ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
ಡಿಸೆಂಬರ್ 31
ಡಿಸೆಂಬರ್ 31
ಬಂತೆಂದರೆ ಜನರಿಗೆ
ಎಲ್ಲಿಲ್ಲದ ಖುಷಿ ಪ್ರೀತಿ
ಗೆಳೆಯ ಗೆಳತಿಯರ ಸಂಗಮ
ಸಂಜೆಯಾದರೆ ಸಾಕು
ಗುಂಡು ಹಾಕಲು ಸಿದ್ಧ
ಡಿಜೆ ಕರ್ಕಶ ಸಪ್ಪಳ
ಸಂಗೀತ ವಾದ್ಯ ಕುಣಿತ
ಕಂಠಪೂರ್ತಿ ಕುಡಿತ
ದಾರಿಯುದ್ದಕ್ಕೂ ವಾಂತಿ ಓಕಳಿ
ಗಂಡು ಹೆಣ್ಣು ಭೇದವಿಲ್ಲ
ಹುಚ್ಚೆದ್ದು ಕುಣಿವರು .
ರಾತ್ರಿ ಹನ್ನೆರಡು
ಕೂಗುತ್ತಾರೆ ಹೊಸ ವರುಷಕೆ
ಯಾರಾಬಿರ್ರಿ ಗಾಡಿ ಚಾಲನೆ
ಕಂಬಕ್ಕೋ ಮರಕ್ಕೋ ಅಪಘಾತ
ಪೋಲೀಸರ ಪಂಚನಾಮಿ
ಪತ್ರಿಕೆಯಲ್ಲಿ ಸುದ್ಧಿ
ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್
ನಶೆ ಉನ್ಮಾದ ಉತ್ಸಾಹ
ಕಳಚಿದ ಭ್ರಮೆ ಬ್ರಾಂತಿ
ಆಸ್ಪತ್ರೆಯಲೀಗ ಶಾಂತಿ .
ಕೈಯೋ ಕಾಲೋ ಮುರಿತ
ಬುದ್ಧಿ ಬರುವದಿಲ್ಲ ನಮ್ಮವರಿಗೆ
ಡಿಸೆಂಬರ್ 31
ಬಂತೆಂದರೆ ಜನರಿಗೆ
ಎಲ್ಲಿಲ್ಲದ ಖುಷಿ ಪ್ರೀತಿ
ಗೆಳೆಯ ಗೆಳತಿಯರ ಸಂಗಮ .
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
ಹೊಸ ವರ್ಷದ ಆಚರಣೆಯ ಕಟು ಸತ್ಯ ದ ಕವನ ಎಲ್ಲರೂ ವಿಚಾರ ಮಾಡಲೇಬೇಕಾದ ವಿಷಯ…
ಸುತೇಜ
ವಾಸ್ತವವನ್ನು ತೆರೆದಿಟ್ಟ ಕವನ ಅವರವರ ಭಾವಕ್ಕೆ ತಕ್ಕಂತೆ.,..,….
ಸತ್ಯವನ್ನು ಬಿಂಬಿಸುವ ಅದ್ಭುತ ಕವನ
ಎಲ್ಲರೂ ಎಚ್ಚರಗೊಳ್ಳಬೇಕು
ಅಕ್ಕಮಹಾದೇವಿ