ಕಾವ್ಯ ಸಂಗಾತಿ
ಶೋಭಾನಾಗಭೂಷಣ
ಸ್ತ್ರೀ ಎಂದರೆ ಅಷ್ಟೇ ಸಾಕೇ?
ಸಾಕೇ ಸಾಕು ಸ್ತ್ರೀ ಎಂದಷ್ಟೇ
ಹೇಳಿದರೆ ಸಾಕು
ಬೇಕಿಲ್ಲ ಯಾವುದೇ ಹಿರಿಮೆ ಗರಿಮೆಗಳು
ದೇವತೆ ಎನ್ನುವ ಪಟ್ಟವು ಬೇಕೇ ಇಲ್ಲ
ಮನುಷ್ಯಳೆಂದು ಕಂಡು ಸುಮ್ಮನಿದ್ದರೆ ಸಾಕು
ನಾರಿಯನ್ನು ಪೂಜ್ಯ ಭಾವನೆಯಿಂದ ಕಾಣಿ
ಎಂದೇನೂ ಬೇಡುವುದಿಲ್ಲ ಎಂದಿಗೂ
ತುಚ್ಛ ರೀತಿಯಲಿ ಕಂಡು ಹಲುಬಿಸಬೇಡ ಎನ್ನುವುದೊಂದೇ ಕೋರಿಕೆ
ಅಡುಗೆಯ ಮೆನೆಯೊಳಗೆ ಬೆಂದವಳ
ಕೈ ಹುಣ್ಣು ನಿನಗೆ ಕಾಣದಿದ್ದರೂ ಬೇಡ
ಅವಳ ಕಣ್ಣೀರು ಅದರೊಳಗೆ ಬೇಯದಿರಲಿ
ಅದರೊಳಗೆ ನಿನ್ನುಸಿರು ಸುಡದಿರಲಿ
ಎಷ್ಟೇ ದುಡಿದರೂ ದೊರೆಯಲಿಲ್ಲ ಸ್ಥಾನಮಾನ
ಎನ್ನುವ ಕೊರಗಿಲ್ಲ ಮನದಲಿ
ದುಡಿಮೆಯ ಪ್ರತಿಫಲವಕಾಣದೇ
ಕಣ್ಣುಮುಚ್ಚ ಬಾರದೆಂಬುದೇ ಆತಂಕ
ಕೋಣೆಯಲಿ ಕೈಸುಟ್ಟು ಹೊರಗಡೆ
ಮನಸುಟ್ಟು ಬದುಕುತಿರುವ ಬಾಳಲಿ
ಜೀವನವು ಆಗದಿರಲಿ ಬೂದಿ ಎಂಬುವುದೇ ಕಾಳಜಿ
ಸ್ಥಾನವಿಲ್ಲದಿದ್ದರೂ ಮಾನವನಾದರೂ ಉಳಿಸಿಕೊಳ್ಳಲು ಬಿಡಿ
ಅವಳಿಗೂ ಒಂದು ಅಸ್ತಿತ್ವವಿದೆ ಬಿಟ್ಟುಬಿಡಿ
ಶೋಭಾನಾಗಭೂಷಣ
ma’am….
Nice mam
Savita Deshmukh
ಉತ್ತಮ ವಾಸ್ತವಿಕ ಚಿಂತನೆ ಎದ್ದು ತೋರುತ್ತದೆ.. ಪ್ರಸ್ತುತ ಸಮಾಜ ಹೊಂದಬೇಕಾದ ಕಾಳಜಿ ಮತ್ತು ಜವಾಬ್ದಾರಿಯನ್ನು ಈ ಕವಿತೆ ಬಿಂಬಿಸುತ್ತಿದೆ..