ಕಾಡಜ್ಜಿ ಮಂಜುನಾಥ ಅವರಕವಿತೆ-ಸಂಸ್ಕಾರವೆಂಬ ಸ್ನಾನ….!!

ಬದುಕಿನಲ್ಲಿ
ಸದ್ಗುಣಗಳು
ಮೂಡಿಬರಲು
ತಂದೆತಾಯಿಯ
ಸಂಸ್ಕಾರವೆಂಬ
ಸ್ನಾನವು ಬೇಕು..!!

ಗುರುಹಿರಿಯರನು
ಸದ್ಬಾವಧಿ
ಗೌರವಿಸಲು
ವಿಧೇಯತೆಯ
ಸ್ನಾನವು ಬೇಕು..!!

ಸುತ್ತಮುತ್ತಲಿನ
ಜನರ ನೋವುಗಳಿಗೆ

ಬಡತನದ
ಬದುಕಿನ
ಪರಿಹಾರಕ್ಕೆ
ನಿಷ್ಠೆಯ ಕಾಯಕದ
ಸ್ನಾನವು ಬೇಕು….!!!

ಜೀವನದಿ
ಸಂತೋಷದಿಂದಿರಲು
ಇದ್ದದ್ದರಲ್ಲಿಯೇ
ಸಂತೃಪ್ತ ಭಾವದ
ಸ್ನಾನವು ಬೇಕು…!!

ಸ್ನೇಹ ಪ್ರೀತಿಯ
ಬೆಳೆಸಲು
ನಿಷ್ಕಲ್ಮಶ
ನಗುವೆನ್ನುವ
ಸ್ನಾನವು ಬೇಕು….!!!

ಜೀವನದ
ಸಂಕಟಗಳ
ಸಹಿಸಲು
ತಾಳ್ಮೆ ಎನ್ನುವ
ಸ್ನಾನವು ಬೇಕು…!!

ಸಾಧನೆಯ
ಮೆಟ್ಟಿಲೆರಲು
ಅವಿರತ
ಅನಂತ
ಶ್ರಮದ
ಸ್ನಾನವು ಬೇಕು…!!

ಹೊಗಳಿಕೆ
ತೆಗಳಿಕೆಗಳನು
ಸಹಿಸಿಕೊಳ್ಳಲು
ತನ್ನತನವೆಂಬ
ಸ್ನಾನವು ಬೇಕು…!!!

Leave a Reply

Back To Top