ʼಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ- ಗೊರೂರು ಅನಂತರಾಜು

[6:55 pm, 17/12/2024] anantharaju040: ನಾಟಕ ಮತ್ತು  ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಾಕಷ್ಟು ಮುಂಚಣಿಯಲ್ಲಿದೆ. ಇಲ್ಲಿಯ ಅನೇಕ ಕಲಾವಿದರು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆ ಪಟ್ಟಿಯೂ ಸಾಕಷ್ಟು ದೊಡ್ಡದಿದೆ. ಈ ಪಟ್ಟಿಯಲ್ಲಿ ಸೇರುವ ಇನ್ನೊಂದು ಹೆಸರು ಉಮೇಶ್ ತೆಂಕನಹಳ್ಳಿ.  ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಉದಯಪುರ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಕ ಕಲಿಸಿ ಹಾಸನದ ಕಲಾಭವನದಲ್ಲಿ ಪ್ರದರ್ಶಿಸಿದ್ದರು. ಆಗ ಪರಿಚಿತರಾದ ಇವರ ಕಲಾ ಚಟುವಟಿಕೆಯನ್ನು ಗಮನಿಸುತ್ತಾ ಬಂದಿರುವೆ. ಇತ್ತೀಚಿಗೆ ಚನ್ನರಾಯಪಟ್ಟಣಕ್ಕೆ ಹೋಗಿದ್ದಾಗೆ ಇವರ ಕಲಾ ಶಾಲೆಗೆ ಕರೆದುಕೊಂಡು ಹೋದರು. ಇಲ್ಲಿಯ ಗಾಯತ್ರಿ ಬಡಾವಣೆಯಲ್ಲಿ ವಿಜಯ ಕರ್ನಾಟಕ ವರದಿಗಾರರು ಎ.ಎಲ್.ನಾಗೇಶ್ ಅವರು ರಂಗ ಚಟುವಟಿಕೆಗೆ ಅನುಕೂಲವಾಗುವ ಕಟ್ಟಡ ಒದಗಿಸಿದ್ದಾರೆ.  ಇಲ್ಲಿ  ನೂರು ನೂರೈವತ್ತು ಮಂದಿ ನಾಟಕ ಜಾನಪದ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಿದೆ. ಪ್ರತಿಮಾ ಟ್ರಸ್ಟ್ ದಶಕಗಳಿಂದ ನಿರಂತರ ಕಲಾ ಚಟುವಟಿಕೆಗಳಿಂದ ಮನೆ ಮಾತಾಗಿದೆ. ಈ ಚಟುವಟಿಕೆಗಳ ಕೇಂದ್ರ ಬಿಂದು ಅಧ್ಯಕ್ಷರು ಉಮೇಶ್ ತೆಂಕನಹಳ್ಳಿ ಬೆಂಗಳೂರಿನ ರಾಷ್ಟ್ರೀಯನಾಟಕ ಶಾಲೆಯಲ್ಲಿ ನುರಿತ ರಂಗಕರ್ಮಿಗಳಿ೦ದ ತೆರಬೇತಿ ಪಡೆದು ತಾವು ಕಲಿತ ಕಲೆಯನ್ನು ಯುವಕರಿಗೆ ಕಲಿಸುತ್ತಿದ್ದಾರೆ. ಜನಪದ ಕಲೆಗಳು ಕಂಸಾಳೆ, ಪಟಕುಣಿತ, ರಂಗದ ಕುಣಿತ, ಪೂಜಾ ಕುಣಿತ. ಸೋಮನ ಕುಣಿತ, ವೀರ ಗಾಸೆ, ಸೋಬಾನೆ ಪದ, ಜಾನಪದ ಗೀತೆಗಳ ಗಾಯನ, ನಾಟಕ, ಸಮಕಾಲೀನ ಸಮಸ್ಯೆಗಳ ಕುರಿತ ಚಿಂತನ ಮಂಥನ, ಪರಿಸರ ಜಾಗೃತಿ ಹೀಗೆ ನಾನಾ ಪ್ರಕಾರಗಳಲ್ಲಿ ಪ್ರತಿಮಾ ಟ್ರಸ್ಸ್ ತನ್ನ ಕಾರ್ಯ ಚಟುವಟಿಕೆ  ವಿಸ್ತರಿಸಿಕೊಂಡಿದೆ. ಇದುವರೆಗಿನ ತನ್ನೆಲ್ಲ ಚಟುವಟಿಕೆಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಯಶಸ್ವಿ ಕಾರ್ಯಕ್ರಮ ಸಂಘಟಿಸಿದೆ. ಪುಟಾಣಿ ಮಕ್ಕಳಿಗಾಗಿ ರೂಪಿಸಿದ ಕಥಾ ಸುಗ್ಗಿಗೆ ಕಥೆ ಹೇಳಲು  ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ತಜ್ಞರನ್ನು ಕರೆಸಿ ಮಕ್ಕಳೊಂದಿಗೆ ಕಥೆ ಕುರಿತಾಗಿ ಚರ್ಚಿಸಿ ಮಕ್ಕಳೇ ಸ್ವತ: ಕಥೆಗಳನ್ನು ಕಟ್ಟಿ ಹೇಳಲು ಪ್ರೇರೇಪಿಸುವುದು ಸಾರ್ಥಕ್ಯವಾಗಿದೆ. ಇದು ಮಕ್ಕಳಲ್ಲಿ ಭಾಷೆಯ ಮೂಲ ಕೌಶಲ್ಯ ಆಲಿಸುವಿಕೆ ಮಾತನಾಡುವಿಕೆಯನ್ನು ಬೆಳೆಸಲು  ಸಹಕಾರಿ.  ಪ್ರತಿ ವರ್ಷ ನಾಟಕ ತರಭೇತಿ ಶಿಬಿರ ನಡೆಸಿ ಟ್ರಸ್ಟ್  ಸದಸ್ಯರು ಒಳಗೊಂಡು ವಿದ್ಯಾರ್ಥಿಗಳಿಗೆ ತರಭೇತಿಯಲ್ಲಿ ಕೇವಲ ಅಭಿನಯಕ್ಕಷ್ಟೇ ಒತ್ತುಕೊಡದೆ ರಂಗಪರಿಕರಗಳ ತಯಾರಿಕೆ, ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಸಂಗೀತ ಹೀಗೆ ನಾಟಕಕ್ಕೆ ಪೂರಕ ವಿವಿಧ ಆಯಾಮಗಳನ್ನು ಪರಿಚಯಿಸಿದೆ. ಶಿಬಿರದಲ್ಲಿ ರೂಪುಗೊಂಡ ನಾಟಕಗಳು ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರದರ್ಶಿತಗೊಂಡಿವೆ.  ಪುರಸ್ಕಾರ ಪಡೆದಿವೆ. ಕಾರಾಗೃಹದ ಖೈದಿಗಳ ಮನ ಪರಿವರ್ತನೆಗೆ ಪೂರಕ ನಾಟಕ ಕಲಿತು ಪ್ರದರ್ಶಿಸಲಾಗಿದೆ. ಜಾನಪದ ಜಗುಲಿ ಶೀರ್ಷಿಕೆಯಡಿ ಗೀಗೀಪದ, ಮಂಟೇಸ್ವಾಮಿ ಪದಗಳು, ಸೋಲಿಗರ ಹಾಡು, ಲಾವಣಿ, ತತ್ವಪದಗಳು, ಮಲೆಮಹೇಶ್ವರ ಹಾಡುಗಳನ್ನು ಅಭ್ಯಾಸ ಮಾಡಿ ಟ್ರಸ್ಟ್ ತಿರುಗಾಟ ಕಾರ್ಯಕ್ರಮದಲ್ಲಿ ಪ್ರಸ್ತುತಿಪಡಿಸಿದ್ದಾರೆ. ಜಾನಪದ ನೃತ್ಯ  ತರಭೇತಿ ಪಡೆದ ವಿದ್ಯಾರ್ಥಿಗಳು ಮಹಾಮಸ್ತಕಾಭಿಷೇಕ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತಿಭೆ ತೋರಿದ್ದಾರೆ.  ಪರಿಸರ  ಜಾಗೃತಿಗಾಗಿ ಮಳೆಗಾಲ ಆರಂಭದಲ್ಲಿ ಶಾಲಾ ಅಂಗಳ, ದೇವಾಲಯ ಪ್ರಾಂಗಣ, ರಸ್ತೆ ಬದಿ  ಗಿಡ ನೆಟ್ಟು ಆರೈಕೆ ಮಾಡುವ ಸತ್ಕಾರ್ಯವೂ ನಡೆದಿದೆ. ವಾರ್ಷಿಕ ಶಿಬಿರಗಳಲ್ಲಿ ಮಣ್ಣಿನಿಂದ, ಕಾಗದದಿಂದ ಗೊಂಬೆ ತಯಾರಿಸುವುದು, ಚಿತ್ರ ಬರೆಯುವುದು, ಬಣ್ಣ ಹಾಕುವುದು, ಚಾಪೆ ಬುಟ್ಟ ಹೆಣೆಯುವುದು, ಅನುಪಯುಕ್ತ ವಸ್ತುಗಳಿಂದ ಅಲಂಕಾರಿಕೆ ವಸ್ತುಗಳನ್ನು ತಯಾರಿಸುವುದನ್ನು ಹೇಳಿಕೊಡಲಾಗಿದೆ.  ಗ್ರಾಮೀಣ ಆಟ ಅಳಗುಳಿ ಮನೆ, ಉಪ್ಪಿನ ಮನೆ, ಚೌಕಾಬಾರಾ, ಪಗಡೆ ಮೊದಲಾದ ಆಟಗಳನ್ನು ಆಡಿಸಿ ಹಾಡು ನೃತ್ಯ ನಾಟಕ ಕಲಿಸಿ ಬೇಸಿಗೆ ಶಿಬಿರ ಯಶಸ್ವಿಯಾಗಿದೆ. ಪ್ರತಿಮಾ ಟ್ರಸ್ಟ್ ಮಹತ್ವಾಕಾಂಕ್ಷಿ ವೇದಿಕೆ ಅದು ಚಿಂತನ ಮಂಥನ. ಇದು ಪುಸ್ತಕಾಧಾರಿತ ಚರ್ಚೆಯಾಗದೆ ಚಿಂತಕರ ಸ್ವಾನುಭವ ಮತ್ತು ಚಿಂತನೆ ಆಧರಿಸಿದೆ.  ಇದಿಷ್ಟು ಮಾಹಿತಿ ಜೊತೆಗೆ ಉಮೇಶ್ ಅ ಕಾರ್ಯಕ್ರಮ ಪೋಟೋ ಕಳಿಸಿದರು. ಪ್ರತಿಮಾ ಟ್ರಸ್ಟ್ ಚಟುವಟಿಕೆಗಳು ಹಲವು ಕವಲುಗಳಾಗಿ ಟಿಸಿಲೊಡೆದು ಧುಮ್ಮಿಕ್ಕಿ ಹರಿಯುವ ನದಿಯಂತೆ ಸಾಗಿ ತನ್ನದೇ ಛಾಪು ಮೂಡಿಸಿದೆ. ಶುಭವಾಗಲಿ ಉಮೇಶ್.
———————————————————-

Leave a Reply

Back To Top