ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ ಕವಿತೆ
ʼಕವಿಮನʼ
ಕವಿಮನ ಶ್ರೇಷ್ಠ ವನ
ಪ್ರೀತಿಯ ಹೂಬನ
ನಿತ್ಯವೂ ಯೌವನ
ಕಲ್ಪನಾ ಕವನ|
ಜೇನ ಅಲೆಯಂತೆ
ಎತ್ತರದ ಮುಗಿಲಂತೆ
ಆನಂದ ಕಣ್ತುಂಬುವಂತೆ
ತಂಗಾಳಿಯ ತಂಪಂತೆ|
ಬದುಕು ಜೀವಾಳ
ಕಾವ್ಯದಂತೆ ನಿರಾಳ
ಸದಾ ಮನದಾಳ
ಸ್ಪೂರ್ತಿ ಶಿಖರ|
ನೇಗಿಲು ಹೊತ್ತ ರೈತ
ಬಾಳಿನ ಜೀವಂತ
ಬಿಸಿಲು ಮಳೆಯಲಿ
ದುಡಿವ ಕಾಯಕದಲಿ|
ಕುವೆಂಪು ಪದಸಾಲು
ಚಿಲುಮೆಯ ಮೈಲು
ಅರಳುವ ಹೂವು
ಮನದ ನಲಿವು|
ಗಾಯತ್ರಿ ಎಸ್ ಕೆ