ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದೆಂಥ ಅನ್ಯಾಯ ಬುದ್ಧ..?
ನಂಬಿ ಕೈಹಿಡಿದವಳ
ಮಧ್ಯರಾತ್ರಿಯಲಿ
ಒಂಟಿಯಾಗವಳ
ಬಿಟ್ಟು ಹೋದೆಯಲ್ಲ…

ನಿನ್ನನ್ನು ಸ್ವಾರ್ಥಿ
ಎಂದೆಂದೂ ಕರೆಯಬಾರದು..?
ನಿನ್ನ ಸಂಕಲ್ಪವ ಸಾಧಿಸಲು,
ಸಾಯುವವರೆಗೆ
ಜೊತೆಗಾತಿಯಾಗಿ ಬಂದವಳ
ಒಂದು ಕ್ಷಣದಲಿ
ತೊರೆದು ಹೋದೆಯಲ್ಲ..ಏಕೆ..?

ಅವಳ ಬದುಕು
ಅಶಾಂತಿಯ ಗೂಡಾಗಿ
ಮಾಡಿದ ನೀನು,
ಅದಾವ ಶಾಂತಿಯನು
ಅರಸಲು ಹೋದೆ..ಹೇಳು..

ಹೆಣ್ಣಿನ ಮನದ
ಅಳಲು, ನೋವು
ನೀನಗೇನು ಗೊತ್ತು..?
ದಯೆಯ ಪಾಠ
ಬೋಧಿಸಿದ ನೀನು
ಮಡದಿಗೇಕೆ ದಯೆ ತೋರಲಿಲ್ಲ..?

ಜಗಕೆ ಪ್ರೇಮವ
ಕಲಿಸಿದ ನೀನು
ಅವಳ ನಿಸ್ವಾರ್ಥ ಪ್ರೇಮವ
ಮರೆತು ಬಿಟ್ಟೆಯಲ್ಲ…

ಲೋಕಕೆ ಇರಬಹುದು
ನೀನು ಕರುಣಾಮಯಿ
ಆದರೆ…
ಮುಗ್ಧ ಮಡದಿ , ​​ಎಳೆ ಕಂದನ
ಪಾಲಿಗೆ ನೀನು ಮಾತ್ರ
ಪಾಷಾಣ ಹೃದಯಿ, ನಿಷ್ಕರುಣಿ….!!


About The Author

7 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..”

  1. ಅರ್ಥಪೂರ್ಣ ಕವಿತೆ ಮೇಡಂ

    — ಇಂದುಮತಿ ಶ್ರೀನಿವಾಸ, ಮೈಸೂರು

  2. “ಬುದ್ಧ” ನ ಬಗೆಗಿನ ಟೀಕೆ ಸ್ವಲ್ಪ ಅತಿಯಾದಂತೆ ನನಗನಿಸಿತು.ಲೋಕಕಲ್ಯಾಣದ ಉಪಾಯಗಳನ್ನರಸಲು ಹೊರಟವನಿಗೆ ಸ್ವಾರ್ಥದ ಬೇಲಿ ಹಾಕಿದಿರಿ. ಸ್ವಲ್ಪ ಚಿಂತನೆಯ ಹರವನ್ನು ವಿಸ್ರರಿಸಬಹುದಾಗಿತ್ತೆಂಬುದು ವಿನಮ್ರ ಅಭಿಪ್ರಾಯ.

  3. ಬುದ್ಧನ ನಿರ್ಧಾರವು ಅನೇಕರಿಗೆ ಆಶ್ಚರ್ಯ ಮತ್ತು ನಿರಾಶೆಯನ್ನುಂಟು ಮಾಡಿದೆ. ಆತನು ತನ್ನ ಪತ್ನಿ ಮತ್ತು ಮಗನನ್ನು ತೊರೆದು ಸತ್ಯವನ್ನು ಅರಸಲು ಹೋದದ್ದು ಕರುಣಾಜನಕವಾಗಿ ಕಾಣುತ್ತದೆ. ಆದರೆ, ನಾವು ಬುದ್ಧನ ದೃಷ್ಟಿಕೋನದಿಂದಲೂ ಯೋಚಿಸಬೇಕು.
    ಬುದ್ಧನು ತನ್ನ ವೈಯಕ್ತಿಕ ಸುಖ ಮತ್ತು ಕುಟುಂಬವನ್ನು ತ್ಯಜಿಸಿ, ಇಡೀ ಮಾನವಕುಲದ ದುಃಖವನ್ನು ನಿವಾರಿಸಲು ನಿರ್ಧರಿಸಿದನು. ಆತನಿಗೆ ಜ್ಞಾನೋದಯವಾದ ನಂತರ, ಆತನು ತನ್ನೆಲ್ಲಾ ಅನುಭವಗಳನ್ನು ಮತ್ತು ಜ್ಞಾನವನ್ನು ಇತರರಿಗೆ ಹಂಚುವ ಮೂಲಕ ಅವರ ದುಃಖವನ್ನು ಕಡಿಮೆ ಮಾಡಲು ಪ್ರಯತ್ನಿಸಿದನು.
    ಬುದ್ಧನ ನಿರ್ಧಾರವು ಕಠಿಣವಾಗಿತ್ತು, ಆದರೆ ಆತನು ತನ್ನ ಸ್ವಾರ್ಥವನ್ನು ಬದಿಗಿಟ್ಟು ಇತರರ ಒಳಿತಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟನು. ಆತನ ಬೋಧನೆಗಳು ಇಂದಿಗೂ ನಮಗೆ ದಾರಿದರ್ಶನ ನೀಡುತ್ತವೆ.
    ಆದ್ದರಿಂದ, ನಾವು ಬುದ್ಧನ ನಿರ್ಧಾರವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಬೇಕು. ಆತನ ಕೃತ್ಯವು ಕರುಣಾಜನಕವಾಗಿ ಕಂಡರೂ, ಆತನು ತನ್ನೆಲ್ಲಾ ತ್ಯಾಗಗಳನ್ನು ಇತರರ ಒಳಿತಿಗಾಗಿ ಮಾಡಿದನು ಎಂಬುದನ್ನು ನಾವು ಮರೆಯಬಾರದು.

  4. ಸ್ಪಂದಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು…

    ಹಮೀದಾಬೇಗಂ ದೇಸಾಯಿ.ಸಂಕೇಶ್ವರ.

  5. ಬುದ್ಧ ಶಾಂತಿಯನ್ನರಸಿ ಹೋದನೆ? ನನಗೇಕೋ ಸಂದೇಹ. ಮದುವೆಯಾದ ಸುಮಾರು ವರ್ಷಗಳ ನಂತರ ರಾಹುಲನ ಜನನವಾಯಿತು. ಅಲ್ಲಿಯವರೆಗೆ ಆತನಿಗೆ ಶಾಂತಿ ಬೇಕಿರಲಿಲ್ಲವೆ?

    ವಿ ಶ್ರೀ ಕಟ್ಟಿ

Leave a Reply

You cannot copy content of this page

Scroll to Top