ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಕವಿಶೈಲ
ನಾಡಗೀತೆಗೆ ನಾಡಿಮಿಡಿದ
ರಸರುಷಿ ನೀ
ನವಿಲು ಕಲ್ಲು ಕವಿಶೈಲ
ನೀಲಗಗನದಿ ಹಕ್ಕಿಯೊಳಗೆ ದೇವರ ರುಜುಕಂಡು
ನೂರಮತವ ನೂಕಿ
ಭಾರತಾಂಬೆಯೋಳ್ ಜನಿಸಿ
ವಿಶ್ವ ಪಥವ ಬೆಳೆಸಿ
ಮನುಜ ಮತವ ತಿಳಿಸಿ
ಕನ್ನಡ ಡಿಂಡಿಮ ಬಾರಿಸಿ
ಜ್ಞಾನ ಪೀಠದ ಮೊದಲ ಗರಿ ಭುವನೇಶ್ವರಿಗೆ ಮುಡಿಸಿ
ಕವನವಾಯಿತು ನವಿಲುಗರಿ
ಕೂಗಿ ಮೊಳಗಿತು
ಕೊಳಲು ಪಾಂಚಜನ್ಯ
ಕಲಾ ಸುಂದರಿ
ಪ್ರೇಮ ಕಾಶ್ಮೀರ
ಚಂದ್ರ ಮಂಚಕೆ ಬಾ ಚಕೋರಿ
ಹಕ್ಕಿ ಪಕ್ಷಿ ಹೂಬನಕೆ
ಪಕ್ಷಿಕಾಶಿ
ಮಲೆನಾಡಿನ ಸೆರಗಲಿ
ಮದುಮಗಳು ಕಂಡು
ದೀನದಲಿತರ ನೋವಿಗೆ
ಶೂದ್ರ ತಪಸ್ವಿ
ಕಾರ್ತಿಕದ ಕತ್ತಲಲಿ
ಬಸವ ಬೆಳಕು ಬೆಳಗಿ
ರಾಮಾಯಣಂ ಮಹಾ ಕಾವ್ಯ ರಚಿಸಿ
ನೇಗಿಲ ಯೋಗಿಯ
ಬೆವರನು
ಕಿಂದರಿಜೋಗಿಯ ಕುಶಲವ ತೋರಿದ
ಕಲಾ ತಪಸ್ವಿ
ಜಗದ ಕವಿ
ಯುಗದ ಕವಿ
ತೆರೆದಿದೆ ಮನ ಓ ಬಾ ಅತಿಥಿ
ಕನ್ನಡಿಗರ ಮನಮಂದಿರದಲಿ ನಿಮ್ಮದೆ ಪ್ರತೀತಿ.
ಲಲಿತಾ ಪ್ರಭು ಅಂಗಡಿ
Suuper