ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ

ಕನ್ನಡ ಭಾಷೆ ಕನ್ನಡಿ ಇದ್ದಂತೆ
ಕವಿ ಮುನ್ನುಡಿಯಂತೆ
ಓದುಗ ಹಿನ್ನುಡಿಯಂತೆ
ಕವಿ ಇಲ್ಲಿ ಕುಶಲ ಚಿಂತಕನಂತೆ
ನಾ.. ಕನ್ನಡ ಕಾವ್ಯ ಕನ್ಯೆಯಂತೆ
ಕೊನೆಯಿಲ್ಲದ ಉತ್ತರವಿಲ್ಲದ ಪಯಣದಂತೆ
ಆದರ್ಶವಾದಿ ಪ್ರೇಮಿಯಂತೆ ಬದುಕಿ ಬಿಡುವೆ ಬದುಕನ್ನ ಈ ನಾಡಲ್ಲಿ ಬದುಕ್ಕೊಂದು ಸಂಕೀರ್ಣವಂತೆ
ನೈತಿಕ ನೆಲೆಗಟ್ಟೆ, ನಾಗರಿಕತೆಯ ಬೇರಂತೆ
ನಾ….ಈ ಕನ್ನಡ ಕಾವ್ಯ ಕನ್ಯೆಯಂತೆ
ನನ್ನ ಕನ್ನಡ ಚಿಂತನೆಯು ಧೀಶಕ್ತಿಯಂತೆ ಆಲಂಗಿಸಿ ಕೊಂಡು ಬಿಡಲೇ ಸಾಂಸ್ಕೃತಿಕ ಸಂಪತ್ತನ್ನ ನನ್ನ ಸರ್ವಸ್ವ ಎಂಬಂತೆ
ಧಾರೆ ಎರೆದು ಬಿಡಲೇ ನನ್ನನ್ನು ಸಮಾಜದ ಒಳಿತಿಗೆ ಎಂಬಂತೆ
ಹಾಗೇಂದು ನಾ ಎಂದು ಆಗಲಾರೆ ಸಂಚಾರಿ ಪಕ್ಷಿಯಂತೆ
ಸಂಚಾರಿ ಪಕ್ಷಿಯಂತೆ
ಬೆರೆತು ಬದುಕಿದೆ ನಾ ಕನ್ನಡ ಕಾವ್ಯ ಕಸ್ತೂರಿಯಂತೆ
ನಾ…ಈ ಕನ್ನಡ ಮಣ್ಣಿನ
ಕನ್ಯೆ ಯಂತೆ


Leave a Reply

Back To Top