ಕಾವ್ಯ ಸಂಗಾತಿ
ಮಹಾಂತೇಶ ಬಸಪ್ಪ ಬಾಳಿಗಟ್ಟಿ
ನಮ್ಮವ್ವನ ಕೌದಿ
ಉದ್ದ, ಕಿರದ, ದೊಡ್ಡ, ಸಣ್ಣದ
ಬಿಳಿ, ಕರಿ, ಕೆಂಪು ಅರಿವೆಗಳ
ಚಬಕ ಆಗೋ ಹಂಗ ಹೊಲಿಗೆಗಳ
ಕೌದಿ ಮಲಗಾಕ ಬಾಳ ಚಂದ.
ಹೊಲಿಗೆ ಮದಲs ಗಟ್ಟಿದs ಮಾತ್ರ
ಹಳಿ ಅರಿವಿಂದs ತೆಗೀತಾರು ಸುಸೂತ್ರ.
ಎಲ್ಲಾ ಕೂಡಿಸಿ ಕೌದಿಗೆ ಅಲಂಕಾರ
ಬರುವಂಗ ಹೊಂದಿಸಿ ಹೊಲಿತಾರ.
ಎಲ್ಲಾ ಮಕ್ಕಳಿಗಿ ಒಂದs ಅಳತಿ ಕೌದಿ
ವರ್ಣಗಳು ಇರ್ತಾವ ಆಜು ಬಾಜು.
ಎಲ್ಲಾ ಜಾತಿ ಅರಿವಿ ಇಲ್ಲಿ ಬರೀ ಚಿಂದಿ.
ಅದರಾಗs ಮಲಗೋದು ಬಾಳ ಮೋಜು.
ಒಂದs ಬಣ್ಣದ ಚಾದರ ಹರದೈತಿ ನಡಬರಕ.
ಬಣ್ಣ ಬಣ್ಣದ ಕೌದಿ ಬೇಕಾಗೇತಿ ಬಳಗಕ.
ಬಾಳ ಸುಖ ನಿದ್ದಿ ಬರತೈತಿ ಮಲಗೂದಕ.
ನಮ್ಮವ್ವನ ಕೌದಿ ಬೇಕಲಾs ಈ ಲೋಕಕ.
- ಮಹಾಂತೇಶ ಬಸಪ್ಪ ಬಾಳಿಗಟ್ಟಿ
Super sir
ಸೂಪರ್ ರೀ sir