ಕಾವ್ತ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ರವಿ ಮುತ್ತಿಟ್ಟ ಮೊಗ್ಗುಗಳಿಗೆಲ್ಲ ಧುಂಧ ನಶೆಯು ಏರಿದೆ ಜಗದಲಿ
ಚಕಿತಗೊಂಡ ಇಬ್ಬನಿಗಳ ಗಂಟಲ ಪಸೆಯು ಆರಿದೆ ಜಗದಲಿ
ಬಂಗಾರ ಹುಡಿ ಎರಚಿದನೇನೋ ಭುವಿಗೆಲ್ಲ ದಿನಕರ
ಮಂಜಿನ ದುಕೂಲವನು ಸರಿಸಿ ಬೆಳಕನು ಉಷೆಯು ತೂರಿದೆ ಜಗದಲಿ
ಪಚ್ಚೆ ಹಸಿರು ನೆಲವನು ತಬ್ಬಿ ಮದದಿ ಮೈಮರತಿದೆ
ಉದುರಿದ ಪಕಳೆಗಳಿಗೆ ಗಾಳಿಯಲಿ ತೇಲುವ ಆಸೆಯು ಜೋರಿದೆ ಜಗದಲಿ
ಎಳೆಬಿಸಿಲು ಮೋಡಿಗೆ ಖುಷಿಯಲಿ ಹಕ್ಕಿಗಳು ಹಾರಿವೆ ಗಗನಕೆ
ಬೆಳ್ಳಿ ಬೆಳಕಿನ ಹೊಳಪಿಗೆ ಹೆದರಿ ಮೆಲ್ಲನೆ ನಿಶೆಯು ಜಾರಿದೆ ಜಗದಲಿ
ಕಣ ಕಣದಲಿ ಚೈತನ್ಯವು ತುಂಬಿ ತುಳುಕಿಹುದು ಬೇಗಂ
ಎಣೆಯಿಲ್ಲದ ದೇವನ ಕರುಣೆಯು ಇದೆಂದು ದಶ ದಿಶೆಯು ಸಾರಿದೆ ಜಗದಲಿ
ಹಮೀದಾ ಬೇಗಂ ದೇಸಾಯಿ
ರವಿಯನ್ನೂ ನಾಚಿಸುವಂತಿದೆ ಮತ್ಲದ ಮೊದಲ ಸಾಲು … ಅದ್ಭುತ ಸಾಲುಗಳು.
ಮೆಚ್ಚುಗೆಗೆ ಧನ್ಯವಾದ ತಮಗೆ
ಹಮೀದಾಬೇಗಂ