ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಅಪರೂಪ
ಹೂವರಳಿದೆ
ಮನ ಮುದಗೊಂಡಿದೆ
ಸೆಳೆತ ನಿನ್ನಲ್ಲಿದೆ
ಹಾಡುವ ಬಯಕೆ ನನ್ನಲ್ಲಿದೆ
ಬದುಕು ಬಂಗಾರವಿದು
ಮಧುರ ಕ್ಷಣವಿದು
ಕಾತುರವು ಮಾತಿನಲ್ಲಿ
ಮೂಡಿರುವ ಪ್ರೀತಿಯಲ್ಲಿ
ನೀನಾದವು ಮನಸ್ಸಿನಲ್ಲಿ
ಒಲವಿನ ಬಣ್ಣದಲ್ಲಿ
ಹೊಸರೀತಿಯಿದು
ಮಾಧುರ್ಯವಿದು
ನೋಡಿದಲೆಲ್ಲ ಇನಿಯನ ರೂಪ
ಪ್ರೀತಿಯಿದು ಅಪರೂಪ
ಮಿಂಚುವ ಅತಿ ಸಮೀಪ
ಹೊಸತನದ ಮಧುರ ಪ್ರತಿರೂಪ
ಗಾಯತ್ರಿ ಎಸ್ ಕೆ