ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು .ಕಾಣಲಾರೆನಯ್ಯಾ ನಿಮ್ಮುವನು. ಭೇದಿಸಲರಿಯೆ .ಮಾಯದ ಸಂಸಾರದಲ್ಲಿ ಸಿಲುಕಿದೆನು ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ .ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮ.
ಈ ಜಗತ್ತಿನಲ್ಲಿರುವ ಬಹುಪಾಲ ಜನರು ತಮ್ಮ ಹೊಟ್ಟೆ ಉದರಕ್ಕಾಗಿಯೇ,ಬದುಕು ಸಾಗಿಸ ಹೊರಟಿರುವ ಜೀವಿಗಳು .ಅನೇಕ ಎಡರು ತೊಡರುಗಳ ಮದ್ಯ .ಅನೇಕ ಜನಕೃತ ವೇಷಗಳನ್ನು ಹಾಕಿ ತಿರುಗುವ ಜನರನ್ನು ಕಾಣಬಹುದು .
ಈ ಮಾಯಾ ಪ್ರಪಂಚದ ಏಳು ಬೀಳಿನ ನಲಿವಿನಲಿ ಎದ್ದು ಸಾಗುವ ದಿವ್ಯ ಅನುಭವ ಜನರಿಗೆ ಆಗುವುದು .
ಈ ಜಗತ್ತಿನ ಬಹುಪಾಲು ಜನ ಈ ಸಂಸಾರ ಎಂಬ ಬಂಧನದಿಂದ ಪಾರು ಆಗುವ ಬಗೆಯನ್ನು ಕಂಡರೆ, ಇನ್ನೂ ಕೆಲವು ಜನ ಸಂಸಾರದಲ್ಲೇ ಇದ್ದುಕೊಂಡೆ ದೇವರನ್ನು ಕಾಣುವ ಬಗೆಯನ್ನು ಕಾಣಬಹುದಾದ ಅನೇಕ ಶರಣರ ವಚನಗಳು ನಮಗೆ ಮಾದರಿಯಾಗಿ ನಿಲ್ಲುತ್ತವೆ .ಅಕ್ಕಮಹಾದೇವಿಯವರ ಈ ಒಂದು ವಚನದಲ್ಲಿ .
*ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು .
ಕಾಣಲಾರೆನಯ್ಯಾ ನಿಮ್ಮುವನು*
ಹೇ ಚೆನ್ನಮಲ್ಲಿಕಾರ್ಜುನಾ ನನ್ನ ಮನ ನನ್ನ ಉದರ ಅಂದರೆ,ನನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದರಲ್ಲೇ ನಾನು ನನ್ನ ಹೆಚ್ಚಿನ ಸಮಯವನ್ನು ಕಳೆದೆ .ನಿನಗಾಗಿ ನಾನು ನನ್ನ ಸಮಯವನ್ನು ಕಳೆಯಲಿಲ್ಲ. ಹೇ ಚೆನ್ನಮಲ್ಲಿಕಾರ್ಜುನಾ .
ಯಾರು ನಿನಗಾಗಿ ಹಂಬಲಿಸುತ್ತಿದ್ದಾರೆ ?
ಯಾರೂ ನಿನ್ನ ಬಗ್ಗೆ ಚಿಂತಿಸಲಾರರು. ಅವರವರ ಹೊಟ್ಟೆಯನ್ನು ತುಂಬಿಸಿಕೊಳ್ಳುವುದರಲ್ಲೇ ಕಾಲವನ್ನು ಕಳೆಯುತ್ತಿದ್ದಾರೆಯೇ ಹೊರತು, ನಿನಗಾಗಿ ಮರುಗುವವರನ್ನು ನಾ ಕಾಣೆ ಚೆನ್ನಮಲ್ಲಿಕಾರ್ಜುನಾ .
ಭೇದಿಸಲರಿಯೆ .ಮಾಯದ ಸಂಸಾರದಲ್ಲಿ ಸಿಲುಕಿದೆನು .
ಹೇ ದೇವಾ ಚೆನ್ನಮಲ್ಲಿಕಾರ್ಜುನಯ್ಯ .ಈ ಮಾಯಾ ಪ್ರಪಂಚದಲ್ಲಿರುವ ಸಂಸಾರ ಎಂಬ ಜಂಜಾಟದ ಬಲೆಯಲಿ ಎನ್ನ ಮನ ಸಿಲುಕಿ ಚಂಚಲವಾಗಿದೆ .ನನ್ನ ಮನಸ್ಸು ನೀರಿನ ಹಾಗೆ ಹರಿಯುತ್ತಿದೆ. ಅದು ಒಂದು ಕಡೆ ನಿಲ್ಲುತ್ತಿಲ್ಲ. ಈ ತೆರನಾದ ಮನವನ್ನು ನಾನು ಹೊತ್ತು ತಿರುಗುತ್ತಿರುವೆ. ಹಲವು ತೆರನಾಗಿ ತಿರುಗುವ ಹಲವು ಕಡೆ ಅಲೆಯುವ ನನ್ನ ಮನವನ್ನು ಒಂದು ಕಡೆ ನಿಲ್ಲಿಸಿ ಹಿಡಿದಿಟ್ಟು ನಿಮ್ಮತ್ತ ತೋರು ಎನ್ನದೇವಾ ಚೆನ್ನಮಲ್ಲಿಕಾರ್ಜುನಾ .
ಚೆನ್ನಮಲ್ಲಿಕಾರ್ಜುನಯ್ಯಾ .
ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮ
ಈ ಸಂಸಾರ ಎಂಬ ಮಾಯದ ಬಲೆಯಲ್ಲಿ ಸಿಲುಕಿ ಹೊರ ಬರದೇ ನರಳಾಡಿ ಅದರಲ್ಲಿಯೇ ಇದ್ದು ಬಿಡುತ್ತಾರೆ .ಆದರೆ 12 ನೇ ಶತಮಾನದ ಶರಣರು ಈ ಸಂಸಾರ ಎಂಬ ಬಂಧನದಿಂದ ಬಿಡುಗಡೆ ಬಯಸದೇ ,ಸಂಸಾರದಲ್ಲಿ ಇದ್ದುಕೊಂಡೇ ಕಾಯಕ ಜೀವಿಗಳಾಗಿ ನಿಜದ ಅರಿವು ಅರಿತು . ಇದ್ದು ಇಲ್ಲದಂತೆ ಇದ್ದು ತಾವೇ ದೇವರಾಗಿ ಹೋದರು .ನನ್ನನ್ನು ಸಹ ಈ ಸಂಸಾರದ ಜಂಜಾಟದಿಂದ ಮುಕ್ತ ಗೊಳಿಸಿ ನಮ್ಮತ್ತ ತೋರಾ .ಅದು ನಿಮ್ಮ ಧರ್ಮ ಎನ್ನುತ್ತಾಳೆ ಅಕ್ಕಮಹಾದೇವಿಯವರು
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
Super
ವಚನದ ಅರ್ಥ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ,