವಿತ್ರದಾಗರವು – ಮೃದಂಗವು !೬!

ವೈಣಿಕನುಡಿಸಿದಂತೆ ನುಡಿವದು
ದಿವ್ಯ ಸಂಗೀತಡೆ -ನಡೆವ ನಡೆ
ಪ್ರಶಾಂತ ಕಾಂತಿಯುತ ಸುಳಿದೇರುತಿಹ!೭!

ರಾಗ ಪ್ರಭೇಯು… ಅಂತರಂಗ ಮೃದಂಗ…


One thought on “ಸವಿತಾ ದೇಶಮುಖ ಅವರ ಕವಿತೆ-ʼಅಂತರಂಗ ಮೃದಂಗʼ

Leave a Reply

Back To Top