ಮಧುಮಾಲತಿರುದ್ರೇಶ್‌ ಅವರ ಕವಿತೆ-ಮರೆತೂ ಮರೆಯದಿರು

ಕದ್ದು ಕದ್ದು ನೋಡುತಿಹೆ ಏಕೆ ಮಾಧವ
ನಾನೆಂದೋ ಅರಿತಿಹೆ ನಿನ್ನಂತ ರಂಗವ

ಕಿವಿಯಲಿ ಉಸುರಿಹುದು ಆ ಮಲಯ ಮಾರುತ
ನೀ ಬರುವ ಸದ್ದನು ರಟ್ಟು ಮಾಡುತ

ಸಾವಿರ ಗೋಪಿಕೆಯರು ನಿನ್ನರಸಿ ಬಂದರೂ
ಬಲ್ಲೆ ನಾನು ಈ ರಾಧೆಯೇ ನಿನ್ನ ಉಸಿರು

ಕಂಡೆ ನನ್ನನೇ ನಿನ್ನ ಕಂಗಳ ಕೊಳದಲಿ
ಅಂತರವೆಲ್ಲಿಯದು ಈ ನಮ್ಮ ಅಂತರಂಗದಲಿ

ಉಸಿರ ಕಣಕಣದಲೂ ನೀ ಬೆರೆತಿರಲು
ಸವಿ ಯಾತನೆಯಿದೆ ನಿನ್ನ ಕಾಯುವಿಕೆಯಲೂ

ನೀ ಬರುವೆಯಾದರೆ ಯುಗವೂ ಕ್ಷಣದಂತೆ
ಕಾಪಿಡುವೆ ನಿನ್ನೊಲವ ಆ ಕಣ್ಣ ರೆಪ್ಪೆಯಂತೆ

ತೊರೆಯದಿರು ಈ ಮಧುರ ಮೈತ್ರಿಯನು
ಮರೆತೂ ಮರೆಯದಿರು ಈ ರಾಧೆಯನು


4 thoughts on “ಮಧುಮಾಲತಿರುದ್ರೇಶ್‌ ಅವರ ಕವಿತೆ-ಮರೆತೂ ಮರೆಯದಿರು

  1. ನಿಮ್ಮ ಕವನದಲ್ಲಿರುವ ಪ್ರಾಸ
    ಓದುಗರಿಗೆ ತರುವುದಿಲ್ಲ ತ್ರಾಸ
    ವೃದ್ಧಿಸುತ್ತದೆ ಮನೋಲ್ಲಾಸ
    ಪರಿದಿಯ ವ್ಯಾಸ

    1. ನಿಮ್ಮ ಕವನದಲ್ಲಿರುವ ಪ್ರಾಸ
      ಓದುಗರಿಗೆ ತರುವುದಿಲ್ಲ ತ್ರಾಸ
      ಬದಲಾಗಿ ವೃದ್ಧಿಸುತ್ತದೆ
      ಮನೋಲ್ಲಾಸ ಪರಿದಿಯ ವ್ಯಾಸ

Leave a Reply

Back To Top