ಶಾರದಜೈರಾಂ, ಬಿ .ಚಿತ್ರದುರ್ಗ
ಕನ್ನಡೋತ್ಸವ
ನಿರಂತರವಾಗಿರಲಿ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೆನಪಾಗುವುದು ಈ ಆಚರಣೆ, ಅನುಸರಣೆ ಈಗಷ್ಟೇ ಇರದೇ ಸದಾ ಜಾಗೃತವಾಗಿರಲಿ ನಮ್ಮಗಳ ಹೃದಯಗಳಲ್ಲಿ.ಕನ್ನಡ ವಿಪುಲವಾಗಿದೆ ಸಾಕಷ್ಟು ಮಹನೀಯರು ಕನ್ನಡದ ಏಳಿಗೆಗೆ ಶ್ರಮಿಸಿದ್ದಾರೆ ಬೆಳೆಸಿದ್ದಾರೆ ನಾವು ಬೆಳೆಸದಿದ್ದರೂ ಪರ್ವಾಗಿಲ್ಲ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಗುರುತರವಾದ ಜವಾಬ್ದಾರಿ.ಕೆಲವೆಡೆ ಕನ್ನಡ ಉಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂಬ ಕೂಗು ಕೇಳುವುದು ಸರ್ವೇಸಾಮಾನ್ಯ ಆದರೆ ನಿಜಕ್ಕೂ ನಾವುಗಳು ನಾಚಿಕೆಪಟ್ಟುಕೊಳ್ಳುವಂತಹ ಸಂಗತಿ ಏಕೆಂದರೆ ಕನ್ನಡ ನಮ್ಮ ಎದೆಯ ಧ್ವನಿ ಸರಳ, ಸುಲಲಿತ ಸುಂದರ ಕಾವ್ಯದಂತಿದೆ ನಮ್ಮ ಇಹವ ತೊರೆದಂತೆ ಮರೆತರೆ.ಕನ್ನಡ ಬೆಳೆಸುವಲ್ಲಿ ಅಸಾಮಾನ್ಯ ಹೋರಾಟಗಳು ನಡೆದವು.ಅದರಲ್ಲಿ ಕೆಲವೊಬ್ಬ ಮಹನೀಯರ ಮೇರು ನುಡಿಗಳು ಪ್ರಸ್ತಾಪಿಸುವೆ.
ಮೊದಲನೆಯದಾಗಿ ಆದಿಕವಿ ಪಂಪ ನುಡಿದಂತೆ ಆರಂ ಅಂಕುಶಂ ಇಟ್ಟು ತಿವಿದೊಡೆ ನೆನಪಾಗುವುದು ಎನ್ನ ಬನವಾಸಿ ದೇಶಂ ಎಂಬಂತೆ ಈ ಕನ್ನಡ ನಾಡ ಕಂಪು ಅಂಥಾದ್ದು.
ವಿಜಯನಗರದ ವಿರೂಪಾಕ್ಷ ದೇವಾಲಯಕ್ಕೆ ತೆರಳಿ ತಾಯಿ ಭುವನೇಶ್ವರಿಯ ಪೂಜೆ ಮಾಡಿದ್ದಾಗಿ ನಿಂದು ಕನ್ನಡದ ಕುಲಪುರೋಹಿತ ಎಂದೇ ಖ್ಯಾತರಾದ ಆಲೂರು ವೆಂಕಟರಾಯರು ಕನ್ನಡದಲ್ಲಿ ಏನಿದೆ ಎಂದು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದವರಿಗೆ ಕನ್ನಡದಲ್ಲಿ ಏನಿಲ್ಲ ಎಲ್ಲವೂ ಇದೆ ಎಂದು ಸಾಬೀತುಪಡಿಸಿದರು.
ಆಡುಮಾತಿನ ರತ್ನನ್ ಪದಗಳ ಬಳಕೆಯು ಮೂಲಕ ಜನಪ್ರಿಯತೆ ಪಡೆದ ಜಿ.ಪಿ.ರಾಜರತ್ನಂ ಅವರು ನರಕಕ್ಕೆ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ಯೊಲ್ಯಾಕಿದ್ರೂನೆ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ,ಪರಪಂಚ ಇರೋತನಕ ಕನ್ನಡ ಪದಗಳು ನುಗ್ಗಲಿ ಎಂದರು.
ಕಾದಂಬರಿ ಸಾರ್ವಭೌಮ ಅನಕೃ ಅವರು ಹೇಳಿರುವಂತೆ ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ ಆದರೆ ನನಗಿರುವುದು ಒಂದೇ ಕನ್ನಡ.ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರು ಇರಲಿ ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ ಮಾತೃಭಾಷೆಯನ್ನು ಮೆಟ್ಟಿ ಮುನ್ನುಗ್ಗುವುದು ಸರಿಯಲ್ಲ.
ಪಂಜೆ ಮಂಗೇಶರಾಯರು ಒಮ್ಮೆ ರಾಯಚೂರಿನ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ನನಗೀಗ ಇರುವುದು ಒಂದೇ ಆಸೆ ನನ್ನ ಕಡೆಯ ಗಳಿಗೆಯಲ್ಲೂ ನನ್ನ ನಾಲಿಗೆ ಕೃಷ್ಣ ಕೃಷ್ಣಾ ಎಂದು ನುಡಿಯುವಂತೆ ಕನ್ನಡ ಕನ್ನಡ ಎಂದು ನುಡಿಯಲಿ ಎಂದಿದ್ದರು.
ಕೊನೆಯದಾಗಿ ರಾಷ್ಟ್ರ ಕವಿ ಕುವೆಂಪು ಹೇಳಿದಂತೆ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡವಾಗಿರು,ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀ ಕಲ್ಪತರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ.ಕನ್ನಡವೇ ನಿತ್ಯ ನೂತನ ಪಸರಿಸಲಿ ಎಲ್ಲೇಡೆ ಸದಾ ಮನವ ತಣಿಸುತ್ತಿರಲಿ ಜೈ ಕನ್ನಡಾಂಬೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಶಾರದಜೈರಾಂ, ಬಿ .ಚಿತ್ರದುರ್ಗ
ಗುಡ್