ಸುಧಾ ಪಾಟೀಲ ಅವರ ಕವಿತೆ-ಕವನವೆಂದರೆ

ಕವನವೆಂದರೆ ನನ್ನೊಳಗಿನ
ನೀನಲ್ಲವೇ
ಪ್ರಕೃತಿಯಲ್ಲಿನ ವನಸಿರಿಯಲ್ಲಿ
ಕಾಣುವ ನಿನ್ನ
ಪ್ರತಿಬಿಂಬವಲ್ಲವೇ
ನಿನ್ನ ಹೊಗಳುವ ಶಬ್ದಗಳಲ್ಲವೇ
ಬೆಳದಿಂಗಳ ಅಂಗೈಯಲ್ಲಿ
ಹಿಡಿಯುವ ಉಮೇದಿಯಲ್ಲವೇ

ಕವನವೆಂದರೆ ನಿನ್ನೊಂದಿಗೆ
ಹೆಜ್ಜೆ ಹಾಕುವ ಬಾಳ ದಾರಿಯಲ್ಲವೇ
ಸಡಗರದಿ ಸಾಲುಗಳ ಹೊಂದಿಸುವ ಗಡಿಬಿಡಿಯಲ್ಲವೇ
ಬಗೆ ಬಗೆದು ಕೊಡುವ ಸಂಭ್ರಮದ ಪದಗಳಲ್ಲವೇ
ಒಟ್ಟಾರೆ ಕವನದ ಒತ್ತಾಸೆ
ನೀನಲ್ಲವೇ

ಕವನವೆಂದರೆ ಮೊಗ್ಗಿನ ಹೂವು
ಅರಳಿದ ಹಾಗೆ ಅಲ್ಲವೇ
ಪದರು ಪದರಾಗಿ ಆಗಸದಲ್ಲಿ
ಹರಡಿದ ಬಿಳಿ ಮೋಡದ ಹಾಗಲ್ಲವೇ
ಚಿಲಿಪಿಲಿ ಎಂದುಲಿಯುವ ಪಕ್ಷಿ ಸಂಕುಲವಲ್ಲವೇ

ಕವನವೆಂದರೆ ನಾನೇ ನೀನಾಗುವದಲ್ಲವೇ
ನಿನ್ನೊಳಗಿನ ಚೈತನ್ಯ ಪಡೆಯುವದಲ್ಲವೇ
ಒಂದಾಗಿ ಹರಿಯುವ ನದಿಯಂತಲ್ಲವೇ
ಸಮಾಗಮದ ತಾಣವಲ್ಲವೇ


Leave a Reply

Back To Top