ಬೋರೇಗೌಡ – ಅಂಕಪುರ ಕವಿತೆ-‘ಕೂಡುಕುಟುಂಬ’

ಚೆಂದದಿಂದಲಿ ಬದುಕಿ ಬಾಳುತ
ತಂದೆ ತಾಯಿಯ ಸೇವೆ ಮಾಡುತ
ದುಡಿದು ಬದುಕಲು ನಿರತರಾಗುತ
ಸಂಪಾದನೆಯಲಿ ಹಿರಿಮೆ ಸಾಧಿಸುತ

ಮನೆಯ ಕಟ್ಟಲು ಕನಸು ಕಾಣುತ
ಎಲ್ಲರೂ ಸಹ ಮನಸು ಮಾಡುತ
ಹರುಷದಿಂದಲಿ ಪಣವತೊಟ್ಟರು
ದೃಢಸಂಕಲ್ಪವನು ಮಾಡಿ ನಿಂತರು

ಮನಸು ಮಾಡಲು ಕನಸೆಲ್ಲ ನನಸು
ಮನೆಮಂದಿಯೆಲ್ಲ ಹೊಂದಿಬಾಳುತ
ಸುಂದರ ಮನೆಯ ಕಟ್ಟಿಯೆ ನಡೆದರು
ಗೊಂದಲವಿಲ್ಲದೆ ಬದುಕನು ಮಾಡುತ

ಹೊಂದಿಕೆ ನಡೆಯಲಿ ಚೆಂದದಿ ಬಾಳುತ
ಹಿರಿಯ ಜೀವಗಳ ಗೌರವಿಸಿ ನಡೆಯುತ
ಮುಂದಿನ ಪೀಳಿಗೆಗೆ ಸಂಸ್ಕಾರ ಕಲಿಸುತ
ಕೂಡು ಕುಟುಂಬದಿ ಬಾಳಿ ಬದುಕಿದರು


One thought on “ಬೋರೇಗೌಡ – ಅಂಕಪುರ ಕವಿತೆ-‘ಕೂಡುಕುಟುಂಬ’

Leave a Reply

Back To Top