ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಅಪ್ರತಿಮ ಮೈಗಳ್ಳರು
ಮೈಗಳ್ಳರು, ಸೋಮಾರಿಗಳು…. ಎಂದೆಲ್ಲಾ ಸಂಭೋದಿಸುವುದು ಭಾರತದಂತಹ ದೇಶಗಳಲ್ಲಿನ ಉಂಡಾಡುವ ಗು(ಗ) ಂಡರನ್ನು. ಇಂಥವರು ಹೋದಲ್ಲಿ ಬಂದಲ್ಲಿ ಕಣ್ಣಿಗೆ ಬೀಳುತ್ತಾರೆ. ಅಥವಾ ಅಂತವರೇ ಕಂಡಲ್ಲಿ ತುಂಬಿಕೊಂಡಿರುತ್ತಾರೆ.
ಈ ಅವಗುಣವನ್ನು ಮನುಷ್ಯ ತಾನೊಬ್ಬನೇ ಗುತ್ತಿಗೆ ಪಡೆದಿಲ್ಲವೆಂಬಂತೆ ಮೈಗಳ್ಳ ಮಾನವರನ್ನು ಮೀರಿಸುವ ಅತ್ಯಂತ ಸೋಂಬೇರಿ ಪ್ರಾಣಿಗಳು ಉಂಟು.ಕಾಡು ಪಾಪ (ವಾನರ ಲಕ್ಷಣ ತೋರುವ) ಇಂಥ ನಿದರ್ಶನಕ್ಕೆ ಬರೆದ ಮತ್ತೊಂದು ಹೆಸರೇ ಆಗಿದೆ.
ಅದರ ಜಡತನದ ಎಲ್ಲೆಯನ್ನು ಪತ್ತೆಹಚ್ಚಲು ವಾರಗಟ್ಟಲೆ ಅದರ ಅಧ್ಯಯನಕ್ಕೆಂದೇ ಹಿಂದಿಂದೆ ಕೆಲಸವಿಲ್ಲದವರಂತೆ ಅಲೆದಾಡಿ ಕೊನೆಗೂ ದಾಖಲೆಯ ಸೋಮಾರಿತನವನ್ನು ಗುರುತಿಸಿದವರು ಪ್ರಾಣಿಪ್ರಿಯ, ನಿಸರ್ಗವಾದಿ ಅಮೆರಿಕದ ವಿಲಿಯಂ ಬೇಬಿ. ಆತನ ಪ್ರಕಾರ ಈ ಕಾಡು ಪಾಪದ ಜಡ ಆಚಣೆಗಳು ಈ ಪರಿಯಲ್ಲಿವೆ.
ಅದು ತಿನ್ನುವುದಕ್ಕೆಂದೇ ಹನ್ನೊಂದು ಗಂಟೆಗಳನ್ನು
ನಿಧಾನ ನಡೆಗೆಗೆಂದು ಹದಿನೆಂಟು ಗಂಟೆಗಳನ್ನು
“ಸ್ವಲ್ಪ” ವಿಶ್ರಾಂತಿಗೆ ಎಂದು ಹತ್ತು ಗಂಟೆಗಳನ್ನು
ಹಾಗೂ ಮಲಗುವುದಕ್ಕೆಂದು ಕೇವಲ ನೂರಾ ಇಪ್ಪತ್ತೊಂಭತ್ತು ಗಂಟೆಗಳನ್ನು ವ್ಯಯಿಸುತ್ತದೆ. ಇಂಥ ಅಪ್ರತಿಮ ಮೈಗಳ್ಳರಿರುವಾಗ ಮನುಷ್ಯರು ವಾಸಿ ಎಂದುಕೊಂಡು ಸಮಾಧಾನ ಪಟ್ಟುಕೊಂಡರೆ ನಮ್ಮ ಮೈಗಳ್ಳ ಸ್ವಭಾವಕ್ಕೆ ಮತ್ತಿನ್ನೇನನೆನ್ನ ಬೇಕು.
——————-
ಶಿವಾನಂದ ಕಲ್ಯಾಣಿ