ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ

ಹೊಸತನದ ವಿನೂತನ
ಬರೆಯುವ ಪದಪದದಲ್ಲಿ
ಬರೆಯಲೇಕೆ ಅಂಜಿಕೆ
ಬರೆಯೋಣ ಸಂಚಿಕೆ..!

ಅಕ್ಷರದ ಹೊದಿಕೆ
ನಮ್ಮಲ್ಲಿರುವ ಹೊಂದಿಕೆ
ಜೊತೆಗೂಡುವ ಹೊಂದಾಣಿಕೆ
ಬಯಸಿದಂತೆ ಇರುವಿಕೆ..!

ಮನಸ್ಸ ನೆಮ್ಮದಿಯು
ಬರೆಯುವ ಹವಣಿಕೆಯು
ಮನದ ತಳಹದಿಯು
ವಿಶೇಷ ಆಸಕ್ತಿಯು..!

ಬದುಕೊಂದು ಹೊಸತನ
ಇರುವುದು ಸದಾ ನೂತನ
ಲವಲವಿಕೆಯ ಜೀವನ
ಬಾಳಿನ ಅರ್ಪಣಾ..!


One thought on “ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ

Leave a Reply

Back To Top