ಮನುಷ್ಯನ ಜೀವನ ಎತ್ತ ಸಾಗಿದೆ ಎಂಬ ಚಿಂತೆ ಸದಾ ಕಾಲ ಕಾಡುತ್ತಿರುತ್ತದೆ.ಒಳಿತೆಂಬ ಭಾವ ನಮ್ಮೊಳಗೆ ಮಿಡಿಯುತ್ತಿರುವುದೇ ಜೀವ ಜಲದ ಪ್ರಮುಖ ಉದ್ದೇಶ.ಪ್ರಪಂಚ ವಿಸ್ತಾರವಾಗುವುದಿಲ್ಲ.ಆದರೆ ಜನಜೀವನ ಮಾತ್ರ ವಿಸ್ತಾರಗೊಳ್ಳುತ್ತಲೇ ಇರುತ್ತದೆ.ಅದರ ಸವಿನೆನಪಿಗೆ ಒತ್ತಾಸೆಯಾಗಿ ನಿಲ್ಲುವ ಮನಸ್ಥಿತಿ ಅಷ್ಟು ಸುಲಭವಾಗಿ ನಿಲುಕಲ್ಲ. ಒಟ್ನಲ್ಲಿ ಬದುಕಿನ ದೃಷ್ಟಿಕೋನ ಬದಲಾಗಿದೆ.ದೇಶ ಪ್ರಗತಿಯಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸುವ ಸಂಸ್ಕೃತಿ ಹೆಚ್ಚಾಗುತ್ತಿದೆ.ಮಗ,ಮಗಳು ವಿದೇಶದಲ್ಲಿ ಅನ್ನುವುದೇ ಹಬ್ಬವಾಗಿದೆ.ನಾವೀಗ ನೆಲದ ಮೇಲೆ ವಾಸಿಸುತ್ತಿದ್ದೆವೆ ಎಂಬುದು ಸುಳ್ಳಾಗಿದೆ.ಒಂಟಿಮನೆಗಳು ಮಾಯವಾಗಿ ಅಪಾರ್ಟ್ಮೆಂಟ್ ನಮಗೆಲ್ಲ ಖಾಯಂ ನಿವಾಸವಾಗಿ ನಿಂತಿರುವುದು ಇಂದಿನ ದಿನಮಾನಗಳಿಗೆ ಸೂಕ್ತವಾಗಿದೆ.ವಿಚಿತ್ರವಾದರೂ ಸತ್ಯ ಮನಗೆಲ್ಲ ಬದುಕು ಹೂವಿನ ಹಾಸಿಗೆಯಲ್ಲ.ಅದೊಂದು ರಬ್ಬರ್ ತರ ಅಥವಾ ಜಿಂಗಮ್ ತರ.‌.ಹಿಗ್ಗಿಸಿದಷ್ಡು ಹಿಗ್ಗಿ ನಂತರ ಕುಗ್ಗಿ ಹೇಳಹೆಸರಿಲ್ಲದೇ ಹರಿದು ಹಂಚಿಹೋಗುವ ಕ್ಷಣಗಳು ಬಂದಾಗೆಲ್ಲ ಉತ್ತರಿಸುವ ಗೋಜಿಗೆ ಯಾರು ಹೋಗಲ್ಲ..ಯಾಕೆಂದರೆ ಯಾರಿಗೆ ಯಾರು ಹೇಳಿಕೊಳ್ಳುವಷ್ಡು ಸ್ನೇಹಿತರಾಗಿ ಇರೋದಿಲ್ಲ.ಕಂಡಿದ್ದೆಲ್ಲ ನಿಜವಾಗಲೂ ನಾವೇನು ಜಾದೂಗಾರರಲ್ಲ!.

ಮಹಲುಗಳ ಮಜಲುಗಳನ್ನು ಗಮನಿಸಿದಾಗ ಎಷ್ಟೊಂದು ಸಂತೋಷ,ಸಿರಿವಂತಿಕೆಯ ಸೊಗಸು, ದೊಡ್ಡ ದೊಡ್ಡ ಗೋಡೆಗಳು, ಕಾಂಪೌಂಡ್ ಗಳು,ಆಳು,ಕಾಳು ಹೀಗೆ ಏನೆಲ್ಲ ಸೌಕರ್ಯಗಳು ಬೇಕೋ ಎಲ್ಲವೂ ಇದೆ.ಗೇಟಿನಾಚೆ ನೋಡುವ ಕಂಗಳಿಗೆ ಇವೆಲ್ಲವೂ ಕೈಗೆಟುಕದ ಆಸೆಗಳು.ನೋಡಿ ಕಣ್ತುಂಬಿಕೊಂಡು ಮತ್ತೆ ಮುಂದೆ ಸಾಗುವಾಗ, “ಭಗವಂತ ಮನಗೇಕೆ ಈ ಜನ್ಮ ಕೊಟ್ಟಿರುವೆ?ಬೀದಿ ಬೀದಿ ಅಲೆದು ತುತ್ತುಕೂಳಿಗೆ ಪರಿತಪಿಸುವ ಕ್ಷಣಗಳನ್ನು ನೆನೆದು ದುಃಖ ಪಡುವ ಮನಸ್ಸಿಗೆ ಆ ಹೊತ್ತು ಆ ಚಿಂತೆ ಅಷ್ಟೇ… ಹೊತ್ತು ಮುಳುಗಿದ ಮೇಲೆ,ಆಸರೆಯ ಚಿಂತೆಯಲ್ಲಿ ಇಡೀ ದಿನ ಕಂಡ ಸಂಗತಿಗಳು ಕಣ್ಮರೆಯಾಗಿ ಬೀದಿಯಲ್ಲಿ ಕಣ್ತುಂಬ ನಿದ್ರೆಗೆ ಜಾರುವ ಸಂಪತ್ತು ಇವರಿಗೆ ತಾನೆ ದಕ್ಕಿದ್ದು…ಮಹಲುಗಳಲ್ಲಿಯ ಮನಸ್ಸುಗಳು ಬಿಕರಿಯಾಗುತ್ತಿವೆ!.
ನೆಮ್ಮದಿ ಕಾಣದೆ ಒಳಗೊಳಗೆ ಒದ್ದಾಡುತ್ತಿವೆ.ಹೊರಗಡೆ ನಗುವಿನ ಮುಖವಾಡ,ಶ್ರೀಮಂತಿಕೆಯ ಅಬ್ಬರ ಎಲ್ಲವೂ ನಾಟಕೀಯ…ಬಡವನ ಗುಡಿಸಲಲ್ಲಿಯ ಸುಖ,ಸಂತೋಷ ‌ಬಂಗ್ಲೆಯಲ್ಲಿ ಇಲ್ಲ.. ಅವರವರು ಪಡೆದುಕೊಂಡು ಬಂದ ಭಾಗ್ಯ!. ಅನುಭವಿಸುವುದು ಕೂಡ !.

ಸಮಾಜದ ವಿವಿಧ ಸ್ತರಗಳಲ್ಲಿ ವಾಸಿಸುವ ಕುಟುಂಬಗಳು..ಅವರದೇ ಆದ ಜೀವನ ಚಕ್ತದಲ್ಲಿ ವಾಸಿಸುತ್ತಿದ್ದಾರೆ.ವಿಭಿನ್ನತೆ ಇದ್ದರೂ,ಮನುಷತ್ವವನ್ನು ಮಾರಿಕೊಂಡು ಬದುಕುವ ಜನರ ನಡುವೆ ಒಂದಿಷ್ಟು ಮೌಲ್ಯಗಳನ್ನು ಹೊತ್ತು ಸಾಗುವ ಸಮುದಾಯ ಇರುವುದರಿಂದ ಮಾನವೀಯ ಮೌಲ್ಯಗಳು ಉಳಿದುಕೊಂಡಿವೆ.
ಫೇಸ್ ಬುಕ್ ನಲ್ಲಿ ಕಂಡ ಚಿತ್ರಪಟ….ಆತ್ಮಶಕ್ತಿಯನ್ನು ಹೆಚ್ಚಿಸಲು ಇದೊಂದು ಸಹಕಾರಿ ಅನ್ನಿಸಿತು…ಏನೂ ಮಾಡದೇ ಸೊಂಬೆರಿಯಾಗಿ,ಇನ್ನೊಬ್ಬರಿಗೆ ಭಾರವಾಗಿ ಬದುಕುವ ಜನರ ನಡುವೆ,ಇಲ್ಲೊಬ್ಬ ಅಂಗವಿಕಲ ಕೂಲಿ ಮಾಡುತ್ತಿರುವುದು ಅದರಲ್ಲೂ,ಒಂದು ಕೈಯಲ್ಲಿ ದೊಡ್ಡ ಚೀರೆಕಲ್ಲನ್ನು ಎತ್ತಿಕೊಂಡು ದುಡಿಯುತ್ತಿರುವುದು..ನಿಜವಾಗಲೂ ಸ್ವಾಭಿಮಾನದ ಪ್ರತೀಕ ಅನ್ನಿಸಿತು.
ಇಂತವರು ನಿಯತ್ತಾಗಿ ದುಡಿಯುವಾಗ,ಸೊಂಬೆರಿಯಾಗಿ ದುಡಿಮೆಯನ್ನು ಅನ್ಯದಾರಿಯಲ್ಲಿ ಕಂಡುಕೊಳ್ಳುವ ಜನಾಂಗ ನಿರ್ಮಾಣ ಆಗುತ್ತಿರುವುದು ವಿಪರ್ಯಾಸ. ಸುಳ್ಳು, ಕಳ್ಳತನ,ಕೊಲೆ ಸುಲಿಗೆ,ಮೋಸ,ವಂಚನೆ,ದ್ರೋಹ ಇವೆಲ್ಲವೂ ಸಲಿಸಾಗಿ,ಇದೊಂದು ಉದ್ಯೋಗ , ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರುವುದು ನಮ್ಮೆಲ್ಲರ ಕಣ್ಮುಂದೆ ಇದ್ದರೂ ನಾವೇನು ಮಾಡಲಾಗದೇ ನಮ್ಮಷ್ಟಕ್ಕೆ ನಾವಿದ್ದರೆ ಸಾಕೆಂಬ ಸ್ಥಿತಿಗೆ ಬಂದಿದ್ದೆವೆ.ಕಳೆದುಕೊಂಡು ಒದ್ದಾಡುವವರ ನಡುವೆ ಮುದ್ದೆಯಾಗಿ ಬಿಡುವ ದಿನಗಳು.

ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮೊಳಗೆ ನಾವು ಇಣುಕುವ ಗೋಜಿಗೆ ಹೋಗುವುದಿಲ್ಲ,ನಮಗೇನು ಸಂಬಂಧವಿಲ್ಲ.ಕೈಕಾಲು,ದೇಹ ಸ್ಥಿರವಿದ್ದರೂ,ಮಾಡುವ ಕೆಲಸಮಾತ್ರ ಎಲ್ಲರೂ ಮೆಚ್ಚುವಂತಹದ್ದಾಗಿದ್ದರೆ ಮಾತ್ರ ಅದಕ್ಕೊಂದು ಬೆಲೆ.  ಅಂಗವಿಕಲತೆಯನ್ನು ಮೀರಿ ದೇಶದ ಹೆಮ್ನೆಗೆ ಕಾರಣವಾದ ಅನೇಕ ಸಾಧಕರನ್ನು ನೆನೆದು ಅವರ ಜೀವನದ ಯಶೋಗಾಥೆಯನ್ನು ಒಮ್ಮೆ ಮೆಲುಕು ಹಾಕಿದರೆ ಸಾಕು…ನಮಗೊಂದು ಸ್ಪಷ್ಟ ದಾರಿ ಕಾಣಬಹುದೇನೋ…ಹೇಳಿದಷ್ಟು ಎಲ್ಲವೂ ಸುಲಭವಲ್ಲ!. ಮಾತಾಡುವಷ್ಟು ಕಾಯಕದಲ್ಲಿ ಕೈಲಾಸ ಕಾಣುವುದು ವಿಶ್ವಗುರು ಬಸವಣ್ಣನಂತವರು ನಮಗೆಲ್ಲ ಮಾದರಿ…ನಮ್ಮ ಹಾದಿಯು ಇದೆ ತರನಾಗಿ ಮುಂದೆಸಾಗಲಿ ಎಂಬ ಆಶಯ ನಮ್ಮದಾದರೆ ಒಳಿತು..


One thought on “

Leave a Reply

Back To Top