ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಣತೆ ಹಚ್ಚುತ್ತೇನೆ ನಾನು
ಒಂದು ಸಣ್ಣ ಆತಂಕದ ನಡುವೆ
ನಿನ್ನೊಲವಿನ ಬೆಳಕಿನಲಿ
ನನ್ನನ್ನೇ ನಾ ಕಾಣಲು.

ಹಣತೆ ಹಚ್ಚುತ್ತೇನೆ ನಾನು
ಒಂದು ಸಣ್ಣ ದುಗುಡದ ನಡುವೆ
ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .

ಹಣತೆ ಹಚ್ಚುತ್ತೇನೆ ನಾನು
ಒಂದು ಸಣ್ಣ ವಿಷಾದದ ನಡುವೆ
ತುಟಿಯಂಚಿನ ಕಿರುನಗೆಯಲ್ಲಿ
ನಿನ್ನ ನೆನಪು ಹೊರಹೊಮ್ಮಿಸಲು.


About The Author

Leave a Reply

You cannot copy content of this page

Scroll to Top