ಕಾವ್ಯ ಸಂಗಾತಿ
ಲಕ್ಷ್ಮಿ ಮಧು ಅವರ ಕವಿತೆ-
ಹೇಳಬಾರದಿತ್ತು…
ಹಸಿದ ಗುಬ್ಬಿಮರಿಗಳಂತೆ
ಎದೆಯ ಗೂಡಲ್ಲವಿತು
ಚಿoವುಗುಡುತ್ತಿದ್ದ ಮಾತುಗಳನ್ನು ನಾನು ಕವಿತೆಯಾಗಿಸಿ
ಹಾರಬಿಡಬಾರದಿತ್ತು
ವಿಮರ್ಶೆಯ ಹದ್ದುಗಳಿಗವು
ಬಲಿಯಾಗಿಹೋದವು..!!
ಇನ್ನೂ ಹೇಳುವುದಿತ್ತು…,
ಕುದಿವ ಅಗ್ನಿರಸದಂತೆ
ಕರುಳಸುರುಳಿಗಳನ್ನು ಕೊರೆಯುತ್ತ ಹರಿಯುತ್ತಿದ್ದ ಮಾತುಗಳನ್ನು
ನಾನು ಕಥೆಯಾಗಿಸಿ
ಹೇಳಬೇಕಿತ್ತು
ನಿಮ್ಮ ಕಂಬನಿಗಳುದುರಿ
ಉರಿ ತಣಿಯಬಹುದಿತ್ತು..!!
ಇರಲಿ ಪರವಾಗಿಲ್ಲ..,
ಹೇಳಿದ ಮತ್ತು ಹೇಳದ
ನನ್ನ ಮಾತುಗಳ ಒಳಗಾದರೂ
ನಾನು ಎಲ್ಲಿದ್ದೆ
ಹುಟ್ಟದೆಯೇ ಸತ್ತುಹೋದ ಮಾತುಗಳ
ಬಾಚುವುದರಲ್ಲಿ ನಾನು ಮಗ್ನಳಾಗಿದ್ದೆ..!!
̲——————————————————————————————–
ಲಕ್ಷ್ಮಿ ಮಧು
ವಾವ್ ಲಕ್ಷ್ಮೀ