ಕಾವ್ಯ ಪ್ರಸಾದ್ ಅವರ ಕವಿತೆ-ಬಾಬಾ ಸಾಹೇಬ ಅಂಬೇಡ್ಕರ್

ಬಾಬಾ ಸಾಹೇಬ ಅಂಬೇಡ್ಕರ್ ಹೆಸರಲ್ಲಿದೆ ಧೈರ್ಯವು
ಉತ್ತುಂಗದ ಶಿಖರದಲ್ಲಿ ಹೊಳೆಯುವ ಮುತ್ತುವು!
ಅಸ್ಪೃಶ್ಯತೆಯ ವಿರುದ್ಧ ನೀನು ಹೋರಾಡಿದ ಗುರುವು
ಜೈ ಭೀಮ್ ಅಂದ್ರೆ ನೀತಿಯೋ ನೀನು ನಮಗೆಲ್ಲ ಬಲವು!!

ನಮ್ಮ ನಿಮ್ಮೆಲ್ಲರ ಹೇಳಿಗೆಯ ಮಾರ್ಗವನ್ನು ಕಂಡು ಕೊಂಡಾತ
ದೇಶದ ಒಳಿತಿಗಾಗಿ ಎಲ್ಲಡೆ ಓಡಾಡಿ ಹೋರಾಟ ಮಾಡಿದಾತ!
ಐಕ್ಯಮತ ತತ್ವವನ್ನು ಈ ಜಗತ್ತಿಗೆಲ್ಲ ಸಾರಿದಾತ
ವಿದ್ಯೆ ವಿನಯದಲಿ ಅಂಬೇಡ್ಕರ್ ಹೆಸರಿನಿಂದ ಚಿರಪರಿಚಿತ!!

ಬದುಕಿಗೆ ಹೋರಾಡಲು ಧ್ವನಿ ಇರದವರಿಗೆ ದ್ವನಿಯಾಗುವದಾತ
ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆಂದು ಹೇಳಿದಾತ!
ಬಾಬಾ ಸಾಹೇಬ ಋಗ್ವೇದ ತತ್ವಶಾಸ್ತ್ರ ವಿದ್ಯಾ ಪಾರಂಗತ
ಯಾರಿಗು ಕಮ್ಮಿ ಇಲ್ಲ ಉನ್ನತ ಪದವಿಗಳ ಸರಮಾಲೆ ಧರಿಸಿರುವನೀತ!!

ಯಾರ ಮೇಲು ಕತ್ತಿಮಸಿಯದೆ ಖಡ್ಗ ಹಿಡಿಯದೆ ಪೆನ್ನು ಹಿಡಿದ
ತನ್ನ ಮಾತಿನಿಂದಲೇ ಸಮಾಧಾನವ ಪಡಿಸಿ ಎಲ್ಲರ ಮನ ಹೊಲಿಸಿದ!
ಮೂಕನಂತೆ ಕೂರದೆ ಔಚತ್ಯ ಬರಹದಿಂದ ಗಮನ ಸೆಳೆದ
ಸರಳತೆಯಲ್ಲಿ ಪುಸ್ತಕ ಹಿಡಿದು ಭಾರತರತ್ನ ಬಿರುದು ಪಡೆದ!!


Leave a Reply

Back To Top