ಕಾವ್ಯ ಸಂಗಾತಿ
ಸವಿತಾ ದೇಶಮುಖ
ದಂತಕಥೆಯಾದೆ
ಅದೊಂದು ದಂತ
ಕಥೆಯ ವೃತ್ತಾಂತ….
ನೀನಾದೆ ಗಾಂಧೀ….
ಅರೆ ಬರಿ ಮೈಯಲ್ಲಿ
ಓಡಾಡುವ ನಾಯಕ!
ಕರುಣೆ ಸಹನೆ- ಸರಳ
ತ್ಯಾಗ -ಸತ್ಯ ಅಹಿಂಸೆ
ಹರಿಕಾರ- ಸಾದು ಸಂತ
ನಿನ್ನ ದೂಷಿಸುವವರು
ಸದುವಿನಯ ಚೋರರು!?
ಇದೇನಿತು ನಾನರಿಯೆ
ಅಸ್ಪೃಶ್ಯ- ಬಡವರಿಗಾಗಿ
ಬಟ್ಟೆ- ಊಟ. ತ್ಯಜಿಸಿ
ಸತ್ಯ- ಅಹಿಂಸೆ ಮೆರೆಸಿ!
ಸಮಾನತೆಯ ತಕ್ಕಡಿಯ
ಹಿಡಿದು ಮೇಲು- ಕೀಳು
ದಲಿತ -ಭೇದವಳಿದು
ಸಂಕಷ್ಟಗಳ ಸುಳಿಯಲಿ
ಸ್ವಚ್ಛತೆಯ ಮೆರೆಯುತ
ಅವರಿವರ ಕಕ್ಕಸ ತೊಳ್ದ
ಸತ್ಯತೆಯ ಸದ್ಭಾವದಲಿ
ಹಾರಿಸಿದೆ ಸ್ವಾತಂತ್ರ
ಪತಾಕೆ ಸಮನ್ವತೆಯ
ಭಾವ ಮುಳುವಾಯಿತೆ?
ಅರಿಯದಾದರರು ನಿನ್ನ..
ಅಂತರಂಗ ದೈಸಿರಿಯ.,
ಸಕಲ ಜೀವಿಗಳಲಿ ದೈವತ್ವ
ಕಂಡೆ -ತಪ್ಪಿದೆ ನೀನಲ್ಲಿ….
ರಾಜಕಾರಣಿ ಆಗಬೇಕಿತ್ತು…
ನಿನ್ನ ನೆರಳಲಿದ್ದು ಸ್ವಾರ್ಥ
ಸಮರಕ್ಕೆ ಇಳಿದವರ
ತಿಳಿಯಬೇಕಿತ್ತು ಅವರ….
ಕೈಚಳಕ ಮೋಡಿಗೆ ಒಳ
ಆಗದಿದ್ದರೆ ಗುಂಡಿಗೆ ಬಲಿ
ಯಾಗದೆ ಇರಹುದಿತೆನೊ…
ನೀ ಕಲಿಸಿದ ಸಮದೃಷ್ಟಿ
ಚರಿತವು ದಿಗಂತದಲ್ಲಿ
ಮಾಯವಾಗಿ ಹೋಗಿದೆ
ಮಾನವೀಯ ವಿಮಲ
ಜ್ಯೋತಿ ನಂದಿದೆ ಇಂದು
ಮತ್ತೆ ಬರುವೆಯ……?
ಇದೊ ನಿನಗೆ ಸಾವಿರದ
ನಮನಗಳು……..
ಸವಿತಾ ದೇಶಮುಖ