‘ಗೀತಾಳ ನೆಚ್ಚಿನ ಮರ’ ಮಕ್ಕಳ ಕಥೆ-ನಾಗರತ್ನ ಎಚ್ ಗಂಗಾವತಿ ಅವರಿಂದ

ಹೀಗೆ ಒಂದು ಪುಟ್ಟ ಗ್ರಾಮ ರಾಮನಹಳ್ಳಿ ಅಲ್ಲಿಯ ಜನರು ತಮ್ಮ ತಮ್ಮ ಕಾಯಕದೊಂದಿಗೆ ತುಂಬಾ ಸಂತೋಷದಿಂದ ಜೀವನವನ್ನು ಸಾಗಿಸುತ್ತಾ ಇದ್ದರು. ಅದರಲ್ಲಿ ಪುಟ್ಟ ಹುಡುಗಿ ಗೀತಾ ಇವಳು ತುಂಬಾ ಚುರುಕು ಮತ್ತು ವಿದ್ಯಾವಂತೆ ಕೂಡ ಆಗಿದ್ದಳು.

ಅವಳು ನಿತ್ಯವು ಶಾಲೆಗೆ ಹೋಗುವ ಹಾದಿಯಲ್ಲಿ ಗಿಡಮರಗಳ ಹಚ್ಚ ಹಸಿರನ್ನು ಕಂಡು ತುಂಬಾ ಸಂತೋಷಪಡುತ್ತಿದ್ದಳು ಹೀಗೆ ಒಂದು ದಿವಸ ಭಯಾನಕ ಮಳೆಯಿಂದಾಗಿ ಗಿಡಮರಗಳು ಬಾಗಿ  ನೆಲಸಮ ಆಗಿದ್ದನ್ನು ಕಂಡು ತುಂಬಾ ದುಖಿತಳಾಗಿದ್ದಳು ಅಯ್ಯಯ್ಯೋ ಎಂತಾ ದೊಡ್ಡ ಮರಗಳು ನೆಲಕ್ಕೆ ಉರುಳುವೆಯಲ್ಲ ಹೇಗೆ ಮಾಡುವುದು ಎಂದು ಆಲೋಚಿಸುತ್ತಾ ಒಂದು ಉಪಾಯವನ್ನು ಮಾಡಿದಳು ತನ್ನ ತಾಯಿಯ ಸಹಾಯದಿಂದ   ಪುಟ್ಟ ಬೇವಿನ ಮರದ ಸಸಿಯನ್ನು ನೆಟ್ಟು ರು ನಿತ್ಯವೂ ಶಾಲೆಗೆ ಹೋಗುವ ದಾರಿಯಲ್ಲಿ ಆ ಗಿಡಕ್ಕೆ ಸ್ವಲ್ಪ ನೀರನ್ನು ಹಾಕುತ್ತಾ ಶಾಲೆಗೆ ಹೊರಡುತ್ತಿದ್ದಳು ಕಾಲ ಕಳೆದಂತೆ ಗಿಡವು ಕೂಡ ದೊಡ್ಡದಾಗಿ ಬೆಳೆಯಿತು .
ಅದರೊಟ್ಟಿಗೆ ತುಂಬಾ ಆತ್ಮೀಯತೆಯಿಂದ ಹಬ್ಬದ ಸಂದರ್ಭದಲ್ಲಿ ಜೋಕಾಲಿ ಹಾಕುವುದು ಹೀಗೆ ತನ್ನ ಸಂತೋಷ ಪಡೆಯುತಿದ್ದಳು . ಹೀಗೆ ಒಂದು ದಿವಸ ಆ ಮರವನ್ನು ಯಾರು ಕಿಡಿಗೇಡಿಗಳು
ಮರವನ್ನು ಕಡೆದು ಹಾಕಿದ್ದರು.

ಅದನ್ನು ಕಂಡ ಗೀತಾಳು ಅಳುತ್ತಾ ಕುಳಿತು ಯೋಚನೆ ಮಾಡಿದಳು ಮತ್ತೆ ಸುಮ್ಮನೆ ಕೂರದೆ  ಅವಳು ಊರಿನಲ್ಲಿ ಒಂದು ಪುಟ್ಟ ಸಭೆಯನ್ನು ಮಾಡಲು ಹಿರಿಯರಿಗೆ ಮನವಿ ಮಾಡಿದಳು.

ಈ ಸಂದರ್ಭದಲ್ಲಿ ಎಲ್ಲರನ್ನೂ ಆ ಸಭೆಯಲ್ಲಿ ಸೇರಿಸಿ ತಾನು ಗಿಡಮರಗಳನ್ನು ಬೆಳೆಸುವುದರಿಂದ ಆಗುವ ಉಪಯೋಗ ಮತ್ತು ಅದರ ರಕ್ಷಣೆ ಕುರಿತು ಎಲ್ಲಾ ಜನರಿಗೆ ಮಾಹಿತಿ ತಿಳಿಸಿದಳು ಅದನ್ನು ಅರಿತ ಎಲ್ಲಾ ಜನರು ಇಂದಿನಿಂದಲೇ ನಾವು ಗಿಡಗಳನ್ನು ಬೆಳೆಸಬೇಕು ಎನ್ನುವ ಛಲದೊಂದಿಗೆ ಮನೆಗೊಂದು ಗಿಡ ಊರಿಗೊಂದು ವನ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಗಿಡಗಳನ್ನ ನೆಡುವಂತಹ ಕಾಯಕವನ್ನು ತೊಟ್ಟರು ಆಗ ಆ ಗ್ರಾಮ ಹಸಿರು ಸಮೃದ್ಧಿಯ ಗ್ರಾಮ ಎನ್ನುವಂತ ಒಂದು ಪ್ರಶಸ್ತಿಗೆ ಆಯ್ಕೆ ಆಯ್ತು ಹೀಗೆ ಪ್ರತಿಯೊಬ್ಬರೂ ಕೂಡ ಹಸಿರನ್ನು ಬೆಳೆಸುವುದರಿಂದ ಹಸಿರೇ  ಉಸಿರಾಗುವುದು ಮತ್ತು ಉತ್ತಮ ಆರೋಗ್ಯವನ್ನು ಹೊಂದುವುದು ಮಾತ್ರ ನಿಶ್ಚಿತ ಎಂದು ನಲಿಯ ತೊಡಗಿದರು.


One thought on “‘ಗೀತಾಳ ನೆಚ್ಚಿನ ಮರ’ ಮಕ್ಕಳ ಕಥೆ-ನಾಗರತ್ನ ಎಚ್ ಗಂಗಾವತಿ ಅವರಿಂದ

Leave a Reply

Back To Top