ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಅಂದ -ಚಂದ
ಮುಳುಗುವ ಸೂರ್ಯನ ಕಿರಣಗಳಂದ
ಬೆಳಗುವ ಚಂದ್ರನ ಬೆಳಕಿನ ಚಂದ
ಮೋಡದ ಚಲನೆಯ ನರ್ತನದಂದ
ನಲಿಯುವ ಚುಕ್ಕಿಯು ಮಿನುಗುವ ಚಂದ
ನವಿಲಿನ ಪುಕ್ಕದ ಬಣ್ಣದ ಅಂದ
ಕೋಗಿಲೆ ಕಂಠದ ಹಾಡದು ಚಂದ
ತಣ್ಣನೆ ಬೀಸುವ ಗಾಳಿಯ ಅಂದ
ಕಡಲಿನ ತೆರೆಯ ನೊರೆಯದು ಚೆಂದ
ಬಿಸಿಲಿನ ತಾಪಕೆ ಮರಳಿನ ಅಂದ
ಸುರಿಯುವ ಮಳೆಗೆ ಮರಗಳ ಚೆಂದ
ಉಳುವ ರೈತನ ಮಣ್ಣಿನ ಅಂದ
ಕಾಣುವ ಬೆಳೆಗಳ ಫಸಲಿನ ಚಂದ
ಗುಂಪಲ್ಲಿ ಹಾರುವ ಹಕ್ಕಿಗಳಂದ
ಕಾಮನ ಬಿಲ್ಲಿನ ಬಣ್ಣವು ಚೆಂದ
ಗುರುಗಳ ಪಾಠದ ನೀತಿಯು ಅಂದ
ಕಲಿಯುವ ಮಕ್ಕಳ ನೋಟವು ಚಂದ
ಮನ್ಸೂರ್ ಮುಲ್ಕಿ