ಕಾವ್ಯ ಪ್ರಸಾದ್ ಅವರ ಕವಿತೆ-ಹೃದಯದ ತವಕ

ಸವಿ ಸುಂದರ ರೂಪವನ್ನು ಹೊತ್ತುವಳು
ಸ್ವಚ್ಛ ಹಾಲು ಕೆನ್ನೆಯ ಒಡತಿಯವಳು!
ಮಾಧುರ್ಯ ಮಮತೆಯ ಮೂರ್ತಿಯವಳು
ನಗುವ ಮಲ್ಲಿಗೆಯ ಚೆಂದದ ಮೊಗದವಳು!!

ಮೈ ಮರೆತೆ ಅವಳನ್ನೇ ನಿಂತು ನೋಡುತ್ತಿರಲು
ಸೂರ್ಯ ಕಿರಣಗಳೆ ನಾಚಿ ಬೆರಗಾಗಿ ನಿಂತಿರಲು!
ಮಳೆಯ ಆರ್ಭಟವೀಗ ಮುಗಿಲ ಮುಟ್ಟಿರಲು
ಅವಳ ಸೊಬಗಿನ ಅಂದ ಸಿಂಗಾರದ ಹೊನಲು!!

ಆ ನಿನ್ನ ಸೌಂದರ್ಯ ಬಾನೆಲ್ಲ ಹಾರಾಡುತಿದೆ
ಈ ಜೀವವು ನಿನಗಾಗಿ ಕಾಯುತ್ತಾ ಕುಳಿತಿದೆ!
ತುಸು ದೂರ ನಿನ್ನ ಮರೆತು ಸಾಗಲು ಬರುವುದೆ
ನೀ ಬರುವ ಹಾದಿಯ ನೋಡುತ್ತಾ ಹೆಜ್ಜೆ ಸಾಗುತ್ತಿದೆ!!

ಎಷ್ಟು ದೂರ ಹೋದರು ಮುಗಿಯದ ಪಯಣವು
ಆ ನಿನ್ನ ನೆನಪಿನ ಅಲೆ ಮರುಕಳಿಸಿ ಅಪ್ಪಳಿಸಿದವು!
ಹಿಂಬಾಲಿಸಿ ಬರುವೆ ಓ ಚೆಲುವೆ ಬಿಡಲಾಗದ ಮನವು
ನಿನ್ನ ಸುಂದರ ಕಣ್ಣುಗಳು ಈ ಮನಸನು ತಟ್ಟಿದವು!!

ಏನೋ ತಿಳಿಯದ ಈ ಹೃದಯದ ತವಕ ನನಗಾಗಿದೆ
ನಿನ್ನ ರೂಪ ಶಿಲೆ ಸೌಂದರ್ಯ ನನ್ನ ಕಣ್ಣೊಳಗೆ ಕುಣಿಯುತ್ತಿದೆ!
ನಿನ್ನ ಗುಂಗಲಿ ಮುಳುಗಿ ಎಲ್ಲರನು ಮರೆತು ಹೋದೆ
ಹುಚ್ಚು ಮನಸ್ಸಿನ ಆಸೆ ನಿನ್ನ ಜೊತೆಗಿರಲು ಬಯಸಿದೆ!!


Leave a Reply

Back To Top