ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ

ಕೊಳಲೂದಿದಾಗ ಪ್ರೇಮಕಾಶ್ಮೀರಕ್ಕೆ
ಕರೆದಳು ಕಲಾಸುಂದರಿ
ಪಕ್ಷಿಕಾಶಿಯೊಳಗೆ ಕಿಂಕಿಣಿಯಾಗಿ
ಮೆರೆದಳು ಕಲಾಸುಂದರಿ

ನವಿಲಿನಂತೆ ಷೋಡಶಿಯ ರೂಪದಲ್ಲಿ
ಕುಣಿದಳಲ್ಲ ಈಕೆ
ಇಕ್ಷುಗಂಗೋತ್ರಿಯಲ್ಲಿ ಮಂತ್ರಾಕ್ಷತೆ
ಸುರಿದಳು ಕಲಾಸುಂದರಿ

ಅನಿಕೇತನದಿ ಅನುತ್ತರದ ಕಥನ
ಕವನವ ಹಾಡಲೆಯಿಲ್ಲ
ಜೇನಾಗುವಾಯೆಂದು ಕೃತ್ತಿಕೆಯಾಗಿ
ಹರಿದಳು ಕಲಾಸುಂದರಿ

ಪಾಂಚಜನ್ಯ ಮೊಳಗಿಸಿ ಚಂದ್ರಮಂಚಕೆ
ಬಾ ಚಕೋರಿ
ಹೊನ್ನಹೊತ್ತಾರೆ ಸಮಯದಿ ನಲ್ಲನನು
ಬೆರೆದಳು ಕಲಾಸುಂದರಿ

ಮಲೆಗಳಲ್ಲಿ ಮಧುಮಗಳಾಗಿ ಬಂದಳಲ್ಲ
ಅಭಿನವ
ಕಾನೂರು ಹೆಗ್ಗಡತಿಯ ಕನಸುಗಳನು
ತೆರೆದಳು ಕಲಾಸುಂದರಿ


2 thoughts on “ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ

  1. ಗಜಲ್ ಚೆನ್ನಾಗಿದೆ.

    ಮಲೆಗಳಲ್ಲಿ ಮದುಮಗಳು ಅಂತ ಆಗಬೇಕು.

Leave a Reply

Back To Top