ಕಾವ್ಯ ಸಂಗಾತಿ
ಗಾಲಿಬ್ ಜನ್ಮದಿನಕ್ಕೊಂದು
ಗಜಲ್-
ವೈ.ಎಂ.ಯಾಕೊಳ್ಳಿ
ಮದಿರೆಯ ಮೋಹವನ್ನು ತೊರೆಸಿದವನು ಗಾಲಿಬ್
ನಿದಿರೆಯ ವ್ಯಾಮೋಹವನ್ನು ಕಸಿದವನು ಗಾಲಿಬ್
ಗಜಲಿನ ಬಂಧದಲಿ ಜಗವನೇ ಅವ ತೇಲಿಸಿದನು ಸತತ
ತನ್ನ ಜೀವವನೇ ಗಂಧ ವಾಗಿ ಉರಿಸಿದವನು ಗಾಲಿಬ್
ಕಾವ್ಯ ಮತ್ತುಪ್ರೇಮ ಎರಡೂ ಬೇರಲ್ಲವೆಂದುಲಿದವನು
ಪ್ರಾಮಾಣಿಕತೆಯ ಪ್ರೇಮದಲಿ ಮೆರೆಸಿದವನು ಗಾಲಿಬ್
ಸುಳ್ಳಿನ ದಾರಿಗಳ ಹಂಗುಗಳ ನಿರಾಕರಿಸಲು ಕಲಿಸಿದನು
ನಿಜದಗ್ನಿದಿವ್ಯದ ಮಾರ್ಗದಲಿ ನಡೆ ಕಲಿಸಿದವನು ಗಾಲಿಬ್
ಕಾವ್ಯದಲೆ ಜಗವ ಸೋಲಿಸಬಹುದೆಂದು ಕಲಿಸಿದ ಜೋಗಿ
ವ್ಯರ್ಥಕಗ್ಗದದಾರಿ ಸಗ್ಗದ ದಾರಿಯಲಿ ಇರಿಸಿದವನು ಗಾಲಿಬ್
ವೈ.ಎಂ.ಯಾಕೊಳ್ಳಿ
ಗಾಲಿಬ್ ನಿಮ್ಮ ಗಜಲ್ ಮೆಚ್ಚಿದ್ದಾರೆ.