ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ –
ವೃಕ್ಷ-ವಿರಹ
ಮಾಗಿಯ ಚಳಿಗೆ
ನಡುಗಿ ನಲುಗಿ
ಸೆಟೆದು ಹೋಗಿರುವೆ
ನಾ ಹೊದಿಕೆ ಇಲ್ಲದೆ..
ಹೀನ ಹೇಮಂತ
ನಿರ್ದಯಿ ಕ್ರೂರಿ
ಹೂ ಮೊಗ್ಗು ಎಲೆಗಳ
ಮುರುಟಿಸಿ ಉದುರಿಸಿ
ನನ್ನ ಬೆತ್ತಲೆಯಾಗಿಸಿ
ತರಗುಗಳ ತೂರುತಲಿ
ಹಾರಿ ಹೋದ…
ಬರಡು ಕೊಂಬೆ-ರೆಂಬೆಗಳಲಿ
ಹಸಿರು ಚಿಗುರ ಚಿಗುರಿಸಿ
ಜೀವತುಂಬಿ ಮೈದುಂಬಲು,
ನಗುವ ಹೂವರಳಿಸಿ
ನಳನಳಿಸಿ ನಲಿಯಲು
ಕಾತರಿಸಿ ಮೈಚಾಚಿ
ಕಾದಿರುವೆ ನಿನಗಾಗಿ
ಬಾ ಬೇಗ ವಸಂತ….
ಹಮೀದಾಬೇ ಗಂ ದೇಸಾಯಿ.
ಸುಂದರ ಕವಿತೆ ಅಕ್ಕ
ವಸಂತನ ಆಗಮನಕ್ಕೆ ತಹತಹಿಸುತ್ತಿರುವ ಪ್ರಕೃತಿ