Preview in new tab

ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಲೇಖಕಿ, ಸಾಮಾಜಿಕ ಹೋರಾಟಗಾತಿ೯ ನಮ್ಮ ಹಾಸನದ ನಗರದ ಹೆಮ್ಮೆಯ ಪುತ್ರಿ ” ಸಾಹಿತ್ಯದ ನವಿಲು” ಎಂದು ಬಿರುದು ಪಡೆದುಹೆಸರಾಗಿರುವ  ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್.

ಇತ್ತೀಚಿನ ದಿನಗಳಲ್ಲೂ ಕೂಡ, ಬಹಳಷ್ಟು ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ, ರಂಗಭೂಮಿಯ ಕ್ಷೇತ್ರದಲ್ಲಿ, ನಟನೆಯಲ್ಲಿ, ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ನೊಂದವರ ಪರವಾಗಿ, ಮಹಿಳೆಯರ ಪರವಾಗಿ, ದಲಿತರ ಪರವಾಗಿ ಹೋರಾಡುತ್ತಾ ಅವರ ಹಕ್ಕುಗಳನ್ನು ಅವರಿಗೆ ತಲುಪಿಸಲು ಪ್ರಯತ್ನ ಪಡುತ್ತಿದ್ದಾರೆ. ಇಂತವರ ಮಧ್ಯ ಇತ್ತೀಚಿನ ದಿನಗಳಲ್ಲಿ ಪ್ರವಧ೯ಮಾನಕ್ಕೆ ಬರುತ್ತಿರುವ ಸಾಹಿತಿ.ಸಾಮಾಜಿಕ ಹೋರಾಟಗಾತಿ೯ಯೇ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್.

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಮೂಲತಃ ಹಾಸನದವರು. ಹಾಸನದ ಶ್ರೀ ಸುರೇಶ್ ಮತ್ತು ಶ್ರೀಮತಿ ನೀಲಮ್ಮ ಎಂಬ ದಂಪತಿಗಳ ಹಿರಿಯ ಪುತ್ರಿಯಾಗಿ ಜನಿಸಿದರು.

ಇವರು ನ್ಯಾಷನಲ್  ಪ್ರಾಥಮಿಕ ಶಾಲೆ ಹಾಸನ ಇಲ್ಲಿ ಪ್ರಾಥಮಿಕ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ಪ್ರೌಢಶಾಲೆ ಹಾಸನದಲ್ಲಿ  ಪ್ರೌಢ ಶಿಕ್ಷಣವನ್ನು ಮುಗಿಸಿದರು. ನಂತರ ವಿದ್ಯಾಭ್ಯಾಸ ಮುಂದುವರಿಸಿದ ಇವರು ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ,ಇದೇ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ನಂತರದಲ್ಲಿ ಶಿಕ್ಷಕರ ತರಬೇತಿಯನ್ನು (B Ed) ಅತ್ಯುನ್ನತ  ದರ್ಜೆಯಲ್ಲಿ  ಶ್ರೀ ರಂಗ  ಬಿ ಎಡ್.ಕಾಲೇಜು ಹಾಸನ ಪೂರೈಸಿದರು. ಉನ್ನತ ವ್ಯಾಸಂಗವನ್ನು ಮಾಡಲು ನಿಧ೯ರಿಸಿ, ಸ್ನಾತಕೋತ್ತರ ಪದವಿಯನ್ನು ಮಾನಸಗಂಗೋತ್ರಿ ಕಾಲೇಜು, ಮೈಸೂರು ಇಲ್ಲಿ ಮುಗಿಸಿದರು.

ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು ತಮ್ಮ ಶಿಕ್ಷಕಿ ವೃತ್ತಿಯನ್ನು ತಾನು ಶಿಕ್ಷಕರ ತರಭೇತಿಯನ್ನು ಪಡೆದ ಕಾಲೇಜಿನ ಆಡಳಿತ ಮಂಡಳಿಯ ಶಾಲೆಯಾದಂತಹ ಶ್ರೀರಂಗ  ಕಿಡ್ಸ್ ವರ್ಡ್ ಶಾಲೆ( ಬ್ರಿಲಿಯಂಟ್ ಪಬ್ಲಿಕ್ ಸ್ಕೂಲ್ ) ಇಲ್ಲಿ ತಮ್ಮ ವೃತಿಯ ಪಯಣವನ್ನು ಆರಂಭಿಸಿದ ಇವರು ನಂತರದಲ್ಲಿ ಹಾಸನದ ಬಸವೇಶ್ವರ ಪ್ರೌಢಶಾಲೆ, ಗೋಲ್ಡನ್ ಪಬ್ಲಿಕ್ ಸ್ಕೂಲ್, ರ‍್ಯಾಂಬೋ ಕಿಡ್ಸ್ ವರ್ಡ್, ಇಲ್ಲಿ ಹಲವು ವರುಷಗಳು ಕಾರ್ಯವನ್ನು ನಿವ೯ಹಿಸಿ, ಸಾಂಸಾರಿಕ ಜೀವನವನ್ನು ಆರಂಭಿಸಿದ ಶ್ರೀಮತಿ ಹೆಚ್.ಎಸ್.ಪ್ರತಿಮಾ  ಹಾಸನ್ ರವರು ತನ್ನ ಪತಿಯ ಜೊತೆಯಲ್ಲಿ ಹೊರರಾಜ್ಯದಲ್ಲಿ ನೆಲೆಸಿದರು, ಉದ್ಯೋಗ ಮತ್ತು ಸಮಾಜಸೇವೆಯನ್ನು ಆರಂಭಿಸಿದ ಇವರು ಮಹಾರಾಷ್ಟ್ರದ ” ಸರಸ್ವತಿ ವಿದ್ಯಾಲಯಂ ಶಾಲೆಯಲ್ಲಿ ” ಎರಡು ವರ್ಷ  ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ನಂತರ ಹಿಮತ್ ಸಿಂಗ್ ಕಾ  ಕಾರ್ಖಾನೆಯಲ್ಲಿ ಸೂಪರ್ವೈಸರ್ ಆಗಿ ಉದ್ಯೋಗವನ್ನು  ಮಾಡಿದರು. ಮತ್ತೆ ಹೊರ ರಾಜ್ಯದಿಂದ ತಾಯ್ನೆಲಕ್ಕೆ ಮರಳಿದ ಶ್ರೀಮತಿ ಪ್ರತಿಮಾ ಹಾಸನ್ ರವರು ಬುದ್ಧಿಮಾಂದ್ಯ, ಕಿವುಡ  ಅಂದ ಮಕ್ಕಳ ಶಾಲೆ. ಮೈಸೂರು ಇಲ್ಲಿ ಮತ್ತೆ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ  ಕಂಪ್ಯೂಟರ್ ತರಬೇತಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಶಾಸ್ತ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಎರಡು ವರ್ಷ ಕಾರ್ಯ ನಿರ್ವಹಿಸಿ, ಹಲವು  ಸರ್ಕಾರಿ ಶಾಲೆಯಲ್ಲಿ ಅರೆಕಾಲಿಕ ಕಂಪ್ಯೂಟರ್ ಟೀಚರ್ ಆಗಿ ಕೆಲಸವನ್ನು ನಿವ೯ಹಿಸಿದ್ದಾರೆ.ಅಷ್ಟೇ ಅಲ್ಲದೆ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಶ್ರೀಮತಿ ಪ್ರತಿಮಾ ಹಾಸನ್ ರವರು  ನೇರ ನುಡಿಯ ಮಾತುಗಾರ್ತಿಯಾಗಿದ್ದು ಧೈರ್ಯವಂತೆ ಕೂಡ. ಸಾಹಿತಿ, ಶಿಕ್ಷಕಿ, ಸಮಾಜ ಸೇವಕಿಯಾಗಿ ಹೋರಾಟಗಾತಿ೯ಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೆ ಆದಂತಹ  ರೀತಿಯಲ್ಲಿ ಸೇವೆ ಸಲ್ಲಿಸುತ್ತಾ. ಸಾಮಾಜಿಕ ಕಳಕಳಿಯನ್ನು ತೋರುತ್ತಿದ್ದಾರೆ. ಹ್ಯೂಮನ್ ರೈಟ್ಸ್ ಸಂಘಟನೆಯಲ್ಲಿ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ನೊಂದು ಬಂದಂತಹ ಮಹಿಳೆಯರಿಗೆ ತನ್ನಿಂದ ಆಗುವಂತಹ ಸೇವೆಯನ್ನು ನಿಷ್ಕಲ್ಮಶವಾಗಿ ಸಲ್ಲಿಸುತ್ತಾ, ನೊಂದ ಮಹಿಳೆಯರ ಪರವಾಗಿ ಹೋರಾಟವನ್ನು ಆರಂಭಿಸಿದ್ದಾರೆ.
.  ಬೆನ್ನು ತಟ್ಟುವ ಜನಕ್ಕಿಂತ  ಬೆನ್ನಿಗೆ ಇರಿಯುವ ಜನರೇ ಹೆಚ್ಚಿದ್ದು. ಬಹಳಷ್ಟು ಅವಕಾಶ ವಂಚನೆಗಳನ್ನು, ಹಾಗೂ  ಕಾರ್ಯಗಳಲ್ಲಿ ತೊಡಕುಗಳನ್ನ ನೀಡಿದವರು ಹೆಚ್ಚು ಯಾವುದಕ್ಕೂ ಅಂಜದಂತೆ  ಇವರು ತಮ್ಮ ಕಾರ್ಯವನ್ನು  ಮಾಡಿಕೊಂಡು ಹೋಗುತ್ತಿದ್ದಾರೆ. ಇವರು  ಬಾಲ ಮಂದಿರಗಳಲ್ಲಿ, ವೃದ್ಧಾಶ್ರಮಗಳಲ್ಲಿ, ಮೂಕ ಮತ್ತು ಕಿವುಡ ಮಕ್ಕಳ ಶಾಲೆಗಳಲ್ಲಿ, ಅಂದ ಮಕ್ಕಳ ಶಾಲೆಗಳಲ್ಲಿ  ಯಾವುದೇ ಸಂಭಾವನೆ ಇಲ್ಲದಂತೆ  ಕಾರ್ಯವನ್ನು  ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಪ್ರಸ್ತುತದಲ್ಲಿ ಸಮಯ ಮಾಡಿಕೊಂಡು  ಕಾರ್ಯಗಳನ್ನು ಅಲ್ಲಿಯೂ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.   ಈ ವಿಚಾರ ಹಲವಾರು ಜನರ ಪ್ರಸಂಶೆಗೆ ಮತ್ತು ಶ್ಲಾಘನೆಗೆ   ಕಾರಣವಾಗಿದೆ. ಬಾಲ್ಯ ವಿವಾಹದ ವಿರುದ್ಧ ಹೋರಾಟ, ಹೆಣ್ಣು ಬ್ರೂಣ ಹತ್ಯೆ, ಗೋ ಹತ್ಯೆ  ವಿರುದ್ಧ  ಹಲವಾರು ಹೋರಾಟಗಳನ್ನು ಮಾಡಿದ್ದಾರೆ.  ಇವರ ಬೆಂಬಲವಾಗಿ ತಾಯಿ ಶ್ರೀಮತಿ  ನೀಲಮ್ಮ ಸುರೇಶ್  ಹಾಗೂ ಅಣ್ಣ ಶ್ರೀ  ಹೆಚ್.ಎಸ್. ಮಂಜುನಾಥ್ ಹಾಸನ್.( ಆರೋಗ್ಯ ನಿರೀಕ್ಷಣಾಧಿಕಾರಿಗಳು ) ನಿಂತಿದ್ದಾರೆ.ಮೊದಮೊದಲು ಯಾವ ಕಾರ್ಯಗಳು ಬೇಡ ಎನ್ನುತ್ತಿದ್ದವರು  ಇಂದು ಒಂದು ಸಂಸ್ಥೆಯನ್ನು ಸ್ಥಾಪಿಸಿ ಕೊಟ್ಟು  ಅವರ ಆಸಕ್ತಿಯ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅವರ ಸಂಬಂಧಿಕರ ಬೆಂಬಲ,ಮಾರ್ಗದರ್ಶನ  ಇದೆ.

ಕರ್ನಾಟಕ ರಾಜ್ಯ ಮುಕ್ತಕ ಸಾಹಿತ್ಯ ಪರಿಷತ್ತಿನ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ಕೆಂಪೇಗೌಡ ಯುವ  ರಾಜ್ಯ ಒಕ್ಕಲಿಗರ ಸಂಘಟನೆಯ ರಾಜ್ಯ  ಸಂಘಟನಾ  ಕಾರ್ಯದರ್ಶಿಯಾಗಿ,, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಕನ್ನಡ ರಕ್ಷಣಾ ವೇದಿಕೆಯ ನಿಕಟ ಪೂರ್ವ  ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ,  ಸ್ಟೇಟ್ ಹ್ಯೂಮನ್ ರೈಟ್ಸ್ ನಲ್ಲಿ ಹಾಸನದ ಅಧ್ಯಕ್ಷರಾಗಿ,  ರಾಜ್ಯ  ಪ್ರೆಸ್ ಕ್ಲಬಿನ ಹಾಸನದ ಅಧ್ಯಕ್ಷರಾಗಿ, ಕನಸಿನ ಭಾರತ ಪತ್ರಿಕೆಯ ಹಾಸನ ಜಿಲ್ಲಾ ವರದಿಗಾರ್ತಿಯಾಗಿಕಾರ್ಯವನ್ನು ನಿವ೯ಹಿಸುತ್ತಿದ್ದು ರೈತರ ಪರವಾಗಿ. ಧ್ವನಿಯಿಲ್ಲದವರ ಪರವಾಗಿ ಧ್ವನಿಯೆತ್ತಿ ಹೋರಾಡುತ್ತಾ ಅವರಿಗೆ ನ್ಯಾಯ ಕೊಡಿಸಿ ಹೋರಾಟಗಾತಿ೯ಯಾಗಿ ಹಾಸನ ಜಿಲ್ಲೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾಕ್ಟರ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಮತ್ತು ಅಖಿಲ ಕರ್ನಾಟಕ ರಾಜರತ್ನ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ, ಮಹಿಳಾ ಜಿಲ್ಲಾಧ್ಯಕ್ಷರು  SESMA ಮಲೆನಾಡು ಮಂಡಲ್ (Zonal ) ಮಹಿಳಾ ವಿಭಾಗದ ಮುಖ್ಯಸ್ಥೆ ( ಹಾಸನ ಕೊಡಗು ಚಿಕ್ಕಮಂಗಳೂರು )ಹಾಗೂ  ಮಾರ್ದಿನಿ ಮಾಸಪತ್ರಿಕೆಯ ಮಹಿಳಾ ಸಾಹಿತ್ಯ ಅಧ್ಯಕ್ಷೆ.

ಬರೀ ಹೋರಾಟ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಇವರು. ಕನ್ನಡದಲ್ಲಿ  ಮುಕ್ತಕಗಳನ್ನು ರಚಿಸುವ ಕಾಯಕದಲ್ಲೂ ತೊಡಗಿದ್ದಾರೆ. ಮುಕ್ತಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡುವ ಮಹಾದಾಸೆ ಹೊಂದಿದ್ದು, ಹಿಂದಿ ಮತ್ತು ಕನ್ನಡ ಎರಡು ಭಾಷೆಯಲ್ಲೂ  ಕವನಗಳನ್ನು ಬರೆಯುತ್ತಿದ್ದಾರೆ. ಇವರ ಕವನಗಳು. ಚುಟುಕುಗಳು. ಲೇಖನಗಳು.ವಿಮರ್ಶೆ ಗಳು. ಮುಕ್ತಕಗಳು. ಗಜಲ್, ಕಥೆ, ಟಂಕಾ, ಶಿಶು ಗೀತೆ,ರುಬಾಯಿ ಮುಂತಾದ ಕಾವ್ಯ ಪ್ರಕಾರಗಳು ಹಲವಾರು  ಪತ್ರಿಕೆಗಳಲ್ಲಿ,  ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದು. ಇವರ ಸಂದಶ೯ಗಳನ್ನು  ಹಲವು ಪತ್ರಿಕೆ ಮತ್ತು ದೂರದರ್ಶನದವರು ಪಡೆದಿರುತ್ತಾರೆ. ಇವರು  ಹಲವಾರು ವರ್ಷದಿಂದಲೂ  ಸಾಮಾಜಿಕ ಕಾರ್ಯಕರ್ತೆಯಾಗಿದ್ದು. ಮಹಿಳಾ ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ,,ಗಾಯಕಿ, ನೃತ್ಯ ತರಬೇತಿ ನೀಡುತ್ತಾ,  ಸಮಾಜಮುಖಿ  ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಗಮನಿಸಿದ ಸಂಘಸಂಸ್ಥೆಗಳು  ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಇವರು ಗುರುತರ ಸೇವೆಯನ್ನು ಗಮನಿಸಿ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇವರು ಬಂದಂತಹ ಎಲ್ಲಾ ಪ್ರಶಸ್ತಿಯನ್ನು ಸಹ ಪಡೆದಿಲ್ಲ. ಹಲವಾರು ಪ್ರಶಸ್ತಿಗಳನ್ನು ತಿರಸ್ಕಾರ ಮಾಡಿದ್ದು ಉಂಟು. ಅತಿ ವೇಗವೂ ಅಪಾಯಕ್ಕೆ ಕಾರಣವೆಂಬ ಮನೋಭಾವದಲ್ಲಿ ಹಲವಾರು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿಗಳು ಒಲಿದು ಬಂದರು  ಸಹ ಆಯ್ಕೆಯ ಪ್ರಶಸ್ತಿಗಳನ್ನು ಮಾತ್ರ ಪಡೆದಿದ್ದಾರೆ

 “ಕೊರೊನ ವಾರಿಯಸ್ ಪ್ರಶಸ್ತಿ” 2019 ಆಕ್ಸಿಸ್ ಬ್ಯಾಂಕ್ ಬೆಂಗಳೂರು, “ಭಾರತ್ ಭೂಷಣ್ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿ” ಮಧ್ಯ ಪ್ರದೇಶ ಭೂಪನ್ನಲ್ಲಿ ಪಡೆದದ್ದು, “ಗೀಜು ಬಾಯಿ ಬಗೇಕ ರಾಷ್ಟ್ರೀಯ ಶಿಕ್ಷಣ ಸಮ್ಮನ್” ಛತ್ತೀಸ್ಗಢ ನಲ್ಲಿ ಪಡೆದದ್ದು, “ಬ್ರಾಂಡ್ ಐಕಾನ್ ಆಫ್ ದ ಇಯರ್” 2023 ವಿನ್ನರ್, “ರೋಟರಿ ಮೈಸೂರ್ ಸ್ಟಾರ್  ಪ್ರಶಸ್ತಿ  “, ರೋಟರಿ ಕ್ಲಬ್ ಆಫ್ ಮೈಸೂರ್ ಸ್ಟಾರ್. “ಶಿಕ್ಷಕ್  ಶಿಲ್ಪಿ ರಾಷ್ಟ್ರೀಯ ಗೌರವ ಸಮ್ಮಾನ್” ಛತ್ತೀಸ್ಗಡ್ .”ರಾಷ್ಟ್ರೀಯ ಮಟ್ಟದ ಸಾಧಕರತ್ನ ಪ್ರಶಸ್ತಿ” ನಾಡಿನ ಸಮಚಾರ ಪತ್ರಿಕೆ. “ಕನ್ನಡದ ಕಣ್ಮಣಿ ಪ್ರಶಸ್ತಿ” ಮಕ್ಕಳ ಸಾಹಿತ್ಯ ಪರಿಷತ್ತು ಬೆಂಗಳೂರು. “ನಾರಿ ಶಕ್ತಿ ಪ್ರಶಸ್ತಿ” ಸ್ತ್ರೀ ಶಕ್ತಿಸಂಘ. “ಶಿಕ್ಷಣ ಶ್ರೀ ರಾಜ್ಯ  ಪ್ರಶಸ್ತಿ”  ಯಾದಗಿರಿ. “ಶಾರದ ಸುಪುತ್ರ ಪ್ರಶಸ್ತಿ”  ಸಮ್ಮಿಲನ ಕಲೆ ಮತ್ತು ಸಾಹಿತ್ಯ ಸಾಂಸ್ಕೃತಿಕ ವೇದಿಕೆ. “ಕನ್ನಡದ ಕಬ್ಬಿಗ 2024ರ ಪ್ರಶಸ್ತಿ” ನೆಲಮಂಗಲ, “ವಿಕಾಸ ಶ್ರೀ ಪ್ರಶಸ್ತಿ” ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು. ” ಜ್ಞಾನಯೋಗಿ  ಶಿವಶರಣೆ ನೀಲಾಂಬಿಕ ಪ್ರಶಸ್ತಿ ವಿಶ್ವ ಕನ್ನಡ ಸಂಸ್ಥೆ. ವೀರರಾಣಿ ಚೆನ್ನಮ್ಮ ಸದ್ಬವನ ರಾಜ್ಯಪ್ರಶಸ್ತಿ, ಮಕ್ಕಳ ಸಾಹಿತ್ಯ ಪರಿಷತ್ತು ಬೆಂಗಳೂರು  ವಿಜಯಪುರದ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನದಿಂದ ” ಕವಿ ವಿಭೂಷಣ “, ಕನ್ನಡ ರಾಜ್ಯೋತ್ಸವ ಪ್ರಶಸ್ತಿ  ಮತ್ತು “ಸಮಾಜ ಸೇವಾ ರತ್ನ “ರಾಜ್ಯ ಪ್ರಶಸ್ತಿಯನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ. ಮಹಿಳಾ ಸಾದಕಿ ಪ್ರಶಸ್ತಿ ಕರ್ನಾಟಕ ರಾಜ್ಯ ರೈತರ ಸಂಘದಿಂದ. ರಾಷ್ಟ್ರಕವಿ ಕುವೆಂಪು ಪ್ರಶಸ್ತಿ 2024 ಕವಿನುಡಿ ಸಂಭ್ರಮ ಅಕ್ಷರನಾದ ಪಬ್ಲಿಕೇಶನ್ ಬೆಂಗಳೂರು, ಅಕ್ಷರನಾದ ಹೆಮ್ಮೆಯ ಕನ್ನಡತಿ ಅಕ್ಷರನಾದ ಪಬ್ಲಿಕೇಶನ್ ಬೆಂಗಳೂರು, ಶ್ರೀಮತಿ ಯಶೋದರ ದಾಸಪ್ಪ ಪ್ರಶಸ್ತಿ ರಾಜ ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು ವತಿಯಿಂದ ಪಡೆದಿದ್ದಾರೆ.  
ಕಥಾ ಬಿಂದು ಪ್ರಕಾಶನದಿಂದ ” ಸೌರಭ ರತ್ನ ರಾಜ್ಯ  ಪ್ರಶಸ್ತಿ”ಯನ್ನು, ಹೈಬ್ರಿಡ್ ನ್ಯೂಸ್ ಕೊಪ್ಪಳ ಇವರಿಂದ “ಮಹಿಳಾ ಸಾಧಕಿ ಮತ್ತು ಹೆಮ್ಮೆ ಕನ್ನಡತಿಯ ಪ್ರಶಸ್ತಿಯನ್ನು ಪಡೆದು ” ಶಿಕ್ಷಣ ಶಿಲ್ಪಿ ಎಂಬ ಪ್ರಶಸ್ತಿಯನ್ನು ಛತ್ತೀಸ್ಗಡದಲ್ಲಿ ಪಡೆದಿದ್ದಾರೆ. ಮಧ್ಯಪ್ರದೇಶದಲ್ಲೂ ಸಹ ಇವರು ಪ್ರಶಸ್ತಿಯನ್ನು ಪಡೆದಿರುತ್ತಾರೆ. ” ಕಾವ್ಯ ನುಡಿ ರಾಜ್ಯೋತ್ಸವ ಪ್ರಶಸ್ತಿ “.” ದಸರಾ ಕಾವ್ಯ ಪ್ರಶಸ್ತಿ “. ಚುಟುಕು ಸಿಂಚನ ಪ್ರಶಸ್ತಿ”. ಶ್ರೇಷ್ಠ ಸಾಧಕ ರಾಷ್ಟ್ರ ಪ್ರಶಸ್ತಿ”. “ಪಿರಿಯಡ್ ಆಫ್ ಇಂಡಿಯಾ ಅವಾರ್ಡ್ “. “ಕರುನಾಡ ರಾಜ್ಯೋತ್ಸವ ಪ್ರಶಸ್ತಿ” ” ಶಿವಶರಣೆ ನೀಲಾಂಬಿಕ ಪ್ರಶಸ್ತಿ. ಪ್ರಶಸ್ತಿ ಸ್ವರ್ಣಭೂಮಿ ಫೌಂಡೇಶನ್ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಇವರಿಂದ “ಮಹಿಳಾ ಚೈತನ್ಯ ರತ್ನ” ಪ್ರಶಸ್ತಿ ಪಡೆದಿರುತ್ತಾರೆ. “ರಾಷ್ಟ್ರೀಯ ಗೌರವ ಶಿಕ್ಷಕ್ ಸಮ್ಮಾನ್”. “ರಾಷ್ಟ್ರೀಯ ಸಾಧಕ ರತ್ನ ಪ್ರಶಸ್ತಿ “ಮತ್ತು  ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಿಮಾಲಯ ಪ್ರತಿಷ್ಠಾನ. ಮೈಸೂರು ಇವರಿಂದ ” ಪಂಚಮುಕ್ತಕ ಮಾಲೆ ಪ್ರಶಸ್ತಿ ” ಬಹುಮುಖ ಪ್ರತಿಭೆಯ ಮಹಿಳಾ ಸಾದಗೆ ಪ್ರಶಸ್ತಿ ಒಕ್ಕಲಿಗರ ಸಂಘದಿಂದ ಪಡೆದಿದ್ದಾರೆ, ಒಟ್ಟಾರೆ 89ಕ್ಕೂ ಹೆಚ್ಚು ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನು ಹಲವಾರು ಪ್ರಶಸ್ತಿಯನ್ನು ಪ್ರಸ್ತುತದಲ್ಲಿ ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ. ಹೀಗೆ ಹಲವಾರು ಪ್ರಶಸ್ತಿಗಳ ಸರಮಾಲೆಯ ಪಟ್ಟಿಯೆ  ಇದೆ ಇವರದು.. ಒಟ್ಟಾರೆ ರಾಜ್ಯ ರಾಷ್ಟ್ರ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಎಲ್ಲೆಡೆಯೂ  ಗುರುತಿಸಿಕೊಂಡಿದ್ದಾರೆ. ಇವರ ಸಾಧನೆಗೆ ಜಿಲ್ಲಾಡಳಿತದಿಂದ  ಸ್ವಾತಂತ್ರ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಬೇಕೆಂಬ ಮಹದಾಸೆಯನ್ನು ಹೊತ್ತಿರುವ ಇವರು. ಪುಸ್ತಕಗಳೇ, ಬರಹವೇ ನನ್ನ ನೆಚ್ಚಿನ ಸ್ನೇಹಿತ ಮತ್ತು ಸಂಗಾತಿ ಎಂದು ಹೇಳುತ್ತಾ, ತನ್ನ ಅಮ್ಮನ ಮತ್ತು ಅಣ್ಣನ ಪ್ರೋತ್ಸಾಹವೇ ನನ್ನ ಬೆಳವಣಿಗೆ ಕಾರಣವಾಯಿತು ಎನ್ನುತ್ತಾರೆ. ರಾಷ್ಟ್ರ ಮಟ್ಟ ಕವಿಗೋಷ್ಠಿಯಲ್ಲಿ ಹಿಂದಿ ಭಾಷೆಯಲ್ಲಿ  ಕವನ ವಾಚನ ಮಾಡಿ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ರಾಜ್ಯಮಟ್ಟದ ಬಹಳಷ್ಟು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ನಿರೂಪಕಿಯಾಗಿಯೂ ಕೂಡ ಕಾರ್ಯಕ್ರಮದ ನಿವ೯ಹಣೆ ಮಾಡುತ್ತಾ ನೂರಾರು  ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಪ್ರಶಂಸೆಯನ್ನು ಪಡೆದಿರುತ್ತಾರೆ.
 ಸಾಹಿತ್ಯ ಲೋಕಕ್ಕೆ ಹಲವಾರು ಕೃತಿಗಳನ್ನು  ಲೋಕಾರ್ಪಣೆಯನ್ನು ಮಾಡಿ ಕೊಡುಗೆಯಾಗಿ ನೀಡಿದ್ದಾರೆ.ಮನದಾಳದ ಪ್ರತಿಬಿಂಬ( ಲೇಖನಗಳ ಮಾಲೆ ), ನೀಲ ಪ್ರತಿಮಾನ ಮಂಜು ( ಕವನ ಸಂಕಲನ ) ಅಂತರಾಳದ ಪ್ರತಿರವ ( ಮುಕ್ತಕ ಸಂಕಲನ ), ಪಂಚಮುಕ್ತಕಮಾಲೆ ( ಮುಕ್ತಕ ಸಂಕಲನ ) ಪ್ರತಿಕಾವ್ಯ( ಕವನ ಸಂಕಲನ ), ಭಾವನೆಗಳ ಪ್ರತಿರೂಪ ( ವೈಚಾರಿಕ ಲೇಖನಗಳು) ಪ್ರತಿ ಬೋಧ ( ಅಂಕಣಗಳ ಮಾಲೆ ), ಬಣ್ಣದ ಪ್ರತಿ ಡಬ್ಬಿ  (ಶಿಶು ಗೀತೆ  ಸಂಕಲನ). ಮುದ್ರಣದ ಅಂಚಿನಲ್ಲಿ  ಪ್ರತಿಮಾಂತರಂಗ  ( ಸಮಗ್ರ ಸಂಕಲನ )
 ಪ್ರತಿ ಲೇಖನಿ ( ಸಮಗ್ರ ಸಂಕಲನ ) ಸಮಾಜದ ಪ್ರತೀಕ ( ಅಂಕಣಗಳ ಮಾಲೆ ) ಪ್ರತಿಕ್ರಾಂತಿ( ವೈಚಾರಿಕ ಲೇಖನಗಳ ಸಂಗ್ರಹ ) ಇನ್ನು ಹಲವಾರು ಇದೆ.  

ಸದಾ ಕ್ರಿಯಾಶೀಲರಾಗಿರುವ ಶ್ರೀಮತಿ ಪ್ರತಿಮಾ ಹಾಸನ್ ಬಹುಮುಖ ಪ್ರತಿಭೆ. ಇವರು ಇತ್ತೀಚೆಗೆ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಕನ್ನಡ ಪರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ನೀಡಿ ಗೌರವಿಸುತ್ತಾ ಕನ್ನಡದ ಸೇವೆಯಲ್ಲಿ ನಿರತರಾಗಿದ್ದಾರೆ. ದಿನನಿತ್ಯ ಅಂಕಣಗಾರ್ತಿಯಾಗಿ, ಲೇಖಕಿಯಾಗಿ, ಕವಯತ್ರಿಯಾಗಿ, ವಿಮರ್ಶಕಿಯಾಗಿ, ಒಂದಲ್ಲ ಒಂದು  ಪ್ರಕಾರದಲ್ಲಿ ದಿನನಿತ್ಯ ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ.”ದಿನಕ್ಕೊಂದು ಮುಕ್ತಕ’ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಹಿನಿ ಮತ್ತು  ಶುಭೋದಯ ಪತ್ರಿಕೆಗಳಲ್ಲಿ  ಮುಕ್ತಕ  ಮತ್ತು ಅದರ ಭಾವಾರ್ಥವಾದ ಜೊತೆಗೆ ಬರೆಯುತ್ತಿದ್ದಾರೆ. ಉದಯವಾಹಿನಿ ಮತ್ತು ಶುಭೋದಯ ಪತ್ರಿಕೆಗಳಲ್ಲಿ ಸಂಪಾದಕೀಯಗಳನ್ನು ಬರೆದು ದಿಟ್ಟ ಮಹಿಳೆ ಎಂಬ ಬಿರುದನ್ನು ಪಡೆದಿದ್ದಾರೆ.

 ಇವರು ಹೀಗೆಯೇ ಸಾಮಾಜಿಕ ಕಾರ್ಯಕರ್ತೆಯಾಗಿ, ಸಾಹಿತ್ಯ, ಕೃಷಿ. ಸಾಂಸ್ಕೃತಿಕ ಕ್ಷೇತ್ರ. ಶೈಕ್ಷಣಿಕ ಕ್ಷೇತ್ರದಲ್ಲಿ  ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ಇವರ ಸೇವೆ ಮುಂದುವರಿಯಲಿ ಎಂದು ಪತ್ರಿಕೆಯ ಪರವಾಗಿ ವೈಯಕ್ತಿಕವಾಗಿ  ಹಾರೈಸುತ್ತೇನೆ.

ಬದಲಿಕೆಯು ಬೇಕು ಜೀವನದಿ ನೀ ತಿಳಿದು ನಡೆ
ಜನರೆದುರು ಬದುಕಲು ರೀತಿ ನೀತಿ ಬೇಕು ಎಲ್ಲೆಡೆ
ಕೋಪ ಬಂದಾಗ ಕಡಿಮೆ ಮಾಡಿಕೊಳ್ಳುತಿರಲು
ಪ್ರೀತಿ ಬಂದಾಗ ಹೆಚ್ಚಾಗಿ ತೋರುತಿರಲು….

ಮೌನದಿ ಇದ್ದಾಗ ಮಾತು ಬೇಕೆನ್ನುವರು ಕೇಳುತಲಿ
ಮಾತನಾಡಿದರೆ ಕಡಿಮೆ ಮಾಡೆನ್ನುವರು ಹೇಳುತಲಿ
ವೇಗದ ನಡೆದರೆ ನಿಧಾನವೆನ್ನುವರು ನೋಡುತಲಿ
ನಿಧಾನವಾಗಿ ನಡೆದರೆ ಬೇಗ ನಡೆ ಎನ್ನುತಲಿ……

ಮಕ್ಕಳಿಲ್ಲವೆಂದರೆ ಮಕ್ಕಳಿಲ್ಲ ಎನ್ನು ತಲೆ ಕೇಳುವರು
ಮಕ್ಕಳಾದರೆ ಎಷ್ಟೆಂದು ಪ್ರಶ್ನಿಸುವರು
ಒಂದು ಮಗು ಬಿದ್ದರೆ ಇಷ್ಟೇನಾ ಎನ್ನುವರು
ಎರಡು ಎಂದರೆ ಸಾಕೆಂದು ಹೇಳುವರು…..

ಮೂರು ಮಗುವಾದರೆ ಹೆಚ್ಚೆಂದು ಹೇಳುತಲಿ
ಜೀವನದಿ ಬದಲಿಗೆ ಬೇಕು ಬದುಕ ಸಾಗಿಸುತಲಿ
ತಿಳಿದು ನಡೆಯುತಿರು ಮಾರ್ಗವ ಅರಿಯುತಲಿ
ಜಗದಿ ಬದುಕ ಸಾಗಿಸುವುದ ಕಲಿಯುತಲಿ…..

ಎಲ್ಲವ ತಿಳಿಯುತ ಸಾಗುತಿರು ಜೀವನದಲಿ
ಏನಾದರೂ ಸರಿಯೇ ಹಿತಮಿತವಿರಲಿ ಮಾತಿನಲಿ
ಜಗವಿಹುದು ವಿಚಿತ್ರ ಎಂಬುದ ಗಮನಿಸುತಲಿ
ನಡೆಯುತಿರು ಸಹನೆಯೂ ನಿನ್ನಲ್ಲಿರಲಿ……

ತಾಳೆಯ ಹಾಕದಲೆ ಜೀವನವ ಮಾಡದಿರು
ಸರಿಯಾದ ಮಾರ್ಗದರ್ಶನವ ನೀ ಕೊಡುತಿರು
ಬದಲಿಕೆಯುಬೇಕೆಂದು ಕಲಿತು ನಡೆಯುತಿರು
ಆಗ ಹಾಳದು ಸ್ವರ್ಗವಾಗುವುದು ಕೇಳುತಿರು……

****

ನೃತ್ಯವನು ಮಾಡುತ ನಟರಾಜನ ಪೂಜೆಯಲಿ
ಕಲಿಯುತ ಬಂಗಿಗಳ ಗುರುಗಳ ಮಾರ್ಗದಲಿ
ಜಗವಿಹುದು ಕಲೆಯಲ್ಲಿ ಎಂದು ನಾ ತಿಳಿಯುತಲಿ
ಶ್ರದ್ಧೆಯಿಂದಲೇ ನಡೆವೆ ತಲಿಕೆಯಲಿ ನಾನೇನುತಲಿ…..

ಕಲಿಕೆಗೆ ವಯಸ್ಸಿಲ್ಲ ಎಂಬುದ ಅರಿಯುತಲಿ
ಪಕ್ವತೆಯ ಪಡೆಯುವುದ ರೆಡ ಗಮನವಿರಲಿ
ಕನಸಲ್ಲೂ ಮನಸಲ್ಲೂ ಕಲಿವಿಕೆ ಇರಲೆಲ್ಲ
ಸಾಧನೆಯು ಕಲಿತಾಗ ತೋರುವಿಕೆಯಲಿ…..

ತಲೆಗೆ ಬೆಲೆ ಇರಲಿ ಅದನು ಪೂಜಿಸುತಲಿ
ಭಕ್ತಿ ಭಾವದಲಿ ಕಲಿತರೆ ಇತರರಿಗೆ ಕಲಿಸುತಲಿ
ಮಾರ್ಗದರ್ಶನ ಎನ್ನುತಲಿ ನಡೆಯುತಿರಲಿ
ಗುರುವೇ ದೈವವೆಂದು ನಮಿಸುತಲಿ……

ಬಾಳಲ್ಲಿ ಗೆಲುವಿದು ತಿಳಿಯುತ ನಡೆಯುತಲಿ
ಸತ್ಯದಾ ದಾರಿಯಲ್ಲಿ ದೈವದ ಕೃಪೆಯಲಿ
ಮಾಡದರೆ ಕೇಡನು ಯಾರಿಗೂ ಸಾಗುತಿರು
ಜೀವನದ ಯಾತ್ರೆ ಸುಲಭವಲ್ಲ ತಿಳಿಯುತಿರು…….

****

ನಿಮ್ಮ ಪ್ರತಿಭೆ ನಿಮಗೆ ಅವರ ಪ್ರತಿಭೆ ಅವರಿಗೆ
ನಕಲಿಕೆ ಮಾಡುವಿರಿ ನೀವು? ಕೇಳಿರಿ ಒಮ್ಮೆ
ಅವರ ಕಲ್ಪನೆಯ ಬರಹದಲ್ಲಿ ಬರದಿಹರು
ನಿಮ್ಮ ಬರಹದ ರೂಪವ ಬರೆಯಿರಿ ….

ಜಗದಲಿ ಮಾಹಿತಿಯ ನೀಡುವುದರಲಿ
ಮಗ್ನರೆಂದು ತಿಳಿಯಿರಿ ನಿಮ್ಮ ಕಳ್ಳತನದ
ಬರಹ ಹೊರಗೆ ಬರುವುದೊಂದೇ ದಿನ ನಕಲ ಮಾಡದಿರಿ
ನಿಮ್ಮ ಚಿಂತನ ಶಕ್ತಿ ಮಾತ್ರ ಹೊರಹೊಮ್ಮಿಸುತ ನಡೆಯಿರಿ

ಬರಹದಿ ಮಾಹಿತಿಯು ನಿಮ್ಮದಾಗಲಿ ತಿಳಿಯಿರಿ
ಎಲ್ಲರಿಗೂ ಅರ್ಥವಾಗುವಂತಿರಲಿ ಕೇಳಿರಿ
ಜಗವದು ಮೋಸ ಎಂದು ತಿಳಿದು ನೀವು ನಕಲ ಮಾಡದಿರಿ
ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟ ಕೇಳಿರಿ…

ಇನ್ನ ವಿಷ ಕುಡಿದು ಬದುಕುವರೇ? ತಿಳಿಯಿರಿ
ಎಂದಿಗೂ ನೀರಿನ ಮೇಲೆ ಗುಳ್ಳೆ ಯಾಗದಿರಿ ನೀವು
ನಿಮ್ಮದೇ ಗಟ್ಟಿಯಾದ ನಿಲುವಿನಲಿ ನಿಲ್ಲಿರಿ
ಸ್ವಂತ ಚಿಂತನೆಯ ಬರಹದಿ ಮೂಡುತಿರಲಿ…

ಕಾರ್ಯದ ಯಶಸ್ಸು ಸಿಗುವಂತೆ ಬರಹ ಮಾಡಿರಿ
ಹಿರಿಯರ ಗುರುಗಳ ಮಾರ್ಗದಿ ಸಾಗುತಿರಿ
ನಡೆಯುತಿರೆ ನೀವು ಜಗವೇ ನಿಮ್ಮ ಕೈಯಲಿ
ಎಂದು ಹಿಂದೇ ತಿರುಗಿ ನೋಡದಿರಿ

ಬದುಕಿದಾಗಲೇ ಸಾಧನೆಯ ಮಾಡಬೇಕು ತಿಳಿಯಿರಿ
ನಿಷ್ಕಲ್ಮಶ ಗುರಿಯ ಹೊಂದಿ ಯಶಸ್ವಿಯಾಗಿರಿ
ಜಗವೇ ನಿಮ್ಮತ್ತ ತಿರುಗು ನೋಡುವಂತಾಗಲಿ
ಜೀವನದ ಪುಸ್ತಕದಿ ಬರಹ ಉತ್ತಮವಾಗಿರಲಿ..


Leave a Reply

Back To Top