ಶಾಲಿನಿ ಕೆಮ್ಮಣ್ಣುಅವರ ಕವಿತೆ-ʼಹೊಸತನಕೆ ಸ್ವಾಗತʼ

ವಸಂತ ಕಾಲ ಬಂದಿಹುದು ನವ ಕಳೆಯನು ಹೊತ್ತು/
ಹೊಸತನವನು ತುಂಬಿಹುದು ಸವಿಗನಸನು ಬಿತ್ತು//

ಬ್ರಹ್ಮಾಂಡ ಸೃಷ್ಟಿಯ ಆರಂಭವ ನೆನೆದು/
ನವಯುಗದ ಉದಯಕ್ಕೆ ಜಗವು ಅಣಿಯಾಗಿಹುದು//

ಚೈತ್ರದ ಸಂಭ್ರಮದಿ ಪ್ರಕೃತಿಗೆ ಹೊಸ ಕಳೆಯು/
ಪ್ರತಿ ವರುಷ ನಮಗೆಲ್ಲ ಹೊಸ ಚೈತನ್ಯವು//

ಬೇವು ಬೆಲ್ಲ ಮೆಲ್ಲುತಲಿ ಯುಗಾದಿಯಂದು/
ಸಮಚಿತ್ತದಿಂದ ಸಿಹಿ ಕಹಿಯ ಸ್ವೀಕರಿಸಿರೆಂದು//

ಮರದಲಿ ಹೊಸ ಹೂ ಬಿಟ್ಟಿದೆ ನೋಡಿರಿ/
ಚಿಲಿಪಿಲಿ ಕಲರವಕೆ ಮೈ ಮರೆತು ಹಾಡಿರಿ//

ಸೃಷ್ಟಿಯ ಹೊಸತನ ಹಬ್ಬದ ವಾತಾವರಣ/
ಮಾವಿನ ಬೇವಿನ ಬಗೆ ಬಗೆ ಬಣ್ಣದ ತೋರಣ//

ಸ್ನೇಹ ಸಾಮರಸ್ಯದಿ ಎಲ್ಲರೊಡೆ ಕೂಡುತ /
ಜೀವನ ರಸಗಳ ಆನಂದದಿ ಸವಿಯುತ//

ಇಷ್ಟರಲ್ಲಿ ಸಂತಸ ಹಂಚುತ ಬೆಸೆಯುವ/
ಪ್ರೀತಿ ಸಹಬಾಳ್ವೆಯ ಆಶಯವ ಬೆಳೆಸುವ//

ಮನಗಳ ಮನೆಗಳ  ಶುದ್ಧ ಮಾಡೋಣ/
ನಿರ್ಮಲ ನಿಕಷದಿ ನಿರಾಳರಾಗೋಣ//


Leave a Reply

Back To Top