ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ ಅವರ ಹೊಸ ಕವಿತೆ
ʼಬದುಕಿಬಿಡೋಣʼ
ಬದುಕಿ ಬಿಡೋಣ
ದೇವರು ಮತ್ತು ಧರ್ಮಗಳ
ಹಂಗು ತೊರೆದು
ಮಂದಿರ- ಮಸೀದಿ-ಚರ್ಚು
ವಿಹಾರ-ಗುರುದ್ವರಾಗಳಾಚೆ
ಗಲ್ಲಿ ಮೊಹಲಗಳಲ್ಲಿ
ಹಗಲು ರಾತ್ರಿ ಆಕಾಶ
ನೋಡುವ ಗುಡಿಸಲು
ಅಲ್ಲಲ್ಲಿ ಚಡ್ಡಿಗೆ ತೇಪೆ
ಚಪ್ಪಲ ಕಾಣದ ಕಾಲುಗಳು
ಎಣ್ಣೆ ನೋಡದ ಕೂದಲು
ಒಮ್ಮೆ ಸುತ್ತಿ ಬರೋಣ
ಊರಿನ ಕೇರಿಯಲ್ಲಿ
ತಗ್ಗು ಬಿದ್ದ ರಸ್ತೆ ನೀರಲ್ಲಿ
ಮಕ್ಕಳ ಒಲಿಪಿಂಕ್ಸ್
ರಸ್ತೆ ಪಕ್ಕ ಗಿಡ-ಗಂಟಿಗಳೇ ಆಶ್ರಯ
ಶೌಚ ಮುಕ್ತ ಭಾರತ ಘೋಷಣೆ
ಅಲ್ಲಿ ಮುಂದೆ,,, ಅಲ್ಲೆಲ್ಲೋ
ಈಗ ಆಗ ಬೀಳುವ ಕಟ್ಟಡ
ಒಳಗೆ ಹೊಕ್ಕು ಬಾ
ಅದು ಅದೇ! ಎಲ್ಲೂ ಸಿಗದ ನೆಮ್ಮದಿ ಶಾಂತಿ
ನಿಲ್ದಾಣ
ಸದಾ ಅರಳುವ ಹೂಗಳ ತಾಣ
ಅಜಾನಿನ ಶಬ್ದ ಗಂಟೆ ಶಬ್ದದಲ್ಲಿ
ಶಾಲೆ ಘಂಟೆ ಎಚ್ಚರಿಸಬೇಕಿತ್ತು
ಮಕ್ಕಳ ಬದುಕಿನ ಬಗ್ಗೆ
ನಾಳಿನ ನಾಡಿನ ಕುರಿತು
ಅದು ಆಗಲೇ ಇಲ್ಲ
ಹೌದು ಬದುಕೋಣ
ಎಲ್ಲಾ ಧರ್ಮದ ಹಂಗು ತೊರೆದು
ಮುಖವಾಡ ಕಳಚಿಟ್ಟು
ಒಡೆದ ಮನಗಳು ಕಟ್ಟುತ್ತಾ
—————
ಉತ್ತಮ ಎ. ದೊಡ್ಮನಿ
ಹೆಸರಿಗೆ ತಕ್ಕಂತೆ ಉತ್ತಮ ಕವಿತೆ
Super bro ❤️