ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ನನ್ನ ಹೃದಯದ ಮಾತುಗಳು
ನಾ ನಿನ್ನ ಭಾವನೆಯ ಮೌನದಲಿ ಬೆನ್ನೆರಿರಲು
ಬಣ್ಣದ ಚಿಟ್ಟೆ ದುಂಬಿಯಂತೆ ಮುಗಿಲೇರಿರಲು!
ಖುಷಿಯಲಿ ತೇಲಿರುವೆ ತಣ್ಣನೆಯ ತಂಗಾಳಿಯ ಅಮಲು
ನಿನ್ನ ಉಸಿರಲ್ಲಿ ಈ ನನ್ನ ಹೆಸರು ಹಸಿರಾಗಿರಲು!!
ಈ ಮಿಡಿತ ಜೊತೆಯಾಗಿ ನಲಿದು ಹೂವಾಗಲು
ಇಬ್ಬರ ಹೃದಯದ ಮಾತುಗಳು ಮನ ಮುಟ್ಟಲು!
ಈ ಬೆಸುಗೆ ಜನುಮಗಳ ಅನುಬಂಧ ಜೇನಂತಿರಲು
ಯಾರಿಲ್ಲ ನನ್ನಂತೆ ನಿನ್ನ ನೆರಳಿಗೆ ನನ್ನ ಕನಸಿರಲು!!
ಚಿಗುರಿದ ಗಿಡದಲ್ಲಿ ಮೊಗ್ಗಾಗಿ ಹೂವಂತೆ ನೀನಿರಲು
ನಿನ್ನ ಮುಟ್ಟಿದ ಮುತ್ತಿನ ಮಳೆ ಹನಿಗಳು ನಾನಾಗಿರಲು!
ನಾಚಿದೆ ಈ ಪ್ರಕೃತಿಯು ನಮಿಬ್ಬರ ಬೆಸುಗೆ ನೋಡಿರಲು
ಯಾರ ದೃಷ್ಟಿ ಬೀಳದಿರಲಿ ನಮ್ಮನ್ನು ಬೇರೆ ಮಾಡದಿರಲು!!
ಕಾವ್ಯ ಪ್ರಸಾದ್
ಚಂದದ ಬರಹ