‘ಅದೇನೋ ನೆಮ್ಮದಿ, ಗೊಂದಲದ ಮಾಯೆ’ಮಹದೇವ್ ಮಂಜು ಶಿರಸಿ’ಅವರ ಲೇಖನ

 ಸುಮ್ನೆ ಬೇಜಾರ್ ಆಗತೀವಿ,  ಎಷ್ಟು ಬೇಜಾರ್ ಆಗ್ತಿರುತ್ತೆ ಅಂದ್ರೆ  ಟಿವಿ ನೋಡ್ತಿದ್ರು ಬೇಜಾರು,  ಗೇಮ್ ಆಡ್ತಿದ್ರು ಬೇಜಾರು,  ಯಾರು ಕಾಲ್ ಮಾಡಿದ್ರು ಅವರ ಜೊತೆ ಮಾತಾಡೋಕೂ ಬೇಜಾರು,  ಬದುಕಿದ್ದೀವಿ ಆದ್ರೆ ಗೊಂದಲದ ಮಾಯೆ ನಮ್ಮನ್ನ ಸುತ್ತುವರೆದಿದೆ.

ನಮ್ಮವರು ಅನ್ನುವವರು ಎಲ್ಲಾ ಇದ್ದಾರೆ. ಆದ್ರೆ ನಮ್ಮ ಮನಸ್ಸಿನ ಭಾವನೆಯನ್ನು ಅರ್ಥ   ಮಾಡಿಕೊಳ್ಳುವಂತವರು ಯಾರು ಇಲ್ಲ ಅನ್ನೋ ಅಂಧಕಾರದ ಮಾಯೆಯಿಂದ ನಮ್ಮನ್ನ ಒಂಟಿತನ  ಆವರಿಸಿದೆ. ಅದರಿಂದ ನಮಗೆ ಏನು ಮಾಡಿದ್ರು ಸಮಾಧಾನ ಅನಿಸದೆ…  ಬದುಕ್ಕಿದ್ದೀವ-ಸತ್ತಿದೀವ ಅಂತ ಅರ್ಥ ಆಗದ ಪರಿಸ್ಥಿತಿಯಲ್ಲಿ ಇರೋದು.

ಮನಸಿನ ಒತ್ತಡವನ್ನು ದೇವರ ಮೇಲೆ ಬಿಡಿ ಕಾಯುವವನು ಅವನಿರುವಾಗ ನಾನು ಒಂಟಿ ಅಲ್ಲ ಅನ್ನೋ ಭಾವನೆ ನಮ್ಮಲ್ಲಿ ಹುಟ್ಟಲಿ..            

ಆಕಾರದ ನಮ್ಮ  ಸೃಷ್ಠಿಯಲ್ಲಿ ವಿಕಾರದ ಮನೋಭಾವನೆ..ಪ್ರತಿಯೊಂದು ಘಟನೆಗೂ ಕಾರಣ.. ಅನ್ನೋದು ಮೊದಲು ನಮ್ಮ ಅರಿವಿಗೆ ಬಂದ್ರೆ ಸಾಕು.    

ಒಂಟಿತನ ನೆಮ್ಮದಿಯನ್ನು ಕೊಡುತ್ತೆ, ಹಾಗೆ ನೆಮ್ಮದಿಯನ್ನು  ಹಾಳು ಮಾಡುತ್ತೆ. ಹಸಿವಾದಾಗ ಎಷ್ಟು ಊಟ ಮಾಡಿದ್ರೆ ಹೊಟ್ಟೆ ತುಂಬಿದೆ ಅನಿಸುತ್ತೋ.. ಹಾಗೆ ನಾವೆಷ್ಟೇ ಜನರ  ಪರಿಚಯ ಮಾಡಿಕೊಂಡರೂ  ಅವಶ್ಯಕತೆಗೆ ಎಷ್ಟು ಅವರಿಂದ ತಿಳುವಳಿಕೆ ಬೇಕು ಅಷ್ಟೇ  ತಗೊಂಡ್ರೆ ಸಾಕು..    

 ಸಂಬಂಧಿಕರೆಲ್ಲ  ಮನಸ್ಸಿಗೆ ಹತ್ತಿರ ಆಗಲ್ಲ…
ಮನಸ್ಸಿಗೆ ಹತ್ತಿರ ಆದವರೆಲ್ಲ ನಮಗೆ ಒಳ್ಳೇದನ್ನೇ ಬಯಸುತ್ತಾರೆ ಅಂತ ಅಂದುಕೊಳ್ಳೋಕೆ ಆಗಲ್ಲ..                    

ಅಂದಕಾರದ ಮಾಯೆಯಿಂದ ನಾವು ಹೊರ ಬಂದಾಗ ಮಾತ್ರ ನೆಮ್ಮದಿ ಅನ್ನೋ ತೊಟ್ಟಿಲಲ್ಲಿ ನೆಮ್ಮದಿಯ ನಿದ್ರೆ ನಮ್ಮದಾಗಲು ಸಾಧ್ಯ….      

ಪ್ರತಿಯೊಂದು  ಜೀವಿಗೂ  ಸಾವು ಅನ್ನೋ ಸಮಯ ವಿದೆ. ಹಾಗೆ  ಸಮಯಕ್ಕೂ  ಸಾವಿದೆ. ಅದ್ಕೆ..ಈ ಸಮಯ ಮತ್ತೆ ನಮ್ಮದಾಗಲ್ಲ.   ಬದಲಿಗೆ ನೆನಪಾಗಿ ಇರುತ್ತೆ. .. ಅನ್ನೋ ಸಾಮಾನ್ಯ ಜ್ಞಾನ ನಮ್ಮಲ್ಲಿ  ಹೆಚ್ಚು ಬದಲಾವಣೆ ತರುತ್ತೆ ಅಲ್ವಾ.?..                                          

ನೂರು ರೂಪಾಯಿ ಇಟ್ಟುಕೊಂಡು ನೂರು ಕನಸು ಕಾಣುವ ನಮ್ಮಂತವರ ಜೀವನ.. ಜೀವನ ಪೂರ್ತಿ ನನಸಾಗದ ಕನಸಾಗೆ ಇರುವದು  ಆದ್ರೂ ಕೂಡ  ಜೀವನ ಸಾಗಿಸಲೇ ಬೇಕು ಅಲ್ವಾ?.

ಸಣ್ಣ ಕಥೆ  ಹೇಳ್ತೀನಿ – ಸಣ್ಣ ಕುಟುಂಬ  ಅಪ್ಪ, ಅಮ್ಮ  ಮಗ ಮತ್ತೆ ಮಗಳು ಇರ್ತಾರೆ.  ಅಪ್ಪ ಕಷ್ಟ ಪಟ್ಟು ಕೆಲಸ ಮಾಡ್ತಾ ಇರ್ತಾರೆ ಹಾಗೋ  ಹೇಗೋ ಮಾಡಿ ಸ್ವಲ್ಪ ಹಣ ಕೂಡಿಟ್ಟು ಮನೆ ಕಟ್ಟಿಸುವ ಅಂತ  ಕಟ್ಟಿಸೋಕೆ ಸುರು ಮಾಡ್ತಾರೆ. ಇರೋ ನಾಲ್ಕು ಜನರಿಗೆ ಎಷ್ಟು ದೊಡ್ಡ ಮನೆ ಕಟ್ಟಿಸಬೇಕು ಅಂತ ಗೊಂದಲ,  ಚಿಕ್ಕದಾಗಿ ಕಟ್ಟಿಸಿದ್ರೆ ಜನ ಏನ್ ಅಂದ್ಕೊತಾರೆ ಅಂತ ಗೊಂದಲ.   ಹೇಗೋ ಸಾಲನೋ -ಪಾಲನೋ ಮಾಡಿ  ದೊಡ್ಡ ಮನೆನೇ ಕಟ್ಟಿಸ್ತಾರೆ.  ಅದೇನೋ ನೆಮ್ಮದಿ ದೊಡ್ಡ ಮನೆ ಕಟ್ಟಿಸಿ ಅಂತ ಅಂದು ಕೊಳ್ಳೋಣ.  ಸಾಲ ಮಾಡಿದ್ರೆ   ಸಾಲಗಾರರ ಕಾಟ ಇದರಿಂದ  ದೊಡ್ಡ ಮನೆ ಆದ್ರೂ ಕೂಡ ನೆಮ್ಮದಿ ಇರುತ್ತಾ. ..?   ನೀವೇ  ಯೋಚನೆ ಮಾಡಿ. ..              

ಕೆಲವೊಂದು ಕೆಟ್ಟ ಪರಿಸ್ಥಿತಿಯಿಂದ  ನಾವು ಹೊರ ಬರಬೇಕು ಅಂದ್ರೆ ಮೊದಲು ನಮ್ಮನ್ನ ನಾವು ಸರಿಪಡಿಸಿಕೊಳ್ಳಬೇಕು  ನಮ್ಮಲ್ಲಿರುವ ಗೊಂದಲದ ಮಾಯೆಗೆ   ಮನಸ್ಸಿನ  ಬೇಲಿ ಹಾಕಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಪ್ರತಿ ನಿತ್ಯ ನಡೆಯಬೇಕು.  
ಕಾರಣ  ಇಷ್ಟೇ..
 ಸಾವು ಬರುವ ತನಕ
 “ಗೊಂದಲಕ್ಕೆ ಬೇಲಿ ನಮ್ಮ ಮನಸ್ಸೇ”. . “ಗೊಂದಲದ ಮೂಲ ಕೂಡ ಆಸೇನೇ”.

ಅವರಿವರ ಬಗ್ಗೆ ಯೋಚನೆ ಮಾಡೋದನ್ನ ಕಡಿಮೆ ಮಾಡೋಣ ಅಲ್ವಾ.  ಯಾಕೆ?ಅವರಿವರ ಬಗ್ಗೆ ಯೋಚನೆ ಮಾಡ್ಬೇಕು ಅಂತೀನಿ.  ನಮ್ಮ ಜೀವನ ಅವರು ಬಂದು ನೋಡ್ಕೋತಾರ? ಇಲ್ಲ ಅಲ್ವಾ?  ಹಾಗಂತ ಕಷ್ಟ ಬಂದಾಗ ಸಹಾಯ ಕೇಳಿದವರ ಪರ ಸಹಾಯ ಮಾಡಬಾರದು ಅಂತ ಅಲ್ಲ . ಸಹಾಯದ ಗುಣ  ಮೂಲ ಯಜಮಾನನಿಂದ ವಿದ್ಯಾಭ್ಯಾಸ ಹೇಗೆ ನಡೆಸಪಟ್ಟಿರುತ್ತೋ  ಹಾಗಿರುತ್ತೆ . . ನೀವು  ಹೇಗೆ ಅಂತ ನಿಮ್ಮ  ಅಂತರಾತ್ಮಕ್ಕೆ ಬಿಟ್ಟಿದ್ದು.                       .            

 ನಮ್ಮ ಖುಷಿ ಗೆ ಮೂಲ ಕಾರಣ ನಾವೇ. ನಮ್ಮ ದುಃಖಕ್ಕೆ ಮೂಲ ಕಾರಣರು ನಾವೇ. .ಅಂದುಕೊಳ್ಳೋಣ ಅಲ್ವಾ? ಅಂಧಕಾರ ಎಷ್ಟು ಪ್ರಭಾವ ಬೀರುತ್ತೆ ಅಂದ್ರೆ ನಮ್ಮದೇನು ತಪ್ಪಿಲ್ಲ ಪ್ರತಿಯೊಂದು ತಪ್ಪು ಕೂಡ  ನಮ್ಮ ನೋವಿನ ವಿರುದ್ಧ ದಿಕ್ಕಿನಲ್ಲಿರುವವರೇ ಅನ್ನೋ ನಿರ್ಧಾರ  ಮಾಡಿ ಆಗಿರುತ್ತೆ….     ಇದಕ್ಕೆಲ್ಲ ಕಾರಣ ಮನಸ್ಥಿತಿ ಮತ್ತೆ ಪರಿಸ್ಥಿಗೆ  ಬಿಟ್ಟು ಬಿಡೋಣ ಅಲ್ವಾ.                      

ಹಸಿರುಂಟೆನಗೆ-ಮುಪ್ಪುಂಟೆನಗೆ
ಜೀವ ಭಯದೊಳಗೆ..
 ಜೀವನ ಭೂ ಮಂಡಲದೊಳಗೆ
ನೆಮ್ಮದಿಯ ಬಯಕೆ.. ಗೊಂದಲದ ಮಾಯೆಯೊಳ
ಗೆ.

[ಹುಟ್ಟಿಯಾಗಿದೆ ನಾವು  ನಮಗೊಂದು ನಮ್ಮದೇ ನಿರ್ಧಾರದ ದಾರಿಯಲ್ಲಿ  ಉಜ್ವಲ ಭವಿಷ್ಯ ಇದೆ. ನಾವು  ಎಷ್ಟೇ ಕಷ್ಟ ಸುಖ ನೋಡಿದ್ರು  ಎಲ್ಲರಿಗೂ ಮುಪ್ಪಿನ ಉಡುಗೊರೆ ಇದ್ದೇ ಇದೆ. ಜೀವ ಇರುವ ತನಕ  ಒಂದಲ್ಲ ಒಂದು ಕಾರಣಕ್ಕೆ ಭಯ ಇದ್ದೇ ಇರುತ್ತೆ. ಸಾಮಾನ್ಯವಾಗಿ ಆದರೂ  ಜೀವನ ಮಾಡಲೇ ಬೇಕು  ಭೂಮಿಯ ಮೇಲೆ
ನೆಮ್ಮದಿ ಮಾತ್ರ ಬೇಕು ಅನ್ನೋ ಗೊಂದಲಕ್ಕೆ  ಸಿಕ್ಕಾಕಿಕೊಂಡಿದ್ದೀವಿ].    

ಕಾದು ನೋಡು ಹಾಗೆ ಕಾಯಿಸಿ ನೋಡು  ನಾವು ಹಚ್ಚಿಕೊಂಡ ಸಂಬಂಧ ಹೇಗೆ ಅಂತ ಅರ್ಥ ಆಗುತ್ತೆ ನಿಜ. ಆದ್ರೆ ಮೊದಲು ನಾವು ನೆಟ್ಟಗೆ ಇರಬೇಕು. . ಅವರದ್ದು ತಪ್ಪೆನ್ನುವ ನಾವು ತಪ್ಪು ಮಾಡಬಾರದು ಅಲ್ವಾ?

ಚಿಕ್ಕ-ಚಿಕ್ಕ ಸಾಮಾನ್ಯ ಜ್ಞಾನ ಅಂಧಕಾರದಲ್ಲಿ ಮುಳುಗಿದೆ  ಅವರೇನಾದ್ರೂ ಆಗಲಿ ನಾನು ಚೆನ್ನಾಗಿ ಇರಬೇಕು ಅನ್ನೋ   ಯುಗ ಶುರು ಆಗಿದೆ.    

ಸಂಬಂಧದ ಸರಪಳಿ ಬಿಡಿ-ಬಿಡಿಯಾಗಿ ಒಂಟಿತನದಲ್ಲಿ ನೆಮ್ಮದಿಯ ಹುಡುಕಾಟ ಶುರುಮಾಡಿಯಾಗಿದೆ  ಯಾರ ಪರ ಎಷ್ಟು ದಿನ ಅಂತ ಲೆಕ್ಕಾಚಾರದ ಜೀವನಪದ್ಧತಿ ಅರಿವಿಲ್ಲದೆ ಶುರು ಆಗಿಯಾಗಿದೆ. ಸರಿಪಡಿಸಲು ಕಲ್ಕಿ ಅವತಾರ ಆಗಬೇಕಿದೆ ಅಷ್ಟೇ.

ನೂರು ತಲೆಮಾರು ಹಿಂದಿನ ಜನರ ಜೀವನಕ್ಕೂ ಈಗಿನ ಜನರ ಜೀವನಕ್ಕೂ ಎಷ್ಟು ಬದಲಾವಣೆ ಆಗಿದೆ ಅಂತ ನಾನು  ಹೇಳಿ ತಿಳಿಯುವ ಅನಿವಾರ್ಯತೆ ಇಲ್ಲ ಅಂದುಕೊಂಡಿದ್ದೀನಿ.. ಕಾರಣ- ನಾವೆಲ್ಲ ಒಂದೊಂದು ತರ  ವಿಚಿತ್ರ  ಬುದ್ದಿವಂತರು  ಅಲ್ವಾ?

ಮಲಗುವ ಮುನ್ನ ಆಗಸಕ್ಕೆ  ಏಣಿ ಹಾಕುವ ಹಟ ಉಳ್ಳವರು ನಾವು ಮಲಗೆದ್ದಾಗ ಗುರಿ ಮರೆತ ನಿಷ್ಕಾಳಜಿವಂತರು ಕೂಡ  ನಾವೇ.

ಬೇಜಾರ್ ಆಗ್ಬೇಡಿ ಇನ್ನೊಂದು ಸಣ್ಣ ಕಥೆ ಹೇಳ್ತೀನಿ –

ಒಂದು ಸಾವಿರಕ್ಕಿಂತ ಹೆಚ್ಚು ಜನ ಸೇರಿದ  ದೊಡ್ಡ  ಸಭೆ ಅಂದುಕೊಳ್ಳೋಣ ಅಲ್ಲಿ  ಹಿರಿ ತಲೆಮಾರಿನವರು  ತಮ್ಮ ಅನುಭವದ ಧಾರೆ ಮುಂದಿನ  ಪೀಳಿಗೆಗೆ  ಹೇಳ್ತಾ ಇದ್ದಾರೆ. ಪ್ರತಿಯೊಬ್ಬ ಯುವಕ ಯುವತಿಯರಲ್ಲಿ  ಅದೇನೇ ಆಗ್ಲಿ  ನಾನು ದೊಡ್ಡ ಸಾಧನೆ ಮಾಡಿಯೇ  ಬಿಡುತ್ತೇನೆ ಅನ್ನೋ  ನಿರ್ಧಾರ  ಮಾಡಿ ಆಗಿತ್ತು.              

ಒಂದೂ ಗಂಟೆ,ಎರಡು ಗಂಟೆ,  ಮೂರು ಗಂಟೆ  ಸತತವಾಗಿ   ಹಿರಿ ತಲೆ ಮಾರಿನವರ ಮಾತು ಕೇಳಿ ಎಲ್ಲಾ  ಯುವಕ ಯುವತಿಯರು ಕೊನೆಯಲ್ಲಿ ಖುಷಿ ಪಟ್ಟು  ಚಪ್ಪಾಳೆ ಮೂಲಕ  ಧನ್ಯವಾದ ಸೂಚಿಸಿ  ಹುಮ್ಮಸ್ಸಿನಿಂದ  ಹೊರಟು  ಅರ್ಧ ಗಂಟೆ ಕೂಡ ಆಗಿರಲ್ಲ   ವಿಷಯವನ್ನೇ ಮರೆತು ಮೊದಲಿನಂತಾಗುತ್ತಾರೆ.
ಇದಕ್ಕೆ ಹೇಳೋದು ನೆಮ್ಮದಿ ಜೊತೆಯಲಿ ಗೊಂದಲದ ಗೂಡು ಮನೆಮಾಡಿದೆ ಅಂತ.

ಮನುಷ್ಯನಿಗೆ ನಾಮಕರಣದ ನಿಯಮ ತಂದಿದ್ದು ಮನುಷ್ಯನೇ. ಯಾವುದೇ ಒಂದು ವಸ್ತುವಿಗೆ ನಾಮಕರಣ ಮಾಡಿದ್ದೂ ಕೂಡ ಮನುಷ್ಯ. ಆ ಜಾತಿ  ಈ ಜಾತಿ ಅಂತ ನಾಮಕರಣ ಮಾಡಿದ್ದೂ ಮನುಷ್ಯ. ಇಲ್ಲಿ  ಬದಲಾಗಿದ್ದು ಮನುಷ್ಯನೇ…
 ಅಂಧಕಾರದ ಗಂಟಲ್ಲಿ ಸಿಲುಕಿದ ಗೊಂಬೆ ಆಗಿದ್ದಾನೆ. ಅಂಧಕಾರದ ಗಂಟನ್ನ  ಬಿಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕ ಆಗುತ್ತೆ ಅಂತ ನನ್ನ ಅಭಿಪ್ರಾಯ ಮಾತ್ರ.  

ಅವನು ಹಾಗಾದ, ಅವನು ಅದು ಮಾಡಿದ, ಅವನು ಇದು ಮಾಡಿದ,  ಅವ ಅದನ್ನ ತಗೊಂಡ, ಅವ ಅದನ್ನೆಲ್ಲಾ ಹೇಗೆ ಮಾಡಿದ ಬರೀ ಅವರಿವರ ಬಗ್ಗೆ ಮಾತಾಡಿಕೊಂಡೇ ನೆಮ್ಮದಿ ಕಾಣೋ ಜನ ಒಂದಿಷ್ಟು ಇದ್ದಾರೆ.

ನಾನು ಬಡವ  ನಾನು ದುಡಿಯೋಕೆ ಆಗೋದೇ ಇಷ್ಟು ಯಾರು ಹೇಗಾದ್ರು ಅಂದುಕೊಳ್ಳಲಿ  ನನಗೆ ಮಾತ್ರ ಇರುವದರಲ್ಲೇ ನೆಮ್ಮದಿ ಇದೆ ಅಂತ ಅಂದುಕೊಳ್ಳುವವರು ಒಂದಿಷ್ಟು ಜನ.

ನನ್ನ ಹತ್ರ ಬೇಕಾದಷ್ಟು  ಹಣ ಇದೆ ,ಅಧಿಕಾರ ಇದೆ  ನಾನು ಏನು ಮಾಡಿದ್ರು ಸರಿ ಇರುತ್ತೆ ಅನ್ನೋ ದರ್ಪದಿಂದ ಇರುವರೊಂದಿಷ್ಟು ಜನ.    

ಪ್ರತಿಯೊಂದಕ್ಕೂ ಕಾರಣ ನೆಮ್ಮದಿ ಹುಡುಕುವ ಹಂಬಲ ಒಂದಿಷ್ಟು ಆದ್ರೆ. ಅಂಧಕಾರದ ಮಾಯೆಯೊಳಗೆ ಸೇರಿ ಕಣ್ಣಿದ್ದೂ ಕುರುಡರಂತೆ ಆಡ್ತಿರೋರು ಒಂದಿಷ್ಟು ಜನ ಅಂತ ನಾನು ಅಂದುಕೊಂಡಿದೀನಿ  ನನ್ನನ್ನು ಸೇರಿಸಿಕೊಂಡು.

ಒಳ್ಳೆತನನ ಮಾತ್ರ ಇಷ್ಟ ಪಡೋದು ಒಳ್ಳೆ ವ್ಯಕ್ತಿ ಅಲ್ಲ. ಒಳ್ಳೆ ವ್ಯಕ್ತಿಯಾಗಿ ಬದಲಾಗುವದು..
 ಒಳ್ಳೆ ವ್ಯಕ್ತಿಯಾಗಿ ಇರುವವರು ಮಾತ್ರ  ಒಳ್ಳೆ ವ್ಯಕ್ತಿ ಅಂತ ನನ್ನ ಅಭಿಪ್ರಾಯ.

ಹಾಳೆಯ ಮೇಲೆ ಬರೆದಷ್ಟು ಸುಲಭ ಅಲ್ಲ ಜೀವನ..ಅಂತ ನಾವು ಅಂದ್ಕೊತಿದ್ರೆ ತಪ್ಪು.  ಕಾಲಿ ಹಾಳೆಯ ಮೇಲೆ ಬರೆಯುವದು ಕೂಡ ಸುಲಭ ಅಲ್ಲ ಅಲ್ವಾ?  ಅನ್ನೋದು.  ತಿಳಿಯಬೇಕು ಅಲ್ವಾ.     ಬರೆದಿದ್ದನ್ನು ನೋಡಿ ಬರೆಯುವದೇ   ಕೆಲವೊಮ್ಮೆ ಕಷ್ಟ ಆಗುತ್ತೆ.  ಅದೇ  ಒಂದೂ  ವಿಷಯದ ಬಗ್ಗೆ  ನಮಗೆ  ಅನಿಸಿದ್ದನ್ನ  ಲೇಖನ ರೂಪದಲ್ಲಿ  ಬರೆಯುವುದು  ಕಷ್ಟನೇ ಇರುತ್ತೆ ಅಲ್ವಾ .  ಅರ್ಥ ತಪ್ಪಾಗಬಾರದು,  ಓದುಗರಿಗೆ  ಸುಲಭವಾಗಿ ಅರ್ಥ ಆಗಬೇಕು ಅಂತ   ಬರವಣಿಗೆ ಸುರು ಮಾಡಿದಾಗಲೇ ಗೊಂದಲದಲ್ಲೇ  ಸುರು ಮಾಡಿರ್ತಿವಿ.  ನನಗೆ ಆಗ್ತಿರೋದು  ಹೀಗೆ.  ಎಲ್ಲರಿಗೂ  ಹೀಗೆ  ಆಗುತ್ತೆ  ಅಂತ  ನಾನು  ಹೇಳಲ್ಲ.  ಅನಿಸಿಕೆ ಮಾತ್ರ. ಜೀವನನೇ ಜೇನು ಗೂಡು  ಅಂದು ಕೊಳ್ಳೋಣ.    ಒಂದಾಗಿ ಇದ್ರೆ  ಎಲ್ಲರೂ ಸೇರಿ  ಖುಶಿಯಾಗಿ ಇರುವೆವು  ಯಾರೋ ಕಲ್ಲೆಸೆದರೆ  ಅವರ ಮೇಲೆ ಒಂದಾಗಿ  ಹೋರಾಡುವದು.                            
ಎರಡೆರಡು  ಮನಸಿಂದ ಇರುವವವರು  ನಮ್ಮಿಂದ. ದೂರನು ಆಗಬಹುದು. ಜೊತೆಯಲ್ಲೇ ಇದ್ದು  ಒಳಸಂಚು ನಡೆಸಬಹುದು  ಯಾಕೆ  ಅಂದ್ರೆ  ನಾವು ಗೊಂದಲದಲ್ಲಿ  ಇರ್ತಿವಿ  ಅಲ್ವಾ. ?                

ನಾವು ಯಾವ್ದೋ  ಕೆಲಸಕ್ಕೆ ಹೊರಟಿದ್ದೀವಿ  ಆಗ ಅದೆಲ್ಲಿಂದಲೋ  ಬೆಕ್ಕು ಅಡ್ಡ ಹೋಗುತ್ತೆ  ಮನಸ್ಸಲ್ಲಿ ಹುಟ್ಟೋ ಗೊಂದಲ ಹೇಗಿರುತ್ತೆ  ಇವತ್ತಿನ ದಿನ ಅದೆಂಗೆ ಇರುತ್ತೇನೋ.   ಥೂ  ಬೆಕ್ಕು ಕೂಡ ಅಡ್ಡ ಹೋಯಿತು. ನಾನು ಹೊರಟಿರೋ ಕೆಲಸ ಆಗುತ್ತಾ?  ಇಲ್ವಾ?    ದರಿದ್ರ ಬೆಕ್ಕು ಅಂತ  ಬೈಕೊಂಡಿದ್ರೆ..  ನಮ್ಮ ತಪ್ಪು.ನಮ್ಮಲ್ಲಿ ಹುಟ್ಟಿರೋ  ಗೊಂದಲದಿಂದ  ಹೀಗೆಲ್ಲ  ಅನಿಸೋದು ಸಹಜ.   ಹಾಗೆ. ಬೆಕ್ಕಿನ ಜಾಗದಲ್ಲಿದ್ದು  ಯೋಚನೆ ಮಾಡಿ  ಅದೆಲ್ಲೋ ಕೆಲಸಕ್ಕೆ  ಹೋಗ್ತಿರುತ್ತೆ  ಅದ್ಕೆ ಅಡ್ಡ ನಾವು  ಹೋಗಿರ್ತಿವಿ  ಅದು  ಹಾಗೆ ಅಂದ್ಕೊಳ್ಳುತ್ತ  ಹಾಗಿದ್ರೆ.                                            

ನನ್ನ ಜಾಗದಲ್ಲಿದ್ದು ಯೋಚನೆ ಮಾಡಿದಾಗ ಸಿಗುವ ಉತ್ತರಕ್ಕಿಂತ ನಿಮ್ಮ ಜಾಗದಲ್ಲಿದ್ದು ಯೋಚನೆ ಮಾಡಿದಾಗ ಸಿಗುವ ಉತ್ತರ ನನ್ನ ಸತ್ಯದ  ದಾರಿಯಲ್ಲಿ  ನನ್ನ ಮನಸ್ಸು ಕರೆದುಕೊಂಡು ಹೋಗುತ್ತೆ  

ನೆಮ್ಮದಿ ಗಾಗಿ  ಗೊಂದಲ ಸಾಮಾನ್ಯ ವಾಗಿ ಹುಟ್ಟುತ್ತೆ.  ನಮ್ಮ ಯೋಗದಲ್ಲಿ ಏನಿದೆಯೋ ಅದರಲ್ಲೇ ನೆಮ್ಮದಿಯನ್ನ ಅನುಭವಿಸೋಣ. ಹುಚ್ಚು ಗೊಂದಲದ ಅಂಧಕಾರದ ಮಾಯೇ ಯನ್ನ  ಮನಸ್ಥಿತಿಯಿಂದ ಕಿತ್ತು ಹಾಕೋಣ.

ಆಕಾರದಲ್ಲಿ ಬೇರೆ -ಬೇರೆ ನಾವಿದ್ರು ಮನಸ್ಥಿತಿಯಲ್ಲಿ ನಾವೆಲ್ಲ ಒಂದೇ ಅಂತ ಬಂದ್ರೆ  ನಿಜವಾಗಿ ನಮ್ಮಲ್ಲಿ ನಮ್ಮವರನ್ನ ಕಾಣಬಹುದು…


2 thoughts on “‘ಅದೇನೋ ನೆಮ್ಮದಿ, ಗೊಂದಲದ ಮಾಯೆ’ಮಹದೇವ್ ಮಂಜು ಶಿರಸಿ’ಅವರ ಲೇಖನ

  1. ಗೊಂದಲದ ಮಾಯೆಗೆ ಬಂಧನದ ಮಾಯೆಯಾಗಿದೆ ಈ ನಿಮ್ಮ ಲೇಖನ..
    ಸಾರ್ಥಕ ಬದುಕಿಗೆ ಗೊಂದಲದ ಬಂಧನ ಬಿಡಿಸುವ ಅರಿವು ಮೂಡಿಸಿದೆ..
    ಶುಭವಾಗಲಿ..

Leave a Reply

Back To Top