ಲಲಿತಾ ಕ್ಯಾಸನ್ನವರ ಅವರ ಕವಿತೆ-ಮನೆ

ಬಾಳದಿನದ ಕನಸಿಗೆ
ಬಣ್ಣ ಹಚ್ಚಿರುವೆ
ಹಚ್ಚಿದ ಬಣ್ಣದೊಳಗೊಂದು
ಮನೆಯ ಚಿತ್ತಾರ ಬಿಡಿಸಿರುವೆ

ಕಂಬದ ಮೇಲೊಂದು
ಬಿಂಬದ ಗೊಂಬೆ ಇಟ್ಟಿರುವೆ
ಆ ಬಿಂಬದ ಜೊತೆ ನನ್ನೆ ಕಂಡಿರುವೆ
ಮನೆ ಮೇಲೆ ನನ್ನ ಮನಸಿಟ್ಟಿರುವೆ

ಗಂಧ ಚಂದನದಿ ಛಂದನೆಯ
ಅಟ್ಟಣಿಗೆ ಮಾಡಿರುವೆ
ಆಕಾಶಕ್ಕೆ ಎತ್ತರವಾಗಿ ಚಂದ್ರಚಿಕ್ಕಿ
ನೋಡಿ ಹರುಷ ಪಟ್ಟಿರುವೆ

ಮನೆಯದು ನಾಕವು
ನಗುವಿರಲು ಸುಖವು
ದೇವರ ದಯವಿರಲು
ಜೇನಿನ ಸವಿ ಈ ಜೀವನವು

ಮನೆಯಂಗಳದಿ ರಂಗೋಲಿ
ಒಲವ ಸಂಸ್ಕಾರವು
ಒಗ್ಗಟ್ಟಾಗಿ ಬದುಕಿದರೆ
ಅದೇ ಮನೆಗೆ ಸಿರಿಸಂಪದವು

———————

Leave a Reply

Back To Top