ಮಕ್ಕಳಸಂಗಾತಿ
ಸವಿತಾ ಮುದ್ಗಲ್ ಅವರ ಲೇಖನ
ಶಿಕ್ಷಕರು ಮಕ್ಕಳಿಗೆ
ಹೊಡೆಯಬಾರದೇ?.
ನಿನ್ನೆ ನನ್ನ ಮಗ ukg ಸ್ಟೂಡೆಂಟ್ ಅವನು, ರಾತ್ರಿ ಅವನಿಗೆ ಸ್ವಲ್ಪ ಜ್ವರ ಹಾಗೂ ನೆಗಡಿ ಬಂದಿದ್ದರಿಂದ ನಾಳೆ ಶಾಲೆಗೆ ಹೋಗೋದಿಲ್ಲ ಅಂತ ಹೇಳಿದ ಹಾಗೆ ಅಳಲು ಶುರು ಮಾಡಿದ, ಯಾಕೆ ಅಂತ ಕೇಳಿದ್ದಕ್ಕೆ, ಇವತ್ತು ಶಾಲೆಲಿ…. Miss ತಲೆಗೆ ಹೊಡೆದ್ರು ಮಮ್ಮಿ ಅಂತ ಕಣ್ಣೀರು ಹಾಕಲು ಮನಸ್ಸಿಗೆ ಬೇಜಾರ್ ಆಯ್ತು.
ಯಾಕೆ ಹೊಡೆದ್ರು ಪುಟ್ಟ ಅಂತ ಕೇಳಿದೆ… ಪಕ್ಕದಲ್ಲಿರುವ ನನ್ನ ಫ್ರೆಂಡ್ ಜೊತೆಗೆ ಮಾತಾಡ್ತಾ ಇದ್ದೆ, ನೋಡಿ ತಲೆಗೆ ಕೈಯಿಂದ ಜೋರಾಗಿ ಹೊಡೆದ್ರು ಅಂತ ಹೇಳಿದ.
ಆಗ ನಾನು… ಹೌದು miss ಸರಿಯಾಗಿ ಒಡೆದಿದಾರೆ ಮಾತಾಡೋದು ತಪ್ಪು ಪುಟ್ಟ ಆಗೆಲ್ಲ class ನಲ್ಲಿ ಮಾತಾಡತಾ ಇದ್ರೆ ಬೇರೆಯವರಿಗೂ ಡಿಸ್ಟರ್ಬ್ ಆಗುತ್ತೆ ಜೊತೆಗೆ ಟೀಚರ್ಗು ಪಾಠ ಮಾಡಲು ತೊಂದರೆ ಆಗುತ್ತೆ, ಸುಮ್ಮನೆ ಕೂರಬೇಕು ಆಯ್ತ ಅಂದಿದ್ದಕ್ಕೆ ಹು ಅಂತ ಹೇಳಿದ.
ಬೆಳಿಗ್ಗೆ ಆದ ಮೇಲೆ ತಾನೇ ಶಾಲೆಗೆ ಹೋಗ್ತೀನಿ ಅಂದಾಗ ಸರಿ ಪುಟ್ಟ ಅಂತ ಹೇಳಿ, ಸ್ನಾನ ಮಾಡಿಸಿದೆ. ರೆಡಿ ಆಗಿ ಹೋದ.
ಅವನ ಪ್ರಶ್ನೆಗೆ ಈ ಬರಹ..
ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಹೊಡೆಯಬಾರದೆ?? ಹೌದು ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ದಂಡಿಸುವಂತಿಲ್ಲ. ಒಂದು ವೇಳೆ ಅವರು ಒಡೆದರು ಅವರಿಗೆ ಶಿಕ್ಷೆ ಉಂಟಾಗುತ್ತೆ.
ನಮ್ಮ ಶಾಲಾ ದಿನಗಳಲ್ಲಿ ಕಲಿಕಾ ಕ್ರಮವೇ ಬೇರೆ ಇತ್ತು. ಶಾಲೆಗೆ ಸ್ವಲ್ಪ ತಡ ಮಾಡಿದರು ಗೇಟ್ ಲಾಕ್ ಮಾಡಿ ನಮ್ಮನ್ನು ಸಾಲಾಗಿ ನಿಲ್ಲಿಸಿ ಬಡಿಗೆಯಿಂದ ಪಿ ಟಿ ಸರ್ ನಮಗೆಲ್ಲ ಹೊಡೆಯುತಿದ್ದರು.
ನಂತರ ಮರಳಿನಲ್ಲಿ ಮೊಣಕಾಲೂರಿ ನಡೆಯಬೇಕಿತ್ತು.
ಸ್ವಲ್ಪ ಮುಂದೆ ಹೋದರೆ ಅಲ್ಲಿ ಶಾಲಾ ಪ್ರಿನ್ಸಿಪಲ್ ನಿಂತಿರುತ್ತಿದ್ದರು. ಅವರು ಸಹ ದುರಗಣ್ಣು ಬಿಟ್ಟು ಬೈದ ನಂತರ ಮತ್ತೆ ನಮ್ಮ ಕ್ಲಾಸ್ಗಳಿಗೆ ಸೇರಿಕೊಳ್ಳುತ್ತಿದ್ದೆವು.
ವಾರಕ್ಕೊಮ್ಮೆ ಶಿಸ್ತಿನ ಪ್ರಕಾರ ಕೈ ಮತ್ತು ಕಾಲ್ ಬೆರಳುಗಳಲ್ಲಿ ಉಗುರುಗಳನ್ನು ಚೆಕ್ ಮಾಡುತ್ತಿದ್ದರು ಒಂದು ವೇಳೆ ಅವನು ಕಟ್ ಮಾಡಿಲ್ಲ ಅಂದ್ರೆ ಬಡಿಗೆಯಿಂದ ನಮ್ಮ ಕೈ ಗೆ ಟೇಬಲ್ ಮೇಲೆ ಇಟ್ಟು ಒಡೆಯುತ್ತಿದ್ದರು. ಕೈಗಳು ಪೂರ್ಣ ಮಡಿಚತೆ ಬರೆಯಲು ಬರುತ್ತಿರಲಿಲ್ಲ.
ನಂತರ ಸರಿಯಾದ ಪಾಠ, ಪ್ರಶ್ನೆಗಳಿಗೆ ಉತ್ತರ ನೀಡಿಲ್ಲವೆಂದರೆ, ಡಿಕ್ಟೇಶನ್ ಕೊಟ್ಟಾಗ ಸರಿಯಾದ ಪದಗಳನ್ನು ಬರೆಯದಿದ್ದರೆ, ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ರಿಬ್ಬನ್ ಇಲ್ಲದೆ ಜಡೆ ಹಾಕಿದಾಗ ನಮಗೆ ಶಿಕ್ಷಕರಿಂದ ಖಂಡಿತ ಏಟು ಬೀಳುತ್ತಿತ್ತು.
ಆದರೆ ಈಗ ಎಲ್ಲ ಉಲ್ಟಾ ಆಗಿದೆ. ಮೊದಲೇ ನಾವು ಶಿಕ್ಷಕರ ಬಳಿ ಹೋಗಿ ಹೇಳುತ್ತೇವೆ. ಮ್ಯಾಮ್ ಅಥವಾ ಸರ್ ದಯವಿಟ್ಟು ನಮ್ಮ ಮಗ/ಮಗಳನ್ನು ಹೊಡಿಬೇಡಿ ಅಂತ.
ಮಕ್ಕಳನ್ನು ದಂಡಿಸದೆ ಅವರಿಗೆ ಕಲಿಸುವುದು ಒಮ್ಮೆ ಅಸಾಧ್ಯವಾಗಿ ಬಿಡುತ್ತೆ.
ಪೊಲೀಸ್ರಿಂದ ಲಾಟಿಯನ್ನು, ಡಾಕ್ಟರ್ಯಿಂದ ಸ್ಟೇಟಸ್ಕೋಪನ್ನು, ಲಾಯರ್ ಇಂದ ಕೋಟನ್ನು ಕಸಿದುಕೊಂಡು ಅವರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವೇ???.
ಮಕ್ಕಳಿಗೆ ಮನೆಯಲ್ಲಿ ತಂದೆ ತಾಯಿಯರು ಆಮೇಲೆ ಕೈ ಮಾಡುತ್ತಾರೆ ಅದೇ ರೀತಿ ಶಿಕ್ಷಕರು ತಮಗೆ ಸಿಟ್ಟು ಬಂದಾಗ ಅಪರೂಪಕ್ಕೆ ಅಥವಾ ಅನಾವಶ್ಯಕವಾಗಿ ಅಥವಾ ಕೈತಪ್ಪಿ ಹೊಡೆದರೆ ಅದಕ್ಕೆ ದಂಡಿಸ ಬೇಕೆ?? ತಪ್ಪಲ್ಲವೇ.
ಜಾಣರಿಗೆ ಮಾತಿನ ಪೆಟ್ಟು ಕೋಣನಿಗೆ ಲತ್ತಿಯ ಪೆಟ್ಟು ಅನ್ನುವ ಹಾಗೆ ಕೆಲವೊಂದು ಮಕ್ಕಳು ಹೊಡೆಯದೆ ಒಮ್ಮೆ ವಿಷಯಗಳನ್ನು ಕಲಿಯುವುದಿಲ್ಲ.
ಒಂದು ಜಾಣ ಮಕ್ಕಳು ಸೂಕ್ಷ್ಮತೆಯಿಂದ ಕಲಿತುಕೊಂಡರೆ ಕೆಲವೊಂದು ಮಕ್ಕಳು ಗಟ್ಟಿತನದಿಂದ ಜೋರಾಗಿ ಹೇಳಿದಾಗ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕರ್ಜಗಿ ಸರ್ ನುಡಿಯಲ್ಲಿ ಮೊನ್ನೆ ಒಂದು ಮಾತನ್ನು ಕೇಳಿದೆ ತುಂಬಾ ಮನಸ್ಸಿಗೆ ಇಷ್ಟವಾಯಿತು ಅದನ್ನು ನಿಮ್ಮ ಬಳಿ ಹೇಳುತ್ತಿದ್ದೇನೆ.
ಮಕ್ಕಳ ಮುಂದೆ ಯಾವುದೇ ವಿಷಯಗಳನ್ನು ಮಾತಾಡಬಾರದು ಅಂತೆ. ಮನೆಯ ವಿಶವನ್ನಾಗಲಿ ಯಾವುದೇ ಸಂಬಂಧಪಟ್ಟ ವಿಷಯಗಳು ಮಕ್ಕಳ ಮುಂದೆ ಚರ್ಚಿಸಬಾರದೆಂದು ಹೇಳಿದರು.
ಒಂದು ಮನೆಯಲ್ಲಿ ಗಂಡ ಹೆಂಡತಿ ಜಗಳ ಮಾಡುವಾಗ ಹೆಂಡತಿಯು ಗಂಡನಿಗೆ ಹೇಳಿದಳಂತೆ ಇನ್ನು ಒಂದು ತಿಂಗಳು ಕಷ್ಟ ತಪ್ಪಿದ್ದಲ್ಲ ಯಾಕಂದ್ರೆ ನಿಮ್ ತಂದೆ ತಾಯಿ ಪುನಃ ಬರ್ತಾರಲ್ಲ ಅದಕ್ಕೆ!!! ಎಂದು ಹೇಳುವ ಈ ಮಾತನ್ನು ಅಲ್ಲೇ ಬಾಗಿಲ ಬಳಿ ಇದ್ದ ಆಕೆಯ ಮಗನು ಕೇಳಿಸಿಕೊಂಡಿರುತ್ತಾನೆ.
ಸ್ವಲ್ಪ ಸಮಯದ ಬಳಿಕ ಈ ಹುಡುಗನ ಅಜ್ಜ ಮತ್ತು ಅಜ್ಜಿಯು ತಮಗೆ ಟ್ರೈನ್ ಮಿಸ್ಸಾದ ಕಾರಣ ಪುನಃ ಬ್ಯಾಗ್ ಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಬಂದಿದ್ದರಂತೆ. ಮನೆಯೊಳಗೆ ಬಂದು ಕುರ್ಚಿ ಮೇಲೆ ಕುಳಿತ ಕ್ಷಣದಲ್ಲಿ ಮೊಮ್ಮಗನು ಅಜ್ಜನ ಮುಂದೆ ನಿಂತು ನೀವ್ಯಾಕೆ ವಾಪಸ್ ಬಂದ್ರಿ ಮನೆಗೆ ಅಂತ ಕೇಳಿದ್ನಂತೆ!! ಅಲ್ಲೋ ಈಗ್ ತಾನೆ ಬಂದಿವಿ ಹೋಗುವ ವಿಷಯ ಯಾಕೆ ಅಂತ ಅವರು ಅಜ್ಜ ಆ ಹುಡುಗನ ಮುಂದೆ ಹೇಳಿದ್ನಂತೆ.
ಇಲ್ಲ ಮಮ್ಮಿ ಬೆಳಿಗ್ಗೆ ಅಪ್ಪನ ಮುಂದೆ ಇನ್ನೊಂದ್ ತಿಂಗಳ ಕಷ್ಟ ತಪ್ಪಿದ್ದಲ್ಲ ನಿಮ್ಮಪ್ಪಮ್ಮ ಬರ್ತಾರೆ ಅಂತ ಹೇಳ್ತಾ ಇದ್ಲು! ಅಂತ ಹೇಳಿದಾಗ ಅಜ್ಜ ಅಜ್ಜಿಯರಿಗೆ ಮನಸ್ಸಿನಲಿ ಅಸಮಾಧಾನ ಉಂಟಾಯಿತು.
ಈ ಮಾತನ್ನು ಕೇಳಿದ ಕೂಡಲೇ ಅಲ್ಲಿದ್ದ ಅವರಪ್ಪ ಬಂದು ಮಗನಿಗೆ ಹೊಡೆಯಲು ಶುರು ಮಾಡಿದನಂತೆ. ಅವಕಾಶ ಇದ್ದಂತೆ ನೀವು ದೊಡ್ಡವರಾಗಿ ಮಕ್ಕಳ ಮುಂದೆ ಏನು ಮಾತಾಡಬೇಕೆಂದು ತಿಳಿಯದೆ ಈ ರೀತಿ ಹೊಡೆಯುವುದು ತಪ್ಪೆ ಅಂತ ಹೇಳಿದಾಗ ಇಬ್ಬರು ಮೌನ ವಹಿಸಿದ್ದರಂತೆ.
ಏನೇ ಆಗಲಿ ಎಲ್ಲಾ ಕಲಿಯುವುದು ನಮ್ಮ ಮಕ್ಕಳು ನಮ್ಮಿಂದಲೇ, ಹಾಗೂ ಸುತ್ತಮುತ್ತಲಿನ ವಾತಾವರಣದ ಜನರನ್ನು ನೋಡಿ ಸಹ ಕಲಿಯುತ್ತಾರೆ.
ಮಕ್ಕಳ ಆಚಾರ-ವಿಚಾರಗಳನ್ನು ಗಮನಿಸುತ್ತಾ ಅವರ ಆಟೋಪಚಾರಗಳನ್ನು ಗಮನಿಸುತ್ತಾ ಮೈಎಲ್ಲ ಕಣ್ಣಾಗಿಸಿ ನಮ್ಮ ಮಕ್ಕಳನ್ನು ನಾವೇ ಕಾಪಾಡಬೇಕು ಅಲ್ಲವೇ.
ನಮ್ಮ ಮಕ್ಕಳಿಂದ ತಪ್ಪಾದಾಗ ಅದಕ್ಕೆ ಹೊಣೆಗಾರರು ಮೂಲ ತಂದೆ ತಾಯಿಯೆ ಹೊರತು ಶಿಕ್ಷಕರಲ್ಲ!!!!
“ಸಮಯ ಬಂದಾಗ ಅವಶ್ಯಕತೆ ಇದ್ದರೆ ಮಕ್ಕಳ ಮೇಲೆ ಖಂಡಿತ ಒಡೆಯಲಿ ಶಿಕ್ಷಕರು ಅದನ್ನು ಮನ್ನಿಸೋಣ ಅಲ್ಲವೇ”!!
————————————–
ಸವಿತಾ ಮುದ್ಗಲ್