ಹಾಸ್ಯ ಬರಹ
ಗೊರೂರು ಅನಂತರಾಜು
‘ನಿಮ್ಮಪ್ಪ ಏನಂತಾ ಕರೀತಾರೆ..?
ಈಡಿಯಟ್..ಸ್ಟುಪಿಡ್..!’
ಮುದ್ದಣ್ಣ: ಮನೋರಮೆ, ನೀನು ಯುಗಾದಿ ಹಬ್ಬಕ್ಕೆ ಮಾಡಿರುವ ಪಾಯಸ ತುಂಬಾ ರುಚಿಯಾಗಿದೆ ಕಣೆ.
ಮನೋರಮೆ: ಅದಕ್ಕೆ ಬೆಕ್ಕು ಬಾಯಿ ಹಾಕಿರದೆ ಇದ್ದಿದ್ರೇ..ಚೆನ್ನಾಗಿರುತ್ತಿತ್ತು.
ಮು: ರಾತ್ರಿ ಒಂಭತ್ತು ಗಂಟೇಲಿ ಎಲ್ಲಿಗ್ಹೊರಟೆ..?
ಮ: ನರಕಕ್ಕೆ.. ಇಲ್ಲಿ ಮೂರ‍್ಹೊತ್ತು ನಿಮ್ಮತ್ರ ಜಗಳ ಆಡ್ಕೊಂಡು ಇರೋದಕ್ಕಿಂತ ಅಲ್ಲಿ ಇರೋದೆ ವಾಸಿ.
ಮು: ನರಕದಲ್ಲಿರುವ ನಿನ್ನ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ಸದ್ಯ ಸರ್ಕಾರದ ಉಚಿತ ಬಸ್ಸಿನಲ್ಲಿಯೇ ಸಾವಕಾಶವಾಗಿ ಹೋಗಿ ಬಾ.
ಮ: ರೀ, ನೀವು ಈ ರೀತಿ ಜಗಳ ಆಡ್ತಿದ್ರೆ ಅಕ್ಕಪಕ್ಕ ಮನೆಯವರಿಗೆ ಕೇಳಿಸುತ್ತೆ..
ಮು: ಸರಿ ಹಾಗಾದ್ರೇ, ಬೇರೆ ಯಾವ ರೀತಿ ಜಗಳ ಆಡಬೇಕು ಅಂತ ನೀನೇ ಹೇಳು. ದಿನಾ ರಾತ್ರಿ ಬಿಗ್ ಬಾಸ್ ಹಾಕ್ಕೊಂಡು ನೋಡ್ತ ಇರ‍್ತಿಯಲ್ಲಾ.. ಅದು ಅಕ್ಕಪಕ್ಕ ಮನೆಗೆ ಹಾಗೇ ಕೇಳಿಸುತ್ತೇ ತಾನೇ..
ಮ: ರೀ, ನಾನು ಮುಂದೆ ದಪ್ಪ ಆದ್ರೂ ನೀವು ಇದೇ ರೀತಿ ಪ್ರೀತಿ ಮಾಡ್ತೀರಾ..?
ಮು: ಅದ್ಹೇಗೆ ಸಾಧ್ಯ..?
ಮ: ತಾಳಿ ಕಟ್ಟುವ ವೇಳೆ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ್ರಿ..!
ಮು: ನಿನ್ನ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದಷ್ಟೇ ಪ್ರಮಾಣ ಮಾಡಿದ್ದೇನೆ. ಆದರೆ ನೀನು ದಪ್ಪ ಆಗುವ ವಿಚಾರದಲ್ಲಿ ಮಾತು ಕೊಟ್ಟಿಲ್ಲ..ದಯವಿಟ್ಟು ಒಂದ್ಹೊತ್ತು ಊಟ ಬಿಟ್ಟು ಡಯಾಟ್ ಮಾಡು. ಐದು ವರ್ಷದಲ್ಲಿ ನೀನು ಗ್ಯಾರಂಟಿ ತೆಳ್ಳಗಾಗ್ತಿಯಾ..
ಮ: ರೀ, ನೀವು ಪಿಹೆಚ್‌ಡಿ ಮಾಡಿದ್ರಲ್ಲಾ. ನಿಮ್ಮನ್ನೀಗ ಡಾಕ್ಟರ್ ಅಂತ ಕರಿಲೋ ಫ್ರೊಫೆಸರ್ ಅಂತ್ಲೇ ಕರಿಲೋ..?
ಮು: ನಿನ್ನಿಷ್ಟ ಬಂದಾಗೆ ಕರಿ..
ಮ: ನಿಮ್ಮಪ್ಪ ಏನಂತ ಕರೀತಾರೆ..?
ಮು: ಈಡಿಯಟ್.. ಸ್ಟುಪಿಡ್..!
ಮ: ಏಳ್ರೀ ಹತ್ತು ಗಂಟೆಗ ಗೊರಕೆ ಹೊಡಿತ್ತಿದ್ದೀರಾ..
ಮು: ಯಾಕೆ ನನ್ನನ್ನು ಎಬ್ಬಿಸಿದೆ..?
ಮ: ರಾತ್ರಿ ಹತ್ತು ಗಂಟೆಗೆ ಸರಿಯಾಗಿ ನಿದ್ರೆ ಮಾತ್ರೆ ಕೊಡಿ ಅಂತ ಡಾಕ್ಟರ್ ಹೇಳಿದ್ರಲ್ಲಾ..!
ಮು: ಇದೇ ತಿಂಗಳು ಇಪ್ಪತ್ತಕ್ಕೆ ನನ್ನ ಫ್ರೆಂಡ್ ಮಗನ ಮದುವೆ ಇದೆ. ನಾವಿಬ್ರೂ ಹೋಗಲೇಬೇಕು. ನನಗೆ ಅವರು ಆತ್ಮೀಯ ಮಿತ್ರರು. ಮರೆಯದೆ ನೆನಪು ಮಾಡು.
ಮ: ಇವತ್ತು ತಾರೀಖು ಇಪ್ಪತ್ತೆರೆಡು..!
ಮು: ಹಾಗಾದರೇ ನಾವು ಮದುವೆ ಫಂಕ್ಷನ್ ಮಿಸ್ ಮಾಡ್ಕೊಂಡ್ವಿ ಅಲ್ಲವಾ..?
ಮ: ನೀವು ನಾನು ಮೊನ್ನೆ ಮದುವೆಗೆ ಹೋಗಿ ಗಡದ್ದಾಗಿ ತಿಂದು ಬಂದಿಲ್ವಾ..!
ಮ: ಇದೇನ್ರೀ ಮನೆಗೆ ಇಷ್ಟು ಬೇಗ ಬಂದ್ರೀ..?
ಮು: ನಮ್ಮ ಬಾಸ್ ನರಕಕ್ಕೆ ಹೋಗು ಅಂತ ಬೈದ್ರು.. ಅದಕ್ಕೆ ಇಲ್ಲಿಗೆ ಬಂದೆ.
ಮ: ರೀ, ಒಂದು ನಿಮಿಷ ಬಂದು ಬಿಡ್ತಿನಿ. ಮನೇಲಿರಿ.
ಮು: ಎಲ್ಲಿಗೆ ಹೋಗ್ತಿದ್ದಿಯಾ..?
ಮ: ಪಕ್ಕದ್ಮನೆ ಪದ್ಮಕ್ಕನ ಮನೆಗೆ ಸಕ್ಕರೆ ಸಾಲ ತರ‍್ಲಿಕ್ಕೆ..
ಮು: ಸಾಲ ಯಾಕೆ ತರಬೇಕು. ನಿನ್ನೆ ತಾನೇ ೨ ಕೆಜಿ ಸಕ್ಕರೆ ತಂದಿದ್ದೀನಲ್ಲ.
ಮ: ಈಗ ನಾನು ಹೋಗ್ದೆ ಇದ್ರೇ ಅವಳೇ ಸಾಲ ಕೇಳ್ಕೊಂಡು ಇಲ್ಲಿಗೆ ಬಂದುಬಿಡ್ತಾಳೆ..!
ಮ: ರೀ, ನೀವು ನನಗೆ ಮುತ್ತಿನ ಹಾರ ಕೊಡಿಸುತ್ತಿದ್ದಂತೆ ಕನಸು ಬಿತ್ತು.
ಮು: ಹೌದಾ..! ಅದನ್ನು ಭದ್ರವಾಗಿ ಬೀರುನಲ್ಲಿ ಇಡು.
ಮ: ರೀ, ನಮಗೆ ಮಕ್ಕಳಿಲ್ಲ. ಅದಕ್ಕೆ ನನ್ನ ತಾಯಿ ಮನೆಯಿಂದ ಕೊಟ್ಟ ಮನೆಯನ್ನು ಯಾರಾದ್ರೂ ಸನ್ಯಾಸಿಗೆ ಮಾರಿಬಿಡೋಣವೆಂದುಕೊಂಡಿದ್ದೇನೆ..
ಮು: ಬಾಗಿಲು ತೆಗಿ
ಮ: ಎಲ್ಲಿಗೆ ಹೋಗ್ತಿರಾ..?
ಮು: ಸನ್ಯಾಸಿಯಾಗಲಿಕ್ಕೆ..!
ಮ: ರೀ, ನಾಳೆ ನಿಮ್ಮ ಹ್ಯಾಪಿ ಬರ್ತಡೆ. ಏನ್ ಗಿಫ್ಟ್ ಕೊಡ್ಲಿ..?
ಮು: ಡ್ಯೆವೋರ್ಸ್ ಕೊಟ್ಟುಬಿಡು..
ಗೊರೂರು ಅನಂತರಾಜು, ಹಾಸನ.
ಹಾಸ್ಯ, ಚನ್ನಾಗಿದೆ. ಹೀಗಿದೆ ಬರೀತ ಇರಿ
ಸೂಪರ್ ಹಾಸ್ಯ
ಚೆನ್ನಾಗಿದೆ
ಹಾಸ್ಯ ಬರಹ ತುಂಬಾ ಚೆನ್ನಾಗಿವೆ.
ಅಭಿನಂದನೆಗಳು ಸಾರ್, ಹಾಸ್ಯ ಬಹಳ ಚೆನ್ನಾಗಿ ಮಾಡಿ ಬಂದಿದೆ.