ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ʼಬೆಳಕ ಬಾಚಿದೆʼ
ಬಿಳಿ ಮೋಡ ಮಾಗಿ ತೂಗಿ
ಮಳೆ ಬರುವ ಹಾಗಿದೆ ಇಂದು
ಸೂರ್ಯನನೇ ನುಂಗಿ
ಕಿರಣಗಳ ಮರೆಮಾಚಿ
ಬೆಳಕನೆಲ್ಲ ಬಾಚಿದೆ
ಹಚ್ಚ ಹಸಿರು ತೂಗುತಿದೆ //
ವಸಂತ ಹಸಿರಾಗಿಸಿದ
ಆ ಗುಡ್ಡಬೆಟ್ಟ ಮೆಲ್ಲ ಮೆಲ್ಲನೆ
ಮಂಜು ಹಾಸಿ ಕಾಣದಾಗಿ
ಎಲೆಗಳ ಮೇಲೆ ಉದುರುವ
ಹನಿ ಜಾರಿ ಜಾರಿ
ಹೊಲಗದ್ದೆಯೆಲ್ಲ ತಂಪು ತಂಪು
ಹೂ ಸುಮಗಳ ಇಂಪು ಇಂಪು //
ಆಕಾಶ ಬಾಗಿ ಬಾಗಿ
ಇಳೆಯ ಚುಂಬಿಸಿದಂತೆ
ಮಣ್ಣ ಕಣಕಣದ ಕಂಪು
ಅರಳಿದೂವಿನ ಪರಿಮಳ
ಗಾಳಿ ಗಂಧದೊಡಗೂಡಿ
ಮನಕೆ ತಂದಿದೆ ಮಂಪರು //
ಸುಳಿ ಸುಳಿದು ತಾಕುತಿಹ
ತಂಗಾಳಿಯ ಹೊನಲಿಗೆ
ಮೈ ಜುಂಮ್ ಎನಲು
ಬಯಕೆ ಬಾಂದಳ ಕಲಕಿ
ಸ್ಪರ್ಶ ಸುಖವನೆಕೊ
ಬಯಸಿತು ಮನ
ಈ ನಿರಾಳ ಬಯಲಿನಲಿ//
ಡಾ ಅನ್ನಪೂರ್ಣ ಹಿರೇಮಠ
Very nice