
ಚಳಿಗಾಲದ ಪದ್ಯೋತ್ಸವ
ಟಿ.ಪಿ.ಉಮೇಶ್ ಹೊಳಲ್ಕೆರೆ
ನೀ… ಚಳಿ!

ಚಳಿಯಲ್ಲೆೇ ನೆನಪಾಗಿ;
ಬೇಕಿನಿಸುವುದು ಭರ್ಜರಿ ನಿನ್ನ ಸಿಟ್ಟಿನ ಬೇಸಿಗೆ!
**
ಬಿಸಿಲು ಬೆವರಿಳಿಸಿ ಚಳಿಗೆ ಸುಖ ನಿದ್ದೆ;
ನಿನ್ನ ಬೆಚ್ಚನೆಯ ಪ್ರೀತಿ ನೆನಪುಗಳಲಿ!
**
ಬೇಸಿಗೆ ಕಾವು; ಮಳೆಯ ಮಾಗು;
ಚಳಿಯ ಚಿಗುರು!
**
ಬೇಸಿಗೆಯಲಿ ವಿರಾಮ;
ಮಳೆಯಲ್ಲಿ ಓಂನಾಮ;
ಮಳೆಯಲ್ಲಿ ರಾಮರಾಮ!
**
ಚೈತ್ರದ ಚಿಗುರಿಗೆ ಚಳಿಯ ಮುಸುಕಲ್ಲಿ
ಮಳೆಯ ಮುತ್ತು!
**
ಬೇಸಿಗೆ ವಿರಾಮಕ್ಕೆ ಮಳೆಯ ಎಚ್ಚರ
ಚಳಿಯ ಮಂಪರು!
**
ಆಷಾಢದಲಿ ಕಾಡುವುದು
ಹುಸಿ ಕೋಪದ ಬೇಸಿಗೆ!
**
ಚೈತ್ರಳ ಕನಸು; ವಿಶಾಖಿಯಲಿ ಚಿಗುರಿ;
ಜ್ಯೇಷ್ಠಿಯಲಿ ಕುಡಿಯೊಡೆದು;
ಆಷಾಢಕೆ ಬಳ್ಳಿ ಬಳ್ಳಿ; ಶ್ರಾವಣಿಗೆ ತೋರಣ!
————————————-
ಟಿ.ಪಿ.ಉಮೇಶ್ ಹೊಳಲ್ಕೆರೆ
