ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಾಹಿತ್ಯ ಸಮ್ಮೇಳನ
ಸಾಹಿತ್ಯ ಸಮ್ಮೇಳನ
ದೊಡ್ಡ ಶಾಮಿಯಾನ
ಝಗ ಮಗಿಸುವ
ಲೈಟು ಬೆಳಕು
ಮೈಕಿನ ಕಿರುಚಾಟ
ಮೈಕಿನ ಮುಂದೆ
ಶುದ್ಧ
ನರ ಸಂಹಾರಿ
ಶಾಖೆಹಾರಿ ಭಾಷಣ.
ವೇಷಧಾರಿಗಳ ಕುಣಿತ
ಡೊಳ್ಳು ವಾದ್ಯ ಬಡಿತ
ಅಕ್ಷರ ಜಾತ್ರೆ
ಶಬ್ದಗಳ ಸಂಭ್ರಮ
ಬಂದವರ ಮಾತು
ಉಂಡು ಸಾಗುವ
ಕೊಂಡು ಹೋಗುವ
ಭಂಡರ ಸಂತೆ
ಬಾಡೂಟಕೆ ಸಂಪು
ಭರ್ಜರಿ ಊಟ
ಕನ್ನಡ ಉಳಿಸ ಬನ್ನಿ
ಸಂಜೆ ಮಂತ್ರಿಯ ಕರೆ
ಟಿವಿ ಪತ್ರಿಕೆ
ಮಾಧ್ಯಮದವರ ಹಬ್ಬ
ಮೂಲೆಯಲ್ಲಿ
ಸೊರಗುವ ಪುಸ್ತಕ
ಸಾಯದೆ ಕೈ ಕಟ್ಟಿ
ನಿಂತ ಲೇಖಕ ಪ್ರಕಾಶಕ
ಮಾಡಿ ಮುಗಿಸುವರು
ಸಾಹಿತ್ಯ ಯಾತ್ರೆ
ಮೊದಲಿನಂತೆ
ಬದಲಾಗಿಲ್ಲ
ಬದಲಾಗುವುದಿಲ್ಲ
ಬಡವಾಯಿತು ಕನ್ನಡ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನಿಜ ಸರ್ , ಕನ್ನಡ ಸೊರಗುತಿದೆ
ಕನ್ನಡದವರು ಎಚ್ಚೆತ್ತುಕೊಳ್ಳಬೇಕು
ಅಕ್ಕಮಹಾದೇವಿ
ಸಾಹಿತ್ಯ ಸಮ್ಮೇಳನದ ವಿಡಂಬಾನತ್ಮಕ ಕವನ ವಾಸ್ತವಕ್ಕೆ ಹಿಡಿದ ಕೈಗನ್ನಡಿ
ಸುತೇಜ
ವಾಸ್ತವದ ಅಭಿವ್ಯಕ್ತಿ
ಅತ್ಯುತ್ತಮ ಕವನ ಸರ್