ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಊರುಗೋಲಿರದ ವೃದ್ಯಾಪ್ಯ
ವೃದ್ಧಾಪ್ಯದಲ್ಲಿ ಬೇಕು ಊರುಗೋಲು
ಊರು ದೂರಾದಾಗ ನಡೆಗೆ ಜೊತೆಯಾಗಲು
ನನ್ನವರು ಎಂಬವರು ಯಾರೂ ಇಲ್ಲ
ಕೋಲು ಸಹಕರಿಸಿದರೆ ನಡೆದೇನಲ್ಲ
ಯವ್ವನದಿ ಎಲ್ಲರಿಗೂ ನಾ ಚಂದ ಕಂಡೆ
ದಿನವೂ ಮೃಷ್ಟಾನ್ನದ ಸವಿಯ ಉಂಡೆ
ಅಪ್ಪಮ್ಮನಿಂದೆಲ್ಲ ಪಡೆದುಕೊಂಡೆ
ಒಡಹುಟ್ಟಿದವರನ್ನು ಬೇಡವೆಂದೆ
ನನ್ನದು ನಾನೆಂಬ ಅತಿ ಅಭಿಮಾನದಿಂದ
ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ
ಒಲೈಸಿದೆ ನಾ ಹೆತ್ತವರನೂ ಮೋಸದಿಂದ
ನಾನೇ ಬೆಳೆಸಿದ ಮಗ ನನ್ನ ಹೊರದಬ್ಬಿದ
ನನ್ನೆಲ್ಲಾ ಆಸ್ತಿಯನು ದಾನ ಮಾಡಿದ
ತಾ ದುಡಿದ ಆಸ್ತಿಯಲ್ಲಿ ಮನೆ ಮಾಡಿದ
ಹೆತ್ತವ್ವನ ಬಲು ಮುದದಿ ಕಾಪಾಡಿದ
ನನಗ್ಯಾರ ಹಂಗಿಲ್ಲ ನನಗೇಕೆ ನೀವೆಲ್ಲ
ನನ್ನ ಕಂಪೌಂಡಿನಲ್ಲಿ ನನ್ನ ಜಗತ್ತೆಲ್ಲ
ಎಂದಿದ್ದ ನನಗೆ ಇಂದು ತಿಳಿಯಿತಲ್ಲ
ಅಂತಸ್ತು ದವಲತ್ತು ಶಾಶ್ವತವಲ್ಲ
ಕೊನೆಗಾಲಕಿರಬೇಕು ತಾಳ್ಮೆ ಸಮಾಧಾನ
ಎಲ್ಲರೊಳು ಬೆರೆವ ಗುಣವೇ ಪ್ರಧಾನ
ಊರುಗೋಲಿಲ್ಲದಿರೆ ವೃದ್ಧಾಪ್ಯ ಕ್ಷೀಣ
ಯವ್ವನವು ಜೀವನದ ಸಣ್ಣ ತಿರುವಣ್ಣ
ಶಾಲಿನಿ ಕೆಮ್ಮಣ್ಣು