ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಬೆಳದಿಂಗಳು
ಓ ಪ್ರಿಯೇ..,…
ನೀ..ಎಲ್ಲಿರುವೆ.?..
ನಾ ನಿನಗಾಗಿ ಕಾದಿರುವೆ
ಕಾಯಿಸದೆ ಓಡೋಡಿ ಬಾ.. ಬಾ
ಬೇಗ ಬಂದು ಬಿಡು ನನ್ನ ಗೆಳತಿ
ವಿರಹ ಬೇಗೆಯಲಿ ಬಳಲಿಸಬೇಡ ನನ್ನೊಡತಿ
ನಾ ಬೆಳಗುವೆನು ಅನುರಾಗದ ಆರತಿ
ಸ್ವೀಕರಿಸು ಸಖಿ ನನ್ನ ಪ್ರೇಮ ನಿವೇದನೆ
ಓ ಬೆಳದಿಂಗಳ ಚಲುವೆ
ನೀನೆ ನನ್ನ ಪರಪಂಚವೆ
ನೀನಿಲ್ಲದೆ ನನ್ನ ಬಾಳು ನಿರರ್ಥಕವೆ
ನನ್ನ ಸನಿಹ ಸದಾ ನೀನಿದ್ದರೆ
ಅದೇ ಸ್ವರ್ಗ ಸುಖವೆ
ಭವ್ಯ ಸುಧಾಕರ ಜಗಮನೆ