ಕಾವ್ಯ ಸಂಗಾತಿ
ಬಾಗೆಪಲ್ಲಿ
ಗಜಲ್
ಇಡೀ ರಾತ್ರಿ ನಿನ್ನ ನೆನಪೆ ಬಿಡದೆ ಕಾಡಿದೆ
ಒಲವೆಚ್ಚರಗೊಂಡು ನಿದ್ದೆ ಬಾರದಾಗಿದೆ
ಮಿಲನದ ನೆನಪೊಂದರ ಬೆಂಕಿಸುಟ್ಟಿದೆ
ಮುಳುಗು ಚಂದ್ರ ಸಹ ಬಿಸಿ ಗಾಳಿಸೂಸಿದೆ.
ಯವ್ವನದ ಬೆಂಕಿಯು ದೇಹ ಆವರಿಸಿದೆ
ಪ್ರಿಯನ ಚಿತ್ರ ಮನದಿ ನೇರ ನೆಟ್ಟಿದೆ
ಹಿಂದಿನ ಸುಖದ ನೆನಪು ನೋವನೀಡಿದೆ
ತಪ್ಪೇ ಮಾಡದ ನನಗೆ ಶಿಕ್ಷೆ ಏಕಾಗಿದೆ.
ಕೃಷ್ಣಾ! ನಿನಗಾಗಿ ಕಾದ ರಾಧೆ ಸ್ಥಿತಿಯಾಗಿದೆ
ಸಂತೈಸೆ ಅವಳ ಸಖಿ ಎನಗೆ ಇಲ್ಲವಾಗಿದೆ
ಬಾಗೇಪಲ್ಲಿ